Udupi: ಕೋಡಿಯಲ್ಲಿ ಕಡಲಾಮೆಯ ಮೊಟ್ಟೆಗಳ ರಕ್ಷಣೆಗೆ ವ್ಯಾಪಕ ಪ್ರಶಂಸೆ

By Suvarna News  |  First Published Dec 28, 2022, 10:52 AM IST

ಕಡಲ ಆಮೆಗಳ ರಕ್ಷಣೆ ಅತಿ ಮುಖ್ಯ, ಅಪರೂಪದ ಜೀವಿಗಳು ಮೊಟ್ಟೆ ಇಡಲೆಂದೆ ಕೆಲವು ಜಾಗಗಳನ್ನು ಸುರಕ್ಷಿತ ಎಂಬ ಕಾರಣಕ್ಕೆ ಆಯ್ದುಕೊಳ್ಳುತ್ತವೆ. ಕಡಲ ಆಮೆಯ ಸಂರಕ್ಷಣೆಯ ದೃಷ್ಟಿಯಿಂದ ಮೊಟ್ಟೆಗಳ ರಕ್ಷಣೆಯು ಅತಿ ಮುಖ್ಯ. 


ಉಡುಪಿ (ಡಿ.28): ಕಡಲ ಆಮೆಗಳ ರಕ್ಷಣೆ ಅತಿ ಮುಖ್ಯ, ಅಪರೂಪದ ಜೀವಿಗಳು ಮೊಟ್ಟೆ ಇಡಲೆಂದೆ ಕೆಲವು ಜಾಗಗಳನ್ನು ಸುರಕ್ಷಿತ ಎಂಬ ಕಾರಣಕ್ಕೆ ಆಯ್ದುಕೊಳ್ಳುತ್ತವೆ. ಕಡಲ ಆಮೆಯ ಸಂರಕ್ಷಣೆಯ ದೃಷ್ಟಿಯಿಂದ ಮೊಟ್ಟೆಗಳ ರಕ್ಷಣೆಯು ಅತಿ ಮುಖ್ಯ. ಇತ್ತೀಚೆಗೆ ಬೀದಿ ನಾಯಿಗಳಿಂದ ಕಡಲ ಆಮೆಯ ಮೊಟ್ಟೆಗಳನ್ನು ಸಂರಕ್ಷಿಸಿ ಕೆಲ ಯುವಕರ ಪುಣ್ಯ ಕಾರ್ಯ ನಡೆಸಿದ್ದಾರೆ.

ಕಡಲಾಮೆಯ ಮೊಟ್ಟೆಗಳನ್ನು ಸ್ಥಳೀಯರ ನೆರವಿನಿಂದ ಎಫ್‌ಎಸ್‌ಎಲ್ ತಂಡದ ಸದಸ್ಯರು ‌ಕಾಪಾಡಿದ‌ ಘಟನೆ ಕೋಡಿ ಕಡಲ ತೀರದಲ್ಲಿ ನಡೆದಿದೆ. ಕುಂದಾಪುರದ ಕೋಡಿ ಕಡಲ ಕಿನಾರೆಗೆ ಮೊಟ್ಟೆಯಿಡಲು ಆಮೆಗಳು ಬರುವುದು ಸಹಜ, ಆದರೆ ಇತ್ತೀಚೆಗೆ ಬೀದಿ ನಾಯಿಗಳ ಕಾಟ ಹೆಚ್ಚಾದ ಹಿನ್ನಲೆಯಲ್ಲಿ ಕಡಲಾಮೆಗಳು ಭಯದಿಂದ ದಡಕ್ಕೆ ಆಗಮಿಸದ ಸ್ಥಿತಿ ನಿರ್ಮಾಣವಾಗಿದೆ. 

Tap to resize

Latest Videos

undefined

ಉಡುಪಿ: ಕರಾವಳಿಯಲ್ಲಿ ಪಕ್ಷಿಗಳ ಕಲರವ- ಪಕ್ಷಿ ವೀಕ್ಷಣೆಗೆ ಇದು ಸಕಾಲ

ತಡರಾತ್ರಿ ಮೊಟ್ಟೆಯಿಡಲು ದಡಕ್ಕೆ ಆಗಮಿಸಿದ ಕಡಲಾಮೆ, ನಾಯಿಗಳ ಕಾಟದಿಂದ ಕಂಗಾಲಾಗಿ ಮೊಟ್ಟೆ ಇಟ್ಟು ತೆರಳಿತ್ತು. ನಾಯಿಗಳ ಕಿರುಚಾಟ ಗಮನಿಸಿದ ಸ್ಥಳೀಯರಿಗೆ ಕಡಲಾಮೆ ಮೊಟ್ಟೆ ಪತ್ತೆಯಾಗಿದೆ. ಬೀದಿ ನಾಯಿಗಳಿಂದ ಈ ಅಪರೂಪದ ಮೊಟ್ಟೆಗಳನ್ನು ಸಂರಕ್ಷಿಸುವುದು ಅತಿ ಮುಖ್ಯವಾಗಿತ್ತು.

ಈ ಕುರಿತು ಎಫ್‌ಎಸ್‌ಎಲ್ ತಂಡದ ಸದಸ್ಯರಿಗೆ ಸ್ಥಳೀಯರು ಮಾಹಿತಿ ನೀಡಿದ ಬೆನ್ನಲ್ಲೆ, ಸ್ಥಳಕ್ಕೆ ಆಗಮಿಸಿದ ಎಫ್‌ಎಸ್‌ಎಲ್ ತಂಡದ ಸದಸ್ಯರು ಕಡಲಾಮೆ ಮೊಟ್ಟೆಗಳನ್ನು ರಕ್ಷಿಸುವ ಕಾರ್ಯ ಮಾಡಿದ್ದಾರೆ. ಸುಮಾರು 90 ಕೆಜಿ ತೂಕದ ಕಡಲಾಮೆ 154 ಮೊಟ್ಟೆಗಳನ್ನು ಇಟ್ಟಿದ್ದು, ಅಷ್ಟೂ ಮೊಟ್ಟೆಗಳನ್ನು ಎಫ್‌ಎಸ್‌ಎಲ್ ತಂಡ ಕೋಡಿ ಪ್ರಾಥಮಿಕ ಕೇಂದ್ರದ ಬಳಿ ಹ್ಯಾಚರ್ ನಿರ್ಮಿಸಿ ಅದರೊಳಗಿಟ್ಟು ರಕ್ಷಣೆ ಮಾಡಲಾಗಿದೆ.

ಕೋಡಿ ಕಡಲ ತಡಿಯಲ್ಲಿ ಬೀದಿನಾಯಿಗಳ ಕಾಟ ಅತಿಯಾಗಿದ್ದು, ಈ ಹಿಂದೆ ಮೊಟ್ಟೆಯಿಡಲು ಬಂದಿದ್ದ ಕಡಲಾಮೆ ಮೇಲೆ ದಾಳಿ ನಡೆಸಿ ಕೊಂದು ಹಾಕಿದ್ದವು. ಆ ಬಳಿಕ ಸತ್ತ ಕಡಲಾಮೆಯ ಹೊಟ್ಟೆಯಿಂದ 42 ಜೀವಂತ ಮೊಟ್ಟೆಗಳನ್ನು ರಕ್ಷಣೆ ಮಾಡಲಾಗಿತ್ತು, ಆದರೆ ಮತ್ತೆ ಹ್ಯಾಚರ್ ಮೇಲೆ ನಾಯಿಗಳು ದಾಳಿ ಮಾಡಿ, 24 ಮೊಟ್ಟೆಗಳನ್ನು ಹಾಳು ಮಾಡಿದ್ದವು. 

ನರೇಂದ್ರ ಮೋದಿ ಸರ್ಕಾರದ ಹಣ ಸಿದ್ದರಾಮಯ್ಯರದ್ದು ಹೆಸರು: ಶೋಭಾ ಕೆರಂದ್ಲಾಜೆ ಕಿಡಿ

ಈ ಬಗ್ಗೆ ಸ್ಥಳೀಯಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಕಡಲಾಮೆಯ ರಕ್ಷಣಾ ತಂಡ ಮನವಿ ಮಾಡಿದೆ. ಕಡಲ ಆಮೆಯ ಸಂರಕ್ಷಣೆಯ ಬಗ್ಗೆ ನಿರಂತರ ಜಾಗೃತಿ ಕಾರ್ಯಕ್ರಮ ಪರಿಣಾಮಕಾರಿಯಾಗಿದ್ದು, ಯುವಕರ ಈ ಕೆಲಸದ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

click me!