ಮೇ.4ರ ಬಳಿಕ ಸಿಎಂ ಸಿದ್ದರಾಮಯ್ಯ ಅವರ ಕುರ್ಚಿ ಇರುತ್ತೋ ಗೊತ್ತಿಲ್ಲ: ಸಂಸದ ಬೊಮ್ಮಾಯಿ

Published : May 01, 2026, 09:46 PM IST
Basavaraj Bommai

ಸಾರಾಂಶ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಮುಖ್ಯಮಂತ್ರಿ ಆಗುವ ಆಸೆ ಇದೆ ಅಂದಿದ್ದಾರೆ, ಮೇ 4ರ ನಂತರ ಸಿಎಂ ಸಿದ್ದರಾಮಯ್ಯ ಅವರ ಕುರ್ಚಿ ಇರುತ್ತದೆಯೋ ಇಲ್ಲವೊ ಗೊತ್ತಿಲ್ಲ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಹಾವೇರಿ (ಮೇ.01): ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಮುಖ್ಯಮಂತ್ರಿ ಆಗುವ ಆಸೆ ಇದೆ ಅಂದಿದ್ದಾರೆ, ಮೇ 4ರ ನಂತರ ಸಿಎಂ ಸಿದ್ದರಾಮಯ್ಯ ಅವರ ಕುರ್ಚಿ ಇರುತ್ತದೆಯೋ ಇಲ್ಲವೊ ಗೊತ್ತಿಲ್ಲ. ನಾವೂ ಯಾವ ಬದಲಾವಣೆ ಆಗಲಿದೆ ಎಂದು ನಿರೀಕ್ಷೆ ಮಾಡುತ್ತಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುವ ವೇಳೆ ಪಂಚರಾಜ್ಯ ಚುನಾವಣೆಗಳ ಎಕ್ಸಿಟ್ ಪೋಲ್ ಕುರಿತು ಪ್ರತಿಕ್ರಿಯಿಸಿದರು.

ಆಸ್ಸಾಂನಲ್ಲಿ ಮೂರನೇ ಎರಡರಷ್ಟು ಬಹುಮತ ನಮಗೆ ಬರಲಿದೆ. ನಮ್ಮ ನಿರೀಕ್ಷೆಯಂತೆ ಎಕ್ಸಿಟ್ ಪೋಲ್ ಬಂದಿದೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯವರು ಎಷ್ಟೇ ಸಮಸ್ಯೆ ಮಾಡಲಿ, ಏನೇ ಹಿಂಸೆ ಕೊಡಲಿ, ಜನ ಬದಲಾವಣೆ ಬಯಸಿದ್ದಾರೆ. ಅಲ್ಲಿನ ಜನ ಶೇ. 90ರಷ್ಟು ಮತದಾನ ಮಾಡಿದ್ದಾರೆ. ಪಶ್ಚಿಮ ಬಂಗಾಳ ಫಲಿತಾಂಶ ದೇಶಕ್ಕೆ ದಿಕ್ಸೂಚಿ ಆಗಲಿದೆ. ಪಂಚರಾಜ್ಯ ಫಲಿತಾಂಶ ದೇಶಾದ್ಯಂತ ಬಿಜೆಪಿ ಸಾಧನೆಯ ಹೆಜ್ಜೆ ಆಗಿದೆ ಎಂದು ಹೇಳಿದರು.

ಸರ್ಕಾರ ಸತ್ತಿದೆ: ಬೆಂಗಳೂರಿನಲ್ಲಿ ಭಾರಿ ಮಳೆಗೆ ಸಾವು-ನೋವು ಸಂಭವಿಸಿದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸತ್ತಿದೆಯೋ ಬದುಕಿದೆಯೋ ಗೊತ್ತಿಲ್ಲ ಇವರು ಯಾವ ತಯಾರಿಯನ್ನೂ ಮಾಡಿಲ್ಲ. ಭಾರಿ ಮಳೆ ಆಗಬಹುದು ಅಂತ ಹವಾಮಾನ ಇಲಾಖೆ ಹೇಳುತ್ತಲೇ ಬಂದಿದೆ. ಆದರೂ ಯಾವುದೇ ತಯಾರಿ ಮಾಡಿಕೊಂಡಿರಲಿಲ್ಲ. ಈ ಸರ್ಕಾರ ಜನರ ಪಾಲಿಗೆ ಸತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಬದಲಾವಣೆ ಗಾಳಿ: ಇನ್ನು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರ ಅಭಿಮಾನೋತ್ಸವದ ಮೂಲಕ ರಾಜ್ಯದ ಮೂಲೆ ಮೂಲೆಗೂ ಸಂದೇಶ ಕೊಡುತ್ತೇವೆ. ರಾಜ್ಯದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ಬಹಳ ದೊಡ್ಡ ರಾಜಕೀಯ ಬದಲಾವಣೆ ಆಗಲಿದೆ. ಈ ಕಾರ್ಯಕ್ರಮ ಬಿಜೆಪಿ ಆಕಾಶದೆತ್ತರಕ್ಕೆ ಹಾರುವ ಕಾರ್ಯಕ್ರಮ. ಬಿ.ಎಸ್ ಯಡಿಯೂರಪ್ಪ ಅಭಿಮಾನೋತ್ಸವಕ್ಕೆ 10 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ದಾಖಲೆ ಪ್ರಮಾಣದಲ್ಲಿ ಕಾರ್ಯಕ್ರಮ ಆಗಲಿದೆ ಎಂದು ಹೇಳಿದರು.

ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ: ಬಿ.ವೈ.ರಾಘವೇಂದ್ರ

ಈಗಾಗಲೇ ಪಂಚ ರಾಜ್ಯ ಚುನಾವಣೆ ಎಕ್ಸಿಟ್ ಫೋಲ್ ನೋಡಿದ್ದೇವೆ. ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಕಾರ್ಯ ಆಗುತ್ತಿಲ್ಲ. ಕರ್ನಾಟಕದಲ್ಲಿ ಯಾವಾಗ ಚುನಾವಣೆ ಬರುತ್ತೆ ಅಂತ ಜನ ಕಾಯ್ತಿದ್ದಾರೆ. ಅಮಿತ್ ಶಾ ಅವರ ಮುಂದಿನ ದೃಷ್ಟಿ ಕರ್ನಾಟಕ ರಾಜ್ಯವಾಗಲಿದೆ ಎಂದರು.

PREV
Read more Articles on
click me!

Recommended Stories

ಬೆಂಗಳೂರಿನ ಪೀಣ್ಯ ಫ್ಲೈಓವರ್ ಮೇಲೆ 4 ದಿನ ಎಲ್ಲಾ ವಾಹನ ಸಂಚಾರ ಬಂದ್, ಬದಲಿ ಮಾರ್ಗ ಪಟ್ಟಿ
ಬೆಂಗಳೂರು ಮಳೆಯಲ್ಲಿ ನಡುಗುತ್ತಿದ್ದ ಆಟೋ ಚಾಲಕ; ಮನೆಗೆ ತಲುಪಿದ ಮೇಲೆ ಯುವತಿ ಮಾಡಿದ ಕೆಲಸಕ್ಕೆ ನೆಟ್ಟಿಗರು ಫಿದಾ!