ಒಳಮೀಸಲಾತಿ: ಆಳುವ ಸರ್ಕಾರಗಳು ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು, ಮಾದಾರ ಚನ್ನಯ್ಯ ಶ್ರೀಗಳು

Published : Dec 14, 2024, 05:12 PM ISTUpdated : Dec 14, 2024, 06:16 PM IST
ಒಳಮೀಸಲಾತಿ: ಆಳುವ ಸರ್ಕಾರಗಳು ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು, ಮಾದಾರ ಚನ್ನಯ್ಯ ಶ್ರೀಗಳು

ಸಾರಾಂಶ

ಸದನದಲ್ಲಿ ಸಿಎಂ, ಸಚಿವರು ಈ ಬಗ್ಗೆ ಭರವಸೆ ನೀಡಲಿ.  ತಿಂಗಳು, 3 ತಿಂಗಳು, 3 ವರ್ಷದಲ್ಲಿ ಜಾರಿಗೊಳಿಸುತ್ತೇವೆ ಎಂಬುದನ್ನು ಹೇಳಲಿ ಎಂದು ಒತ್ತಾಯಿಸಿದ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು

ಚಿತ್ರದುರ್ಗ(ಡಿ.14):  ಆಳುವ ಸರ್ಕಾರಗಳು ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು. ಚುನಾವಣೆಗೂ ಮುನ್ನ ಒಳಮೀಸಲಾತಿ ಜಾರಿ ಭರವಸೆ‌ ನೀಡಿದ್ದರು. ಚಿತ್ರದುರ್ಗದಲ್ಲೇ ಕಾಂಗ್ರೆಸ್ ಸಮಾವೇಶ ನಡೆಸಿ ಭರವಸೆ ನೀಡಬೇಕು. ನಮ್ಮ ಸಮಾಜದ ನಾಯಕರು ಸರ್ಕಾರ ಒಳ ಮೀಸಲು ಜಾರಿಗೆ ಬದ್ಧವಿದ್ದಾರೆ. ಮಾದಿಗ ಸಮಾಜ ಸಮಾಧಾನದಿಂದ ಇರಬೇಕೆಂದು ಹೇಳುತ್ತಾರೆ. ನಮಗೆ ನಮ್ಮ‌ ಸಮಾಜದ ನಾಯಕರು ಸುದ್ದಿಗೋಷ್ಠಿಯಲ್ಲಿ ಹೇಳಿದರೆ ನಂಬಿಕೆ‌ ಬರದು ಎಂದು ಹೇಳುವ ಮೂಲಕ ಮಾಜಿ ಸಚಿವ ಹೆಚ್. ಆಂಜನೇಯಗೆ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. 

ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಇಂದು(ಶನಿವಾರ) ನಗರದ ತ ರಾ ಸು ರಂಗಮಂದಿರದಲ್ಲಿ ನಡೆದ ಮಾದಿಗ ಸಮಾಜದ ವಕೀಲರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಮಾದಾರ ಚನ್ನಯ್ಯ ಶ್ರೀಗಳು, ಸದನದಲ್ಲಿ ಸಿಎಂ, ಸಚಿವರು ಈ ಬಗ್ಗೆ ಭರವಸೆ ನೀಡಲಿ.  ತಿಂಗಳು, 3 ತಿಂಗಳು, 3 ವರ್ಷದಲ್ಲಿ ಜಾರಿಗೊಳಿಸುತ್ತೇವೆ ಎಂಬುದನ್ನು ಹೇಳಲಿ ಎಂದು ಒತ್ತಾಯಿಸಿದ್ದಾರೆ.

ಒಳ ಮೀಸಲಾತಿ ವಿಚಾರದಲ್ಲಿ ವಿನಾಕಾರಣ ಆಯೋಗ ರಚನೆ: ಸಿದ್ದು ಸರ್ಕಾರದ ವಿರುದ್ಧ ಹರಿಹಾಯ್ದ ಕೋಟ ಶ್ರೀನಿವಾಸ ಪೂಜಾರಿ

ಸದನದಲ್ಲಿ ಬಿಜೆಪಿ ಶಾಸಕ ಬಸಮಗೌಡ ಪಟೀಲ್‌ ಯತ್ನಾಳ್ ಅವರು ಒಳಮೀಸಲಾತಿ ಪ್ರಸ್ತಾಪ ಮಾಡಿದ್ದಾರೆ. ನಮ್ಮ ಸಮಾಜದ ಸಹೋದರ ಶಾಸಕರೇ ಪ್ರತಿರೋಧ ವ್ಯಕ್ತಪಡಿಸಿದ್ದರು. ನಮ್ಮ ಸಮಾಜದಲ್ಲಿ ಹುಟ್ಟಿದವರು ಯಾರೂ ಮಾತಾಡದೆ ಮೌನ ವಹಿಸಿದ್ದರು. ಮಾತಾಡಬೇಕಿದ್ದವರು ಮಾತಾಡದಿದ್ದಾಗ ಹೊರಗಿದ್ದವರು ಮಾತಾಡಬೇಕಾಗುತ್ತದೆ. ನ 16ಕ್ಕೆ ಬೆಳಗಾವಿಯಲ್ಲಿ ಆಂದೋಲನ ಮಾಡಬೇಕಾಗಿ ಬಂದಿದೆ ಎಂದು ಹೇಳಿದ್ದಾರೆ. 

ದತ್ತಾಂಶದ ಬಗ್ಗೆ ಸರ್ಕಾರ, ಸಚಿವರು ಈಗ ಹೇಳುತ್ತಿದ್ದಾರೆ. ಚುನಾವಣೆ ಪೂರ್ವದಲ್ಲೇ ಯಾಕೆ ಈ ಮಾತು ಹೇಳಿಲ್ಲ ಎಂಬುದು ನಮ್ಮ ಪ್ರಶ್ನೆಯಾಗಿದೆ.  ನಮ್ಮವರು 30 ವರ್ಷದಲ್ಲಿ ಅನೇಕ ಸಲ ಲಾಠಿಚಾರ್ಜ್ ಗೆ ಒಳಗಾಗಿದ್ದಾರೆ. ಮಾದಿಗ ಸಮಾಜ ಯಾವತ್ತೂ ಹೋರಾಟ ಬಿಟ್ಟಿಲ್ಲ. ಬಾಗೇವಾಡಿಯಲ್ಲಿ 7 ಜನರ ಪ್ರಾಣ ತ್ಯಾಗ ಆಯಿತು, ಹೋರಾಟ ಬಿಟ್ಟಿಲ್ಲ. ಇನ್ನೆಷ್ಟು ಜನ ಪ್ರಾಣ ತ್ಯಾಗ ಮಾಡುತ್ತಾರೋ ಗೊತ್ತಿಲ್ಲ. ಆ ರೀತಿ ಘಟನೆ ನಡೆಯಬಾರದೆಂಬುದು ನಮ್ಮ ಇಚ್ಛೆ. ನಮ್ಮ ಹೋರಾಟ ಸಂವಿಧಾನ ಬದ್ಧವಾಗಿದ್ದು ಅಂಜುವ ಪ್ರಮೇಯವೇ ಇಲ್ಲ ಎಂದು ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು ಸ್ಪಷ್ಟಪಡಿಸಿದ್ದಾರೆ. 

ಸಿದ್ದರಾಮಯ್ಯಗೆ ನಾಚಿಕೆಯಾಗಬೇಕು: ನಾರಾಯಣಸ್ವಾಮಿ

ಚುನಾವಣೆಗೂ ಮುನ್ನ ಒಳ ಮೀಸಲಾತಿ ಜಾರಿ ಭರವಸೆ ನೀಡಿದ್ದರು. ಮಂಕುಬೂದಿ ಎರಚಿ ಕಾಂಗ್ರೆಸ್ ಅಧಿಕಾರ ಹಿಡಿದಿದೆ. ಮೊದಲ ಕ್ಯಾಬಿನೆಟ್‌ನಲ್ಲೇ ಒಳ ಮೀಸಲಾತಿ ಜಾರಿ ನಿರ್ಧಾರ ಎಂದಿದ್ದರು ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಕಿಡಿ ಕಾರಿದ್ದಾರೆ. 

ಒಳಮೀಸಲಾತಿ ಬಗ್ಗೆ ಮಾತು ಕೊಟ್ಟಂತೆ ನಡೀತೀವಿ, ಎಡಗೈ-ಬಲಗೈ ಸಮುದಾಯಕ್ಕೆ ಸರ್ಕಾರದಿಂದ ನ್ಯಾಯ: ಡಿಸಿಎಂ

ಅಧಿಕಾರ ಹಿಡಿದು 1 ವರ್ಷ 7ತಿಂಗಳಾಯ್ತು, ಈ ಬಗ್ಗೆ ಚರ್ಚೆ ಮಾಡಲಿಲ್ಲ. ಕೇವಲ ಚುನಾವಣೆ, ಮತಕ್ಕಾಗಿ ಆಯೋಗ ರಚಿಸಿದ್ದಾರೆ. ನ.16ಕ್ಕೆ ಬೆಳಗಾವಿಯಲ್ಲಿ ಮಾದಿಗ ಸಮಾಜದಿಂದ ಹಕ್ಕೊತ್ತಾಯ ಮಾಡಲಾಗುವುದು.  ಮಾದಿಗರನ್ನು ಮೂರ್ಖರನ್ನಾಗಿಸಿದ್ದಲ್ಲ, ಕಾಂಗ್ರೆಸ್‌ನವರೇ ಮೂರ್ಖರು. ಸದನದಲ್ಲಿ ಬಿಜೆಪಿ ಶಾಸಕ ಯತ್ನಾಳ್ ಒಳಮೀಸಲಾತಿ ಬಗ್ಗೆ ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ನವರಿಗೆ ಉತ್ತರ ಕೊಡುವ ಯೋಗ್ಯತೆ ಇಲ್ಲ, ಮೂರ್ಖರು. ಸದನದಲ್ಲಿ ಕಾಂಗ್ರೆಸ್ ಶಾಸಕರು ಮೂರ್ಖತನ ಪ್ರದರ್ಶನ ಮಾಡಿದ್ದಾರೆ.  ಶಾಸಕರು, ಸಚಿವರು ಯಾರಿಗೂ ಉತ್ತರಿಸುವ ಯೋಗ್ಯತೆ ಇಲ್ಲ. ಉತ್ತರಿಸಲಾಗದ ಸಚಿವ ಸಂಪುಟದ ಸಿಎಂಗೆ ನಾಚಿಕೆ ಆಗಬೇಕು ಎಂದು ಹರಿಹಾಯ್ದಿದ್ದಾರೆ. 

ಎರಡೂವರೆ ತಿಂಗಳಲ್ಲಿ ಒಳ ಮೀಸಲಾತಿ ಜಾರಿ ಮಾಡಬೇಕು. ಮಾದಿಗರನ್ನು ಜೀತದಾಳು ಎಂದು ಭಾವಿಸಬೇಡಿರಿ. ಮಾದಿಗರು ಕೈಕಟ್ಟಿ ಕೂಡುತ್ತಾರೆಂದು ಭಾವಿಸಬೇಡಿ. ವಿಶ್ವದಲ್ಲಿ ಶೇ.2ರಷ್ಟಿರುವ ಹೋರಾಟಗಾರರು, ದಂಗೆಕೋರರು, ಭಯೋತ್ಪಾದಕರು ಸರ್ಕಾರ ಕಿತ್ತೆಸೆದಿದ್ದಾರೆ. ಮಾದಿಗರು ಸಂಘಟಿತರಾಗಿ ನಮ್ಮ ವಿರುದ್ಧದ ಸರ್ಕಾರ ಕಿತ್ತೆಸೆಯುತ್ತೇವೆ. ನಮ್ಮ ಭಾವನೆ ಗೌರವಿಸುವ ಸರ್ಕಾರ ತರುತ್ತೇವೆ. ಗುಜರಾತ್, ಮಹಾರಾಷ್ಟ್ರದಲ್ಲಿ ನಡೆದ ಚಳುವಳಿಗಿಂತ ಉಗ್ರ ಚಳುವಳಿ ಮಾಡುತ್ತೇವೆ. ನನ್ನ ನಾಯಕತ್ವದಲ್ಲೇ ಒಳ ಮೀಸಲಾತಿ ಹೋರಾಟ ಮಾಡುತ್ತೇವೆ ಎಂದು ತಿಳಿಸಿದ್ದಾರೆ. 

PREV
Read more Articles on
click me!

Recommended Stories

ಸಂತನಾಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಿದರೂ ಉನ್ನತ ಶಿಕ್ಷಣ ನೌಕರರ ಸೌಲಭ್ಯಕ್ಕೆ ಕತ್ತರಿ!
ಕಲ್ಯಾಣ ಕರ್ನಾಟಕ ನಾಡು ಈಗ ಗಾಂಜಾ ನೆಲೆವೀಡು: ನಶೆಯಲ್ಲಿ ತೇಲುತ್ತಿರೋ ಯುವ ಜನಾಂಗ