ಲಾಕ್‌ಡೌನ್‌ ಎಫೆಕ್ಟ್: ಸೆಲೂನ್‌ ಶಾಪ್‌ ಬಂದ್‌, ಮನೆ ಬಾಗಿಲಿಗೆ ಕ್ಷೌರಿಕರು!

By Kannadaprabha NewsFirst Published Apr 9, 2020, 11:11 AM IST
Highlights

ಅಂಗಡಿ ಬಂದಾಗಿದ್ದರಿಂದ ಪರ್ಯಾಯ ಮಾರ್ಗ ಕಂಡುಕೊಂಡ ಕ್ಷೌರಿಕರು| ಶ್ರಮಿಕರಿಗೆ ಈಗ ಬದುಕು ನಿರ್ವಹಣೆ ಅನಿವಾರ್ಯತೆ| ಕುಟುಂಬ ನಿರ್ವಹಿಸುವುದು, ಮಾಡಿದ ಸಾಲ ತೀರಿಸಬೇಕಿದೆ| ಅನಿವಾರ್ಯವಾಗಿ ನಾನು ಮನೆ ಮನೆಗೆ ಹೋಗಿ ಕಟಿಂಗ್‌ ಮಾಡುತ್ತಿದ್ದೇನೆ ಎನ್ನುತ್ತಾರೆ ಕ್ಷೌರಿಕ|

ಸೋಮರಡ್ಡಿ ಅಳವಂಡಿ

ಕೊಪ್ಪಳ(ಏ.09): ಹಿಂದೆಲ್ಲ ಕ್ಷೌರಿಕರು ಮನೆ ಮನೆಗಳಿಗೆ ತೆರಳಿ ಕ್ಷೌರ ಮಾಡುತ್ತಿದ್ದ ಕಾಲವಿತ್ತು. ಆದರೆ ಬದಲಾದ ಕಾಲಘಟ್ಟದಲ್ಲಿ ಸೆಲೂನ್‌ ಶಾಪ್‌ಗಳು ಬಂದವು. ಈಗ ಕೊರೋನಾ ವೈರಸ್‌ ಕ್ಷೌರಿಕರ ಸೆಲೂನ್‌ ಶಾಪ್‌ಗಳು ಓಪನ್‌ ಆಗದಂತೆ ಮಾಡಿದೆ. ಹೀಗಾಗಿ ಅತಂತ್ರರಾಗಿರುವ ಕ್ಷೌರಿಕರು, ಬದುಕು ನಿರ್ವಹಣೆಗೆ ಹಿಂದಿನ ಕಾಲದಂತೆಯೇ ಈಗ ಮನೆ ಮನೆಗೆ ಹೋಗಿ ಕ್ಷೌರ ಮಾಡಲು ಪ್ರಾರಂಭಿಸಿದ್ದಾರೆ.

ಕುಟುಂಬ ನಿರ್ವಹಿಸುವುದು, ಮಾಡಿದ ಸಾಲ ತೀರಿಸಬೇಕಿದೆ. ಹೀಗಾಗಿ, ಅನಿವಾರ್ಯವಾಗಿ ನಾನು ಮನೆ ಮನೆಗೆ ಹೋಗಿ ಕಟಿಂಗ್‌ ಮಾಡುತ್ತಿದ್ದೇನೆ ಎನ್ನುತ್ತಾರೆ ಕ್ಷೌರಿಕರೊಬ್ಬರು. ಕಲ್ಯಾಣ ನಗರ ಏರಿಯಾದಲ್ಲಿ ಬಂದಿದ್ದ ಈತ ತಾನೆ ಮನೆ ಮನೆಗೆ ಹೋಗಿ ಕೇಳುತ್ತಾರೆ, ಅಲ್ಲದೆ ಈ ಮೊದಲೇ ಸೆಲೂನ್‌ ಶಾಪ್‌ಗೆ ಬರುತ್ತಿದ್ದವರ ನಂಬರ್‌ಗೆ ಕರೆ ಮಾಡಿ, ಕೇಳಿಕೊಳ್ಳುತ್ತಾರೆ. ಇದು ನನ್ನೊಬ್ಬನ ಕತೆಯಲ್ಲ ಸರ್‌, ಕಟಿಂಗ್‌ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಅಷ್ಟೂ ಜನರ ಸಮಸ್ಯೆಯೂ ಇದೆ. ಏಕಾಏಕಿ ಲಾಕ್‌ಡೌನ್‌ ಆಗಿದ್ದರಿಂದ ದಿಕ್ಕೆ ತಿಳಿಯದ್ದಾಗಿದೆ ಎಂದು ಕ್ಷೌರಿಕರ ಸಮಸ್ಯೆಯನ್ನು ವಿವರಿಸುತ್ತಾರೆ.

ಲಾಕ್‌ಡೌನ್‌: ಬಡವರ ಮನೆ ಮನೆಗೆ ಗವಿಮಠ ಶ್ರೀಗಳಿಂದ ದವಸ- ಧಾನ್ಯ

ಹೆಸರು ಹೇಳಲು ಇಚ್ಛಿಸದ ಕ್ಷೌರಿಕನೊಬ್ಬ ಮಾತನಾಡಿ, ಲಾಕ್‌ಡೌನ್‌ ಆಗಿದ್ದರಿಂದ ತೀವ್ರ ಸಮಸ್ಯೆಯಾಗಿದೆ. ದುಡಿಮೆ ಇಲ್ಲದಂತೆ ಆಗಿರುವುದರಿಂದ ಮನೆ ಮನೆಗೆ ಹೋಗಿ ಕಟಿಂಗ್‌ ಮಾಡುತ್ತೇವೆ. ಪೊಲೀಸರಿಗೆ ಗೊತ್ತಾದರೆ ಸಮಸ್ಯೆಯಾಗುತ್ತದೆ ಎಂದು ಹೇಳುತ್ತಾರೆ.
 

click me!