ಕೊಪ್ಪಳ ಜಿಲ್ಲೆಯ ಬಾರ್ ಮಾಲೀಕರು ಇಂದು ಜಿಲ್ಲಾ ಆಡಳಿತ ಭವನದ ಮುಂದೆ ಅಬಕಾರಿ ನೀರಿಕ್ಷಕನಾಗಿರುವ ರಮೇಶ್ ಅಗಡಿ ವಿರುದ್ಧ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು.
ದೊಡ್ಡೇಶ್ ಯಲಿಗಾರ್ ಏಶಿಯಾನೆಟ್ ಸುವರ್ಣ ನ್ಯೂಸ್
ಕೊಪ್ಪಳ: ಜಿಲ್ಲೆಯ ಬಾರ್ ಮಾಲೀಕರು ಇಂದು ಜಿಲ್ಲಾ ಆಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು. ಅಷ್ಟಕ್ಕೂ ಇವರೆಲ್ಲ ಹೀಗೆ ರಸ್ತೆಗಿಳಿದು ಪ್ರತಿಭಟನೆ ಮಾಡಿರುವುದು ಯಾರದೋ ವಿರುದ್ಧ ಅಲ್ಲ, ಬದಲಾಗಿ ಅಬಕಾರಿ ಇಲಾಖೆಯ ಇನ್ಸಪೆಕ್ಟರ್ ರಮೇಶ್ ಅಗಡಿ ವಿರುದ್ದ. ಕೊಪ್ಪಳದಲ್ಲಿ ಅಬಕಾರಿ ನೀರಿಕ್ಷಕನಾಗಿರುವ ರಮೇಶ್ ಅಗಡಿ ವಿರುದ್ಧ ಭ್ರಷ್ಡಾಚಾರದ ಆರೋಪಗಳು ಕೇಳಿ ಬಂದಿವೆ. ರಮೇಶ್ ಅಗಡಿ ಅನಾವಶ್ಯಕವಾಗಿ ಬಾರ್ ಮಾಲೀಕರಿಗೆ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ರಾಜ್ಯ ಮದ್ಯ ಮಾರಾಟಗಾರರ ಒಕ್ಕೂಟದವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕೊಪ್ಪಳದಲ್ಲಿ ಅಬಕಾರಿ ನಿರೀಕ್ಷಕರ ವಿರುದ್ಧ ಬೀದಿಗಿಳಿದ ಬಾರ್ ಮಾಲೀಕರು
ಈ ವೇಳೆ ಮಾತನಾಡಿದ ಮದ್ಯ ಮಾರಾಟ ಒಕ್ಕೂಟದ ಕಾರ್ಯದರ್ಶಿ ಗೋವಿಂದರಾಜ್ ಹೆಗ್ಡೆ, ರಮೇಶ್ ಅಗಡಿ ಹಣಕ್ಕಾಗಿ ಬಾರ್ ಮಾಲೀಕರ ಮೇಲೆ ಸುಳ್ಳು ಕೇಸ್‌ಗಳನ್ನು ದಾಖಲಿಸುವ ಮೂಲಕ ಕಿರುಕುಳ ನೀಡುತ್ತಿದ್ದಾನೆ. ಹೀಗಾಗಿ ಈ ಕೂಡಲೇ ರಮೇಶ್ ಅಗಡಿಯನ್ನು ಸೇವೆಯಿಂದ ವಜಾ ಮಾಡಬೇಕೆಂದು ಒತ್ತಾಯಿಸಿದರು.
undefined
ರಮೇಶ್ ವಿರುದ್ಧ ಬಾರ್ ಮಾಲೀಕರಿಂದ ಆರೋಪಗಳ ಸುರಿಮಳೆ
ಇನ್ನು ಕಳೆದ ಆರೇಳು ತಿಂಗಳಿಂದ ರಮೇಶ್ ಅಗಡಿ ವಿರುದ್ಧ ಭ್ರಷ್ಟಾಚಾರದ ಆರೋಪವನ್ನು ಬಾರ್ ಮಾಲೀಕರು ಮಾಡುತ್ತಲೇ ಬಂದಿದ್ದಾರೆ. ಎರಡು ಬಾರಿ ಕೊಪ್ಪಳದಿಂದ ವರ್ಗಾವಣೆ ಆಗಿದ್ದರೂ ಸಹ ರಮೇಶ್ ಅಗಡಿ ಕೆ ಎ ಟಿ ಯಿಂದ ತಡೆಯಾಜ್ಞೆ ತಂದು ಪುನಃ ಕೊಪ್ಪಳದಲ್ಲಿ ಕೆಲಸ ಮಾಡುತ್ತಿದ್ದಾರಂತೆ. ಇನ್ನು ಬಾರ್ ಮಾಲೀಕರು ರಮೇಶ್ ಅಗಡಿ ಕೇಳಿದಷ್ಟು ಹಣ ನೀಡದಿದ್ದರೆ ಅವರ ಮೇಲೆ ವಿನಾಕಾರಣ ಕೇಸ್ ಹಾಕುತ್ತಾನಂತೆ. ಇನ್ನು ರಮೇಶ್ ಅಗಡಿ ವಿರುದ್ಧ ಈಗಾಗಲೇ ಮದ್ಯ ಮಾರಾಟಗಾರರ ಒಕ್ಕೂಟದವರು ಅನೇಕ ಬಾರಿ ಮೇಲಾಧಿಕಾರಿಗಳಿಗೆ ದೂರು ನೀಡುತ್ತಾ ಬಂದಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ.
Liquor ಮಾರಾಟದಲ್ಲಿ ದ.ಕ ಟಾಪರ್ ಅಲ್ಲ: ಮಂಗಳೂರು ಅಬಕಾರಿ ಡಿಸಿ ಸ್ಪಷ್ಟನೆ!
ಆರೋಪದ ಬಗ್ಗೆ ರಮೇಶ್ ಅಗಡಿ ಹೇಳುವುದು ಏನು?
ಇನ್ನು ಒಂದೆಡೆ ಬಾರ್ ಮಾಲೀಕರು ರಮೇಶ್ ಅಗಡಿ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದರೆ, ಮತ್ತೊಂದಡೆ ರಮೇಶ್ ಅಗಡಿ ಭ್ರಷ್ಟಾಚಾರದ ಆರೋಪ ತಳ್ಳಿಹಾಕಿದ್ದು, ಅನಧಿಕೃತ ಮದ್ಯ ಮಾರಾಟ ಮಾಡುತ್ತಿದ್ದವರ ಮೇಲೆ ದಾಳಿ ಮಾಡಿದ್ದಕ್ಕೆ ಪ್ರತಿಭಟನೆ ಮಾಡ್ತಿದ್ದಾರೆ ಎನ್ನುತ್ತಿದ್ದಾರೆ. ನಾನು ಹಣ ತೆಗೆದುಕೊಂಡಿರುವುದು ನಿಜವಾಗಿದ್ದರೆ ಸೂಕ್ತ ದಾಖಲೆಗಳನ್ನು ನೀಡಲಿ ಎಂದು ಸವಾಲು ಹಾಕಿದ್ದಾರೆ. ಒಟ್ಟಿನಲ್ಲಿ ಒಂದೆಡೆ ಬಾರ್ ಮಾಲೀಕರು ಅಬಕಾರಿ ಇನ್ಸ್‌ಪೆಕ್ಟರ್ ಮೇಲೆ ಆರೋಪ ಮಾಡುತ್ತಿದ್ದರೆ, ಈ ಆರೋಪವನ್ನು ರಮೇಶ್ ಅಗಡಿ ತಳ್ಳಿ ಹಾಕಿದ್ದಾರೆ. ಇದರಲ್ಲಿ ಯಾವುದು ಸತ್ಯ ಅನ್ನೋದು ಸೂಕ್ತ ತನಿಖೆಯಿಂದಷ್ಟೇ ಗೊತ್ತಾಗಬೇಕಿದೆ.