* ಅವರ ಬೇನಾಮಿ ಆಸ್ತಿ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಆಗ್ರಹ.
* ಚಿತ್ರದುರ್ಗ ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ ಬಾಬುರೆಡ್ಡಿ ಆಗ್ರಹ.
* ಜಿಲ್ಲೆಯಲ್ಲಿ ಹಣದ ಪಿಶಾಚಿಯಂತೆ ಭ್ರಷ್ಟಾಚಾರ ಮಾಡ್ತಿದ್ದ ಅಬಕಾರಿ ಡಿಸಿ ಎಂದು ಆರೋಪ.
ವರದಿ: ಕಿರಣ್ ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ (ಮೇ.11): ಗೋಮುಖ ವ್ಯಾಘ್ರ, ಹಣದ ಪಿಶಾಚಿಯಂತಿರುವ ಅಬಕಾರಿ ಡಿಸಿ ನಾಗಶಯನ (DC Nagashyana) ಅವರ ಬೇನಾಮಿ ಆಸ್ತಿಯ ಬಗ್ಗೆ ಸರ್ಕಾರ (Govt) ಸಮಗ್ರ ತನಿಖೆ (Investigation) ನಡೆಸಿ ವಶಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ ಜಿ.ಟಿ.ಬಾಬುರೆಡ್ಡಿ (GT Babureddy) ಆಗ್ರಹಿಸಿದರು. ನಗರದ ಪತ್ರಿಕಾಭವನದಲ್ಲಿ ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳ ಹಿಂದೆ ಜಿಲ್ಲೆಗೆ ಅಬಕಾರಿ ಡಿಸಿ ಆಗಿ ಬಂದಂತಹ ನಾಗಶಯನ ಅವರು ಸನ್ನದುದಾರರ ಮೇಲೆ ಯಾವುದೇ ತಪ್ಪುಗಳು ಇಲ್ಲದೆ ಇದ್ದರು ಕೂಡ ಸುಖಸುಮ್ಮನೆ ಕೇಸುಗಳನ್ನು ಹಾಕಿ, ನಮ್ಮನ್ನು ಶೋಷಣೆ ಮಾಡುತ್ತಿದ್ದರು.
ಇವರು ಹಿಂದೆ ಕೆಲಸ ಮಾಡಿದಂತಹ ಹಾವೇರಿ (Haveri), ಮೈಸೂರು (Mysuru) ಜಿಲ್ಲೆಗಳಲ್ಲೂ ಸಹ ಇದೇ ರೀತಿ ಭ್ರಷ್ಟತನದಿಂದ ಕೂಡಿದ್ದು, ಅಲ್ಲಿನ ಜನರು ಕೂಡ ಪ್ರತಿಭಟನೆಗಳನ್ನು (Protest) ಮಾಡಿ ಅಲ್ಲಿಂದ ಹೊರದಬ್ಬಿದ್ದರು. ಆದರೂ ಕೂಡ ಇದು ಯಾವುದಕ್ಕೂ ಅಂಜದೆ ಚಿತ್ರದುರ್ಗ (Chitradurga) ಜಿಲ್ಲೆಯಲ್ಲಿ ಸನ್ಮದುದಾರರನ್ನು ಮನಬಂದಂತೆ ಬಳಸುಕೊಂಡು ಹಣ ವಸೂಲಿ ಮಾಡಿದ್ದಾರೆ ಎಂದು ದೂರಿದರು.
ACB Raid: ಮದ್ಯದಂಗಡಿ ಪರವಾನಗಿ ನವೀಕರಣಕ್ಕೆ ಲಂಚ: ಅಬಕಾರಿ ಡಿಸಿ ನಾಗಶಯನ ಎಸಿಬಿ ಬಲೆಗೆ
ಸನ್ನದುದಾರರಿಗೆ ಬರುತ್ತಿದ್ದ 10% ಲಾಭದಲ್ಲಿ 8% ಹಣವನ್ನು ಡಿಸಿ ನಾಗಶಯನಿಗೆ ಕೊಡಬೇಕಿತ್ತು. ಇಲ್ಲದಿದ್ದರೆ ಬಾರ್‌ಗಳ ಲೈಸೆನ್ಸ್ ಅಮಾನತ್ತು ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು. ಯಾರಾದರೂ ಪ್ರಶ್ನೆ ಮಾಡಿದರೆ ನನ್ನ ಹೆಂಡತಿ ಪೊಲೀಸ್ ಎಸ್ಪಿ ಆಗಿದ್ದು, ನಿಮ್ಮನ್ನು ಜೈಲಿಗೆ ಕಳಿಸುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದರು. ಪ್ರೀತಿ ವಿಶ್ವಾಸದಿಂದ ಕೆಲಸ ಮಾಡಿಕೊಳ್ಳುತ್ತಿರಲಿಲ್ಲ. ಅಬಕಾರಿ ಕಾಯ್ದೆಯನ್ನು ಸಂಪೂರ್ಣವಾಗಿ ದುರುಪಯೋಗ ಮಾಡಿಕೊಳ್ಳುತ್ತಿದ್ದರು.
ಇದರಿಂದ ಬಹಳ ದಿನಗಳ ಕಾಲ ನೊಂದು ಮಂಗಳವಾರ ಎಸಿಬಿ ಪೊಲೀಸರಿಗೆ ದೂರು ನೀಡಿ ನಾಗಶಯನ ಅವರನ್ನು ಬಂಧಿಸಲಾಯಿತು. ಈಗಾಗಲೇ ಲೈಸೆನ್ಸ್ ರಿನಿವಲ್‌ಗೆ ಸಂಬಂಧಿಸಿದಂತೆ 1 ಲಕ್ಷ ಹಣ ಕೊಡಲಾಗಿತ್ತು. ಆದ್ರೆ ಮತ್ತೆ 2.28 ಕೊಡುವಂತೆ ಪೀಡಿಸಿದ್ದರ ಪರಿಣಾಮ ಎಸಿಬಿಗೆ ದೂರು ನೀಡಿ ಬಂಧಿಸಲಾಯಿತು. ಇವರು ಇದುವರೆಗೂ ಮಾಡಿರುವ ಹಣ ಬೇನಾಮಿ ಆಸ್ತಿಯ ಬಗ್ಗೆ ಸರ್ಕಾರ ಎಸಿಬಿ ಪೊಲೀಸರಿಂದಲೇ ತನಿಖೆ ಮಾಡಿಸಿ ಜಪ್ತಿ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
Gadag: 'ಎಸಿಬಿ ರೇಡ್' ನಾಟಕ ಮಾಡಿ ಹಣ ಕಿತ್ತಲು ಮುಂದಾದ ಖದೀಮರ ಟೀಮ್!
ಕರ್ನಾಟಕ ರಾಜ್ಯ ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ ಗುರುಸ್ವಾಮಿ ಮಾತನಾಡಿ, ಅಬಕಾರಿ ಅಧಿಕಾರಿಗಳು ಸುಲಿಗೆ ಮಾಡಲು ಬರುತ್ತಿದ್ದಾರೆ. ಚಿತ್ರದುರ್ಗದಲ್ಲಿ ಮಂಗಳವಾರ ಮಾಡಿರುವ ಎಸಿಬಿ ಟ್ರಾಪ್ ಪ್ರಾರಂಭ ಅಷ್ಟೇ ಇದು ಮುಂದಿನ ಜಿಲ್ಲೆಗಳಲ್ಲಿರುವ ಭ್ರಷ್ಟ ಅಧಿಕಾರಿಗಳ ಮೇಲೂ ಕೂಡ ಮಾಡಲಾಗುವುದು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಂಘದ ಕಾರ್ಯದರ್ಶಿ ಗೋವಿಂದರಾಜು ಹೆಗಡೆ, ಜಿಲ್ಲಾ ಕಾರ್ಯದರ್ಶಿ ತಿಪ್ಪೇಸ್ವಾಮಿ, ಪ್ರಸನ್ನಕುಮಾರ್ ಸೇರಿದಂತೆ ಇತರರು ಹಾಜರಿದ್ದರು.