ಅಂಗನವಾಡಿ ನಾಮಫಲಕದಲ್ಲಿ ಬಾಂಗ್ಲಾದೇಶ ಹೆಸರು

Published : Jun 27, 2019, 08:59 AM ISTUpdated : Jun 27, 2019, 09:34 AM IST
ಅಂಗನವಾಡಿ ನಾಮಫಲಕದಲ್ಲಿ ಬಾಂಗ್ಲಾದೇಶ ಹೆಸರು

ಸಾರಾಂಶ

ಚಾಮರಾಜನಗರದ ಅಂಗನವಾಡಿ ಕೇಂದ್ರದ ನಾಮಫಲಕದಲ್ಲಿ  ಬಾಂಗ್ಲಾದೇಶ ಹೆಸರಿರುವುದು ಬೆಳಕಿಗೆ ಬಂದಿದೆ. ಅಲ್ಲದೇ ಈ ವಿಚಾರವೀಗ ಚರ್ಚೆಗೆ  ಗ್ರಾಸವಾಗಿದೆ. 

ಚಾಮರಾಜನಗರ [ಜೂ.27] : ನಗರದ ಅಂಗನವಾಡಿ ಕೇಂದ್ರವೊಂದರ ನಾಮಫಲಕದಲ್ಲಿ ಬಾಂಗ್ಲಾದೇಶ: 2 ಎಂದು ನಮೂದಿಸಿರುವುದು ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. 

ಗಾಳಿಪುರ ಬಡಾವಣೆಯ ಎ.ಜೆ.ನ್ಯಾಯಬೆಲೆ ಅಂಗಡಿ ಸಮೀಪವಿರುವ ಅಂಗನವಾಡಿ ಕೇಂದ್ರಕ್ಕೆ ಬಾಂಗ್ಲಾದೇಶ: 2 ಎಂದು ಹೆಸರನ್ನಿಟ್ಟು 2 ವರ್ಷಗಳಾಗಿವೆ ಎಂಬುದು ಅಜಾದ್‌ ಹಿಂದೂ ಸೇನೆಯ ಆರೋಪವಾಗಿದೆ. ಅಜಾದ್‌ ಹಿಂದೂ ಸೇನೆ ವಿಚಾರ ಪ್ರಸ್ತಾಪ ಮಾಡುತ್ತಿದ್ದಂತೆ ಕೆಲವೇ ಗಂಟೆಗಳಲ್ಲಿ ಬೋರ್ಡ ತೆರವುಗೊಳಿಸಲಾಗಿದೆ. 

ಸರ್ಕಾರಿ ನಾಮಫಲಕಕ್ಕೆ ಬಾಂಗ್ಲಾದೇಶ ಎಂದು ಹೆಸರಿಟ್ಟರೂ ಜಿಲ್ಲಾಡಳಿತ ಯಾವುದೇ ಶಿಸ್ತುಕ್ರಮ ಕೈಗೊಳ್ಳದೇ ಮೀನಮೇಷ ಎಣಿಸುತ್ತಿದೆ. ಈಗಲಾದರೂ ಸಂಬಂಧಪಟ್ಟಸಿಬ್ಬಂದಿಯನ್ನು ಸೇವೆಯಿಂದ ವಜಾ ಮಾಡಿ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಅಜಾದ್‌ ಹಿಂದೂ ಸೇನೆ ಅಧ್ಯಕ್ಷ ಪೃಥ್ವಿ ಆಗ್ರಹಿಸಿದ್ದಾರೆ.

PREV
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC