ನಕಲಿ ನೋಟು ದಂಧೆ : ಮಂಡ್ಯದ ಇಬ್ಬರಿಗೆ 10 ವರ್ಷ ಜೈಲು

Published : Jun 27, 2019, 08:23 AM IST
ನಕಲಿ ನೋಟು ದಂಧೆ : ಮಂಡ್ಯದ ಇಬ್ಬರಿಗೆ 10 ವರ್ಷ ಜೈಲು

ಸಾರಾಂಶ

ನಕಲಿ ನೋಟು ದಂಧೆ ಪ್ರಕರಣದಲ್ಲಿ ಭಾಗಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯದ ಇಬ್ಬರಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ನವದೆಹಲಿ[ಜೂ.27] : ಕರ್ನಾಟಕದಲ್ಲಿ ನಕಲಿ ನೋಟಿನ ಮಾರಾಟ ದಂಧೆ ನಡೆಸುತ್ತಿದ್ದ ಇಬ್ಬರಿಗೆ ಆಂಧ್ರಪ್ರದೇಶದ ವಿಜಯವಾಡದ ಎನ್‌ಐಎ ವಿಶೇಷ ನ್ಯಾಯಾಲಯ 10 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ಹಾಗೂ ತಲಾ 30 ಸಾವಿರ ರು. ದಂಡ ವಿಧಿಸಿದೆ. 

ಕರ್ನಾಟಕದ ಮಂಡ್ಯ ಜಿಲ್ಲೆಯ ಮೊಹಮ್ಮದ್‌ ಮೆಹಬೂಬ್‌ ಬೇಗ್‌ ಮತ್ತು ಸೈಯದ್‌ ಇಮ್ರಾನ್‌ ಶಿಕ್ಷೆಗೆ ಗುರಿಯಾದವರಾಗಿದ್ದಾರೆ. ಕಳೆದ ವರ್ಷ ಏಪ್ರಿಲ್‌ನಲ್ಲಿ ವಿಶಾಖಪಟ್ಟಣದ ರೈಲ್ವೇ ನಿಲ್ದಾಣದಲ್ಲಿ ನಕಲಿ ನೋಟು ಚಲಾವಣೆಗೆ ಯತ್ನಿಸುತ್ತಿದ್ದ ವೇಳೆ ಡಿಆರ್‌ಐ (ಡೈರಕ್ಟರೇಟ್‌ ರೆವೆನ್ಯೂ ಇಂಟೆಲಿಜೆನ್ಸ್‌) ದಾಳಿ ನಡೆಸಿ ಇವರನ್ನು ಬಂಧಿಸಿತ್ತು. 

ಈ ವೇಳೆ ಬಂಧಿತರಿಂದ    ಲಕ್ಷಾಂತರ ರು ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಬಾಂಗ್ಲಾದ ಅಂತಾರಾಷ್ಟ್ರೀಯ ಗಡಿಯಿಂದ ನಕಲಿ ನೋಟುಗಳನ್ನು ಪಡೆದುಕೊಂಡು, ಬೆಂಗಳೂರು ಮತ್ತು ಪಶ್ಚಿಮ ಬಂಗಾಳದ ಮಾಲ್ಡಾದಿಂದಲೂ ನಕಲಿ ನೋಟುಗಳ ಜಾಲ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

PREV
click me!

Recommended Stories

ವಿಜಯನಗರ ಪಾಲಿಕೆ ಬಜಾರ್‌ ಮಳಿಗೆಗಳ ಇ-ಹರಾಜು ಮೂಲಕ ವಿತರಿಸಿ : ಮಹೇಶ್ವರ್ ರಾವ್
ಜಾಲಹಳ್ಳಿ ಕೆಳಸೇತುವೆ ನಿರ್ಮಾಣ ಸಂಬಂಧ ಶಾಸಕರ ಸಭೆ-ಮಿ. ಮುನಿ ಪ್ರಶ್ನೆಗೆ ಉತ್ತರಿಸಲ್ಲ: ಡಿಸಿಎಂ