ಕೋಲಾರ: ಬಂಗಾರಪೇಟೆ ಮಾಜಿ ಶಾಸಕ ಸಿ.ವೆಂಕಟೇಶಪ್ಪ ಹೃದಯಾಘಾತದಿಂದ ನಿಧನ

By Girish Goudar  |  First Published Nov 11, 2023, 8:48 AM IST

ಸಿ.ವೆಂಕಟೇಶಪ್ಪ ಅವರು ಆಗಿನ ಬೇತಮಂಗಲ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ವೆಂಕಟೇಶಪ್ಪ ಅಪಾರ ಅಭಿಮಾನಿಗಳು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. 


ವರದಿ: ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ

ಕೋಲಾರ(ನ.11): ಕೋಲಾರ ಜಿಲ್ಲೆಯ ಬಂಗಾರಪೇಟೆ ಮಾಜಿ ಶಾಸಕ ಸಿ.ವೆಂಕಟೇಶಪ್ಪ(73) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೂರು ಬಾರಿ ಕಾಂಗ್ರೆಸ್ ನಿಂದ ಶಾಸಕರಾಗಿದ್ದ ಸಿ.ವೆಂಕಟೇಶಪ್ಪ ಕಳೆದ ರಾತ್ರಿ ತೀವ್ರ ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. 

Tap to resize

Latest Videos

ಎದೆನೋವು ಕಾಣಿಸಿಕೊಂಡ ಹಿನ್ನಲೆ ಕೋಲಾರ ಆರ್.ಎಲ್.ಜಾಲಪ್ಪಾ ಆಸ್ಪತ್ರೆಗೆ ಕಳೆದ ರಾತ್ರಿ ದಾಖಲು ಮಾಡಲಾಗಿತ್ತು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. 

ಹಿರಿಯ ಪತ್ರಕರ್ತ, ಸಾಹಿತಿ ಶೇಖರ ಅಜೆಕಾರು ಹೃದಯಾಘಾತದಿಂದ ವಿಧಿವಶ

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕು ಬುವನಹಳ್ಳಿ ಗ್ರಾಮದವರಾಗಿರುವ ವೆಂಕಟೇಶಪ್ಪ, ಮೃತ ಶಾಸಕರ ಪಾರ್ಥಿವ ಶರೀರ ಶಾಸಕರ ಸ್ವಗ್ರಾಮ ರವಾನೆಯಾಗಿದ್ದು, ಇಂದಿನ ಬಂಗಾರಪೇಟೆ ಅಂದಿನ ಬೇತಮಂಗಲ ವಿಧಾನಸಭಾ ಕ್ಷೇತ್ರದಿಂದ ವೆಂಕಟೇಶಪ್ಪ ಶಾಸಕರಾಗಿದ್ದರು. 1978, 1983 ಹಾಗೂ 1999 ರಲ್ಲಿ ಶಾಸಕರಾಗಿ ಕಾಂಗ್ರೆಸ್ ಪಕ್ಷದಿಂದಲೇ ಆಯ್ಕೆಯಾಗಿದ್ದ ಸಿ.ವೆಂಕಟೇಶಪ್ಪ ಅವರಿಗೆ 73 ವರ್ಷ ವಯಸ್ಸಾಗಿದೆ. ಇತ್ತೀಚೆಗೆ ಅಂದ್ರೆ ನ.9 ರಂದು ಅವರ ಹುಟ್ಟು ಹಬ್ಬ ಆಚರಣೆ ಮಾಡಲಾಗಿತ್ತು. 

ಪತ್ನಿ, ಒಬ್ಬ ಮಗಳು ಹಾಗೂ ಇಬ್ಬರು ಗಂಡು ಮಕ್ಕಳನ್ನ ಅಗಲಿರುವ ಅವರು, ಅಪಾರ ಅಭಿಮಾನಿಗಳು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. ವೆಂಕಟೇಶಪ್ಪ ಮನೆಯ ಬಳಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕು ಬುವನಹಳ್ಳಿ ಗ್ರಾಮದಲ್ಲಿರುವ ಮನೆ ಬಳಿ  ಮೃತರ ಪಾರ್ಥಿವ ಶರೀರವಿಟ್ಟು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇನ್ನೂ ಮೃತರ ಅಂತಿಮ ದರ್ಶನವನ್ನ ಬೆಂಬಲಿಗರು ಹಾಗೂ ಸಾರ್ವಜನಿಕರು‌ ಪಡೆದ್ರು. ಇನ್ನೂ ಯರಗೋಳ ಜಲಾಶಯಕ್ಕೆ ಚಾಲನೆ ನೀಡಿದ ಬಳಿಕ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸಚಿವರು, ಶಾಸಕರು ಅಂತಿಮ ದರ್ಶನ ಪಡೆಯುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

click me!