ಜೂ.26 ರ ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾದ ವರದಿ ಗಮನಿಸಿದ ಗುಂಡ್ಲುಪೇಟೆ ಕ್ಷೇತ್ರದ ನೂತನ ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್ ಬಂಡೀಪುರ ಅರಣ್ಯ ಸಂರಕ್ಷಣಾಕಾರಿ ಡಾ.ಪಿ.ರಮೇಶ್‌ಕುಮಾರ್ ಜೊತೆ ಮಾತನಾಡಿ ಸಂಬಳ ಕೂಡಲೇ ನೀಡಬೇಕು ಎಂದು ತಾಕೀತು ಮಾಡಿದ್ದರು.
ರಂಗೂಪುರ ಶಿವಕುಮಾರ್
ಗುಂಡ್ಲುಪೇಟೆ (ಜೂ.28): ಬಂಡೀಪುರ ದಿನಗೂಲಿ ನೌಕರರಿಗೆ ಬಾರದ ಸಂಬಳ... ಎಂಬ ಕನ್ನಡಪ್ರಭದ ವರದಿಗೆ ಎಚ್ಚೆತ್ತ ಬಂಡೀಪುರ ಅರಣ್ಯ ಇಲಾಖೆ ಎರಡು ತಿಂಗಳ ಸಂಬಳವನ್ನು ನೌಕರರ ಖಾತೆಗೆ ಸೋಮವಾರ ರಾತ್ರೋರಾತ್ರಿಯೇ ಜಮಾ ಮಾಡಿದೆ.
undefined
ಜೂ.26 ರ ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾದ ವರದಿ ಗಮನಿಸಿದ ಗುಂಡ್ಲುಪೇಟೆ ಕ್ಷೇತ್ರದ ನೂತನ ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್ ಬಂಡೀಪುರ ಅರಣ್ಯ ಸಂರಕ್ಷಣಾಕಾರಿ ಡಾ.ಪಿ.ರಮೇಶ್‌ಕುಮಾರ್ ಜೊತೆ ಮಾತನಾಡಿ ಸಂಬಳ ಕೂಡಲೇ ನೀಡಬೇಕು ಎಂದು ತಾಕೀತು ಮಾಡಿದ್ದರು.
ನಾಡಪ್ರಭು ಕೆಂಪೇಗೌಡರು ಎಲ್ಲ ಜನಾಂಗದ ಅಭಿವೃದ್ಧಿ ಹರಿಕಾರರು: ಸಚಿವ ಮುನಿಯಪ್ಪ
ಅಲ್ಲದೆ ಕನ್ನಡಪ್ರಭ ವರದಿ ರಾಜ್ಯದ ಪುಟದಲ್ಲಿ ಪ್ರಕಟವಾಗಿದ್ದನ್ನು ಗಮನಿಸಿದ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಸೂಚನೆ ಹಿನ್ನೆಲೆ ಬಂಡೀಪುರ ಸಂರಕ್ಷಿತ ಪ್ರದೇಶದ ದಿನಗೂಲಿ ನೌಕರರಿಗೆ ಸೋಮವಾರ ರಾತ್ರಿ ಎರಡು ತಿಂಗಳ ಸಂಬಳವನ್ನು ನೌಕರರ ಖಾತೆಗೆ ಜಮಾ ಮಾಡಿದೆ.
ಫುಲ್ ಖುಷ್: ಬಂಡೀಪುರ ಅರಣ್ಯ ಇಲಾಖೆಯ ಸುಮಾರು 300 ಕ್ಕೂ ಹೆಚ್ಚು ಮಂದಿ ದಿನಗೂಲಿ ನೌಕರರ ಮೂರು ತಿಂಗಳಿನಿಂದ ಸಂಬಳ ಇಲ್ಲದೆ ಕುಟುಂಬದ ಜೀವನ ನಿರ್ವಹಣೆಗೆ ಪರದಾಟ ನಡೆಸಿದ್ದರು. ನೌಕರರ ಮಕ್ಕಳು ಶಾಲಾ, ಕಾಲೇಜಿಗೆ ಸೇರಿಸಲು ಸಾಲ ಸೋಲ ಮಾಡಿದ್ದರು ಎಂದು ಕನ್ನಡಪ್ರಭದ ವರದಿ ಬಳಿಕ ಎರಡು ತಿಂಗಳ ಸಂಬಳವಾದ ಖುಷಿಯಲ್ಲಿ ನೌಕರರು ಇದ್ದಾರೆ.
ಚಾಮರಾಜನಗರ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವೆ: ಶಾಸಕ ಪುಟ್ಟರಂಗಶೆಟ್ಟಿ
ಒಳ್ಳೆದಾಗ್ಲಿ: ದಿನಗೂಲಿ ನೌಕರರೊಬ್ಬ ಕನ್ನಡಪ್ರಭ ಪತ್ರಿಕೆಯೊಂದಿಗೆ ಮಾತನಾಡಿ ಸರ್ ಹಲವು ಬಾರಿ ಸಂಬಳ ಕೊಡ್ಸಿ ಅಂತ ಅಧಿಕಾರಿಗಳನ್ನು ಕೇಳಿದ್ವೀ ಸಂಬಳ ಮಾತ್ರ ಕೊಟ್ಟಿರಲಿಲ್ಲ. ನಿಮ್ಮ ಪತ್ರಿಕೆಯಲ್ಲಿ ಸುದ್ದಿ ಬಂದ ಬಳಿಕ ಹಾಗು ಶಾಸಕರ ಸೂಚನೆ ಹಿನ್ನೆ್ನಲೆ ಸಂಬಳ ಬಂದಿದೆ. ನಿಮ್ಮ ಪತ್ರಿಕೆ ಹಾಗೂ ಶಾಸಕರಿಗೆ ಒಳ್ಳೆದಾಗ್ಲಿ ಎಂದು ಹಾರೈಸಿ ಅಭಿನಂದಿಸಿದ್ದಾರೆ.