ನದಿಯಲ್ಲಿ ಈಜುವಾಗ ಮೊಸಳೆ ದಾಳಿಯಿಂದ ರೈತ ಸಾವು

Kannadaprabha News   | Asianet News
Published : Sep 05, 2021, 07:39 AM IST
ನದಿಯಲ್ಲಿ ಈಜುವಾಗ ಮೊಸಳೆ ದಾಳಿಯಿಂದ ರೈತ ಸಾವು

ಸಾರಾಂಶ

ತುಂಗಭದ್ರಾ ನದಿಯಾಚೆಯ ಜಮೀನಿಗೆ ಕೃಷಿ ಚಟುವಟಿಕೆಗೆಂದು ತೆರಳುತ್ತಿದ್ದ ರೈತನೊಬ್ಬ ಮೊಸಳೆಗೆ ಬಲಿ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ

 ಸಿರುಗುಪ್ಪ/ಕುರುಗೋಡು (ಸೆ.05): ತುಂಗಭದ್ರಾ ನದಿಯಾಚೆಯ ಜಮೀನಿಗೆ ಕೃಷಿ ಚಟುವಟಿಕೆಗೆಂದು ತೆರಳುತ್ತಿದ್ದ ರೈತನೊಬ್ಬ ಮೊಸಳೆಗೆ ಬಲಿಯಾದ ಘಟನೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಪೊಲೀಸ್‌ ಠಾಣಾ ವ್ಯಾಪ್ತಿಯ ನಿಟ್ಟೂರು ಗ್ರಾಮದಲ್ಲಿ ಶನಿವಾರ ನಡೆದಿದೆ.

ಗವಿ ವೀರೇಶಪ್ಪ ಮಾರೆಪ್ಪ (45) ಮೃತ ರೈತ. ಬೆಳಗ್ಗೆ 6ರ ವೇಳೆಗೆ ವೀರೇಶಪ್ಪ ಒಬ್ಬರೇ ಎತ್ತುಗಳ ಬಾಲ ಹಿಡಿದುಕೊಂಡು ನದಿಯಾಚೆಗಿನ ಜಮೀನಿಗೆ ನದಿಯಲ್ಲಿ ಈಜಿದ್ದಾರೆ. 

ಸಿರುಗುಪ್ಪ: ಚರಂಡಿಯಲ್ಲಿ ಮೊಸಳೆ ಪ್ರತ್ಯಕ್ಷ, ಹೌಹಾರಿದ ಜನತೆ..!

ಮೊಸಳೆ ಹಿಂಬದಿಯಿಂದ ಬಂದು ವೀರೇಶಪ್ಪ ಅವರ ತೊಡೆ ಕಚ್ಚಿ ಎಳೆದಿದೆ. ಆಗ ನೀರಿನಲ್ಲಿ ಮುಳುಗಿ ಉಸಿರುಗಟ್ಟಿಮೃತಪಟ್ಟಿದ್ದಾರೆ. ಎತ್ತುಗಳು ದಿಕ್ಕಾಪಾಲಾಗಿ ಓಡಿವೆ. ಮೊಸಳೆ ಅವರ ಇಡೀ ದೇಹವನ್ನು ತಿಂದಿಲ್ಲ. ಹಾಗಾಗಿ ನದಿಯ ನಡುಗಡ್ಡೆಯ ಅಂಚಿನಲ್ಲಿ ತೇಲಿದೆ. ಇದನ್ನು ಗಮನಿಸಿದ ನದಿ ಪಾತ್ರದ ರೈತರು ತೆಪ್ಪದ ಮೂಲಕ ಹೋಗಿ ಮೃತದೇಹವನ್ನು ದಡಕ್ಕೆ ತಂದಿದ್ದಾರೆ.

PREV
click me!

Recommended Stories

ದೀಪಾಂಜಲಿ ನಗರ ಜಂಕ್ಷನ್‌ನ ಬಳಿಯ ನೈಸ್‌ ರಸ್ತೆ ಸಾರ್ವಜನಿಕರಿಗೆ ಶೀಘ್ರ ಮುಕ್ತ
ಬೆಂಗಳೂರಿನ ಬೀದಿ ನಾಯಿಗಳಿಗೆ ಪ್ರತಿನಿತ್ಯ 2 ಬಾರಿ ಚಿಕನ್‌ ರೈಸ್‌ !