ಕೊಲ್ಲೂರು : ಭಕ್ತರಿಗೆ ಗುರುತಿನ ಚೀಟಿ ಕಡ್ಡಾಯ

By Kannadaprabha News  |  First Published Sep 5, 2021, 7:21 AM IST
  • ಕೊಲ್ಲೂರು ಮೂಕಾಂಬಿಕೆಯ ದರ್ಶನಕ್ಕೆ ಇನ್ನುಮುಂದೆ ಆಧಾರ್‌ ಸೇರಿದಂತೆ ಪಾನ್‌ ಕಾರ್ಡ್‌, ಲೈಸೆನ್ಸ್‌ ಯಾವುದಾದರೂ ಒಂದು ಗುರುತಿನ ಚೀಟಿ ನೀಡುವುದು ಕಡ್ಡಾಯ 
  •  ಉಡುಪಿ ಜಿಲ್ಲಾ​ಧಿಕಾರಿ ಆದೇಶದಂತೆ ಶನಿವಾರದಿಂದಲೇ ಈ ಕ್ರಮ ಜಾರಿ

ಬೈಂದೂರು (ಸೆ.05): ಕೊಲ್ಲೂರು ಮೂಕಾಂಬಿಕೆಯ ದರ್ಶನಕ್ಕೆ ಇನ್ನುಮುಂದೆ ಆಧಾರ್‌ ಸೇರಿದಂತೆ ಪಾನ್‌ ಕಾರ್ಡ್‌, ಲೈಸೆನ್ಸ್‌ ಯಾವುದಾದರೂ ಒಂದು ಗುರುತಿನ ಚೀಟಿ ನೀಡುವುದು ಕಡ್ಡಾಯ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಿಸಿದೆ.

ಕೊರೋನಾ ಡೆತ್ ಆಡಿಟ್‌ನಲ್ಲಿ ಶಾಕಿಂಗ್ ಸಂಗತಿಗಳು ಬಯಲು!

Latest Videos

undefined

 ಉಡುಪಿ ಜಿಲ್ಲಾ​ಧಿಕಾರಿ ಆದೇಶದಂತೆ ಶನಿವಾರದಿಂದಲೇ ಈ ಕ್ರಮ ಜಾರಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಭಕ್ತರೂ ದೇವಸ್ಥಾನ ಪ್ರವೇಶಿಸುವ ಮೊದಲು ತಮ್ಮ ಗುರುತಿನ ಚೀಟಿ ತೋರಿಸಬೇಕು ಜೊತೆಗೆ ಪ್ರವೇಶದ್ವಾರದಲ್ಲಿ ಭಕ್ತಾದಿಗಳ ಹೆಸರು, ಊರು ಹಾಗೂ ಸಂಪರ್ಕ ಸಂಖ್ಯೆಯನ್ನು ದಾಖಲಿಸಲಾಗುತ್ತದೆ ಎಂದು ದೇವಸ್ಥಾನದ ಕಾರ್ಯನಿರ್ವಹಣಾ​ಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಅಲ್ಲದೇ ಕೇರಳದ ಭಕ್ತರಿಗೆ ಆಧಾರ್‌ ಜೊತೆ 72 ಗಂಟೆಗಳ ಒಳಗಿನ ಕೋವಿಡ್‌ ಆರ್‌ಟಿಪಿಸಿಆರ್‌ ನೆಗೆಟಿವ್‌ ವರದಿ ಕಡ್ಡಾಯವಾಗಿದೆ.

click me!