ರೋಣ (ಸೆ.05): ರಜೆ ಕೇಳಿದ ಸಾರಿಗೆ ಸಿಬ್ಬಂದಿಯಿಂದ 2000 ಲಂಚ ಪಡೆಯುತ್ತಿದ್ದಾಗ ರೋಣ ಸಾರಿಗೆ ಘಟಕ ವ್ಯವಸ್ಥಾಪಕ ಎಲ್.ಬಿ.ಗೆಣ್ಣೂರ ಗದಗ ಜಿಲ್ಲಾ ಎಸಿಬಿ ಬಲೆಗೆ ಬಿದ್ದಿರುವ ಘಟನೆ ಶನಿವಾರ ಪಟ್ಟಣದ ಸಾರಿಗೆ ಘಟಕದಲ್ಲಿ ನಡೆದಿದೆ.
25 ದಿನಗಳ ರಜೆ ಕೇಳಿದ ಡ್ರೈವರ್ ಕಂ ಕಂಡಕ್ಟರ್ ವಿ.ಬಿ.ಮಾರನಬಸರಿ (ಗೋಪಾಲ) ಅವರಿಗೆ ಸಾರಿಗೆ ಘಟಕದ ವ್ಯವಸ್ಥಾಪಕ 2000ಕ್ಕೆ ಬೇಡಿಕೆಯಿಟ್ಟಿದ್ದರು.
ಹುಬ್ಬಳ್ಳಿ: ನಿವೃತ್ತಿ ವೇತನಕ್ಕೆ ಲಂಚ, ಎಸಿಬಿ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿಗಳು
ಲಂಚ ಸ್ವೀಕರಿಸುತ್ತಿದ್ದಾಗ ದಾಳಿ ಮಾಡಿದ ಜಿಲ್ಲಾ ಎಸಿಬಿ ತಂಡ ಹಣ ಸಮೇತ ವ್ಯವಸ್ಥಾಪಕ ಗೆಣ್ಣೂರ ಅವರನ್ನು ಬಲೆಗೆ ಬೀಳಿಸಿದ್ದಾರೆ.
ಎಸಿಬಿ ತಂಡ ವ್ಯವಸ್ಥಾಪಕ ಗೆಣ್ಣೂರ ಅವರನ್ನು ಕೆಲ ಕಾಲ ಸಾರಿಗೆ ಘಟಕದ ಕಾರ್ಯಾಲಯದಲ್ಲಿ ತೀವ್ರ ವಿಚಾರಣೆಗೈದು, ಅಲ್ಲಿನ ಕೆಲ ದಾಖಲೆಗಳನ್ನು ಪರಿಶೀಲಿಸಿ, ಬಳಿಕ ಗೆಣ್ಣೂರ ಅವರನ್ನು ಬಂಧಿಸಿದರು.