101 ಕಾಯಿ ಒಡೆದು ಡಿಕೆಶಿಗಾಗಿ ವಿಶೇಷ ಪೂಜೆ

By Web Desk  |  First Published Sep 3, 2019, 12:28 PM IST

ಇಡಿ ಸುಳಿಗೆ ಸಿಕ್ಕಿರುವ ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಪರವಾಗಿ ಬಳ್ಳಾರಿ ಕಾಂಗ್ರೆಸ್ ಕಾರ್ಯಕರ್ತರು ಪೂಜೆ ಸಲ್ಲಿಸಿದ್ದಾರೆ. ಡಿ. ಕೆ. ಶಿವಕುಮಾರ್ ಶೀಘ್ರ ಆರೋಪ ಮುಕ್ತರಾಗಲಿ ಎಂದು ಅವರು ಪ್ರಾರ್ಥಿಸಿದ್ದಾರೆ.


ಬಳ್ಳಾರಿ (ಸೆ.03): ಇಡಿ ಸುಳಿಗೆ ಸಿಕ್ಕಿರುವ ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಪರವಾಗಿ ಬಳ್ಳಾರಿ ಕಾಂಗ್ರೆಸ್ ಕಾರ್ಯಕರ್ತರು ಪೂಜೆ ಸಲ್ಲಿಸಿದ್ದಾರೆ. ಡಿ. ಕೆ. ಶಿವಕುಮಾರ್ ಶೀಘ್ರ ಆರೋಪ ಮುಕ್ತರಾಗಲಿ ಎಂದು ಅವರು ಪ್ರಾರ್ಥಿಸಿದ್ದಾರೆ. 

ಇಡಿ ವಿಚಾರಣೆಯನ್ನು ಎದುರಿಸುತ್ತಿರುವ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರು ಶೀಘ್ರದಲ್ಲೇ ಆರೋಪ‌ ಮುಕ್ತರಾಗಲೆಂದು ಹರಕೆ ಹೇಳಿ ಪೂಜೆ ಸಲ್ಲಿಸಲಾಗಿದೆ. ಬಳ್ಳಾರಿಯ ದುರ್ಗಮ್ಮ ದೇವಸ್ಥಾನದಲ್ಲಿ ‌ವಿಶೇಷ ಪೂಜೆ ನಡೆದಿದ್ದು, ಕಾಂಗ್ರೆಸ್ ಕಾರ್ಯಕರ್ತರು ಪೂಜೆಯಲ್ಲಿ ಭಾಗವಹಿಸಿದ್ದಾರೆ.

Tap to resize

Latest Videos

ಡಿ.ಕೆ.ಶಿವಕುಮಾರ್ ಕಣ್ಣೀರಿಗೆ ಬಿಜೆಪಿಗರಿಂದ ವ್ಯಂಗ್ಯ

ನೂರಾ ಒಂದು ತೆಂಗಿನ ಕಾಯಿ ಒಡೆದು ಪ್ರಾಥನೆ ಡಿಕೆಶಿ ಬೆಂಬಲಿಗರು ಪೂಜೆ ಸಲ್ಲಸಿದ್ಧಾರೆ. ಮಹಿಳಾ ಕಾಂಗ್ರೆಸ್ ಕಾರ್ಯಕರ್ತರೂ ಕಾಯಿ ಒಡೆದು ಪೂಜೆ ಸಲ್ಲಿಸಿದ್ದಾರೆ.  ಜೆಬಿಜೆಪಿಯವರ ಕುಮ್ಮಕ್ಕಿನಿಂದ ಈ ರೀತಿ ಮಾಡಲಾಗ್ತಿದೆ. ಡಿಕೆಶಿಯನ್ನು ಸಿಕ್ಕಿಸಿಹಾಕುವ ಪ್ಲಾನ್ ಮಾಡಲಾಗ್ತಿದೆ. ಯಾವುದೇ ಕಾರಣಕ್ಕೂ ನಾವು ಬಗ್ಗುವುದಿಲ್ಲ ಎಂದು ಕಾರ್ಯಕರ್ತರು ಹೇಳಿದ್ದಾರೆ.

3ನೇ ದಿನ ED ವಿಚಾರಣೆ ಮುಗಿಸಿಕೊಂಡು ಹೊರ ಬಂದ ಡಿಕೆಶಿ ಖಡಕ್ ಮಾತು

click me!