ವಿಷಪೂರಿತ ಬಳ್ಳಿ ಸೇವಿಸಿ 30ಕ್ಕೂ ಹೆಚ್ಚು ಕುರಿಗಳು ಸಾವು

By Web DeskFirst Published Sep 3, 2019, 11:59 AM IST
Highlights

ವಿಷಪೂರಿತ ಬಳ್ಳಿ ಸೇವಿಸಿ 30ಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿರುವ ಘಟನೆ ಗದಗದಲ್ಲಿ ನಡೆದಿದೆ. ಜಮೀನಿನಲ್ಲಿ ಮೇಯುತ್ತಿದ್ದ ಕುರಿಗಳೂ ಮಾಮೂಲಿಯಾಗಿ ಬಳ್ಳಿಗಳನ್ನು ತಿಂದಿದ್ದವು ಎಂದು ತಿಳಿದುಬಂದಿದೆ. ಸತ್ತಿರುವ ಕುರಿಗಳು ಬಸಪ್ಪ, ಯಲ್ಲಪ್ಪ, ಹನುಮಪ್ಪ ಹಾಗೂ ಕಳಕಪ್ಪ ಅವರಿಗೆ ಸೇರಿದೆ ಎಂದು ತಿಳಿದುಬಂದಿದೆ.

ಗದಗ(ಸೆ.03): ವಿಷಪೂರಿತ ಸೌತೆಬಳ್ಳಿ ಸೇವಿಸಿ 30ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ. ಗದಗ ಜಿಲ್ಲೆಯ ರೋಣ ತಾಲೂಕು ನರೇಗಲ್ ಪಟ್ಟಣದ ಬಳಿಯ ಜಮೀನಿನಲ್ಲಿ ಘಟನೆ ನಡೆದಿದ್ದು, ಕುರಿಗಳು ವಿಷಪೂರಿತ ಬಳ್ಳಿ ಸೇವಿಸಿ ಘಟನೆ ಸಂಭವಿಸಿದೆ ಎನ್ನಲಾಗುತ್ತಿದೆ.

ಕಳೆದ ರಾತ್ರಿ ಜಮೀನಿನಲ್ಲಿದ್ದ ವಿಷಪೂರಿತ ಸೌತೆಬಳ್ಳಿಗಳನ್ನು ಸೇವಿಸಿದ್ದ ಕುರಿಗಳು ಸತ್ತುಬಿದ್ದಿವೆ. ಮಾಮೂಲಿಯಾಗಿ ಎಂದಿನಂತೆಯೇ ಜಮೀನಿನಲ್ಲಿ ಮೇಯುತ್ತಿದ್ದ ಕುರಿಗಳು ಸತ್ತು ಬಿದ್ದಿದ್ದು, ರೈತರನ್ನು ಆತಂಕಕ್ಕೆ ದೂಡಿತ್ತು. ವಿಷಪೂರಿತ ಬಳ್ಳಿಗಳನ್ನು ಸೇವಿಸಿಯೇ ಕುರಿಗಳು ಸತ್ತು ಬಿದ್ದಿರಬಹುದೆಂದು ಅಂದಾಜಿಸಲಾಗಿದೆ.

8 ಮಂದಿ ಸಾಮೂಹಿಕ ಅತ್ಯಾಚಾರ : ಗರ್ಭಿಣಿ ಮೇಕೆ ಸಾವು

ಕುರಿಗಳು ಬಸಪ್ಪ, ಯಲ್ಲಪ್ಪ, ಹನುಮಪ್ಪ ಹಾಗೂ ಕಳಕಪ್ಪ ಅವರಿಗೆ ಸೇರಿದೆ ಎಂದು ತಿಳಿದುಬಂದಿದೆ. ಗದಗದ ರೋಣ ತಾಲೂಕಿನ ನರೇಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

click me!