
ಅರಸೀಕೆರೆ ಮೇ.9): ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ನೂತನ ಶಾಸಕ ಉಮೇಶ್ ಮೇಟಿ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಹಾರನಹಳ್ಳಿ ಕೋಡಿಮಠಕ್ಕೆ ಭೇಟಿ ನೀಡಿ ಪೀಠಾಧ್ಯಕ್ಷ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರಿಗೆ ಬೆಳ್ಳಿ ಕಿರೀಟ ಅರ್ಪಿಸಿ ಆಶೀರ್ವಾದ ಪಡೆದರು.
ಗುರುವಾರ ರಾತ್ರಿ ಮಠಕ್ಕೆ ಆಗಮಿಸಿದ ಉಮೇಶ್ ಮೇಟಿ ಮಠದಲ್ಲಿನ ಗದ್ದುಗೆಗಳಿಗೆ ಪೂಜೆ ಸಲ್ಲಿಸಿದರು. ಬಳಿಕ ಸ್ವಾಮೀಜಿಗೆ ರಜತ ಕಿರೀಟ ಧಾರಣೆ ಮಾಡಿ ಭಕ್ತಿಭಾವ ಸಮರ್ಪಿಸಿದರು. ಉಮೇಶ್ ಮೇಟಿ ಹಾಗೂ ಶ್ರೀಗಳ ನಡುವೆ 1 ಗಂಟೆಗೂ ಹೆಚ್ಚು ಕಾಲ ಗೋಪ್ಯ ಸಮಾಲೋಚನೆ ನಡೆದಿರುವುದು ವಿಶೇಷ ಗಮನ ಸೆಳೆಯಿತು.
ಇದನ್ನೂ ಓದಿ: Blackmail Utsav: ಯಾವ ಪುರುಷಾರ್ಥಕ್ಕೆ ಯಡಿಯೂರಪ್ಪ ಅಭಿಮಾನೋತ್ಸವ? ಯತ್ನಾಳ್ ಟೀಕೆ
ರಾಜಕೀಯವಾಗಿ ತಮ್ಮ ಮುಂದಿನ ನಡೆ, ಕ್ಷೇತ್ರದ ಅಭಿವೃದ್ಧಿ ಹಾಗೂ ಭವಿಷ್ಯದ ವಿಚಾರಗಳ ಕುರಿತು ಶ್ರೀಗಳ ಮಾರ್ಗದರ್ಶನ ಪಡೆದಿದ್ದಾರೆ ಎಂಬ ಮಾಹಿತಿ ಮಠದ ಮೂಲಗಳಿಂದ ತಿಳಿದುಬಂದಿದೆ.