ಚಾಮರಾಜನಗರ: ಸಲೂನ್‌ಗೆ ಬಂದ ಮಂಗಕ್ಕೆ ಹೇರ್‌ ಕಟ್ ಮಾಡಿಸಿದ ಕ್ಷೌರಿಕ!

Kannadaprabha News   | Kannada Prabha
Published : May 09, 2026, 07:18 AM IST
Chamarajanagar Barber Gives Haircut to Monkey That Walked Into Salon

ಸಾರಾಂಶ

ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿಯ ಸಲೂನ್‌ ಒಂದಕ್ಕೆ ನಿತ್ಯ ಭೇಟಿ ನೀಡುತ್ತಿದ್ದ ಕೋತಿಗೆ, ಅದರ ಮಾಲೀಕ ದೇವರಾಜ್ ತಮಾಷೆಗಾಗಿ ಹೇರ್‌ ಸ್ಟೈಲ್ ಮಾಡಿದ್ದಾರೆ. ಮನುಷ್ಯರಂತೆ ತಲೆಬಗ್ಗಿಸಿ ಕುಳಿತು ಕೋತಿ ಸಹಕರಿಸಿದ್ದು, ಈ ಅಪರೂಪದ ಘಟನೆಯನ್ನು ಗ್ರಾಹಕರೊಬ್ಬರು ವೀಡಿಯೋ ಮಾಡಿದ್ದಾರೆ.

 ಚಾಮರಾಜನಗರ (ಮೇ.9) ಚೇಷ್ಟೆಗೆ ಹೆಸರಾಗಿರುವ ಕೋತಿಗಳು ಒಮ್ಮೊಮ್ಮೆ ತಮ್ಮ ವಿಶೇಷ ವರ್ತನೆಗಳಿಂದ ಎಲ್ಲರ ಗಮನ ಸೆಳೆಯುತ್ತವೆ. ಜೊತೆಗೆ, ನೋಡುಗರ‌‌ ಮೊಗದಲ್ಲಿ ನಗುವನ್ನು ಉಕ್ಕಿಸುತ್ತವೆ. ಅದರಂತೆ, ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿಯಲ್ಲಿ ಕೋತಿಗೆ ಹೇರ್‌ ಸ್ಟೈಲ್ ಮಾಡಿದ ಅಪರೂಪದ ಘಟನೆ ನಡೆದಿದೆ.

ಗ್ರಾಮದ ದೇವು ಸಲೂನ್ ಎಂಬಲ್ಲಿಗೆ ಕೋತಿಯೊಂದು ದಿನವೂ ಬಂದು ಹೋಗುತ್ತಿತ್ತು.‌ ಕನ್ನಡಿ‌ ನೋಡುತ್ತಾ ಕುಳಿತುಕೊಳ್ಳುತ್ತಿತ್ತು.‌ ಇದನ್ನು ಗಮನಿಸಿದ ಸಲೂನ್ ಮಾಲೀಕ ದೇವರಾಜ್‌ ಗದರಿಸಿದರೂ‌ ಕೋತಿ ಸಲೂನ್ ಬಿಟ್ಟು ಹೋಗುತ್ತಿರಲಿಲ್ಲ.

ಗುರುವಾರದಂದು ಸಲೂನ್‌ಗೆ ಬಂದ ಮಂಗನನ್ನು ಕಂಡ ದೇವರಾಜ್ ಮೊದಲು ತಲೆ ಬಾಚಿದ್ದಾರೆ. ಪ್ರೀತಿಯಿಂದ ತಲೆ ಬಾಚಿದ್ದನ್ನು ಗಮನಿಸಿದ ಕೋತಿ ಮನುಷ್ಯರಂತೆ ತಲೆ ಬಗ್ಗಿಸಿ ಕುಳಿತಿದೆ.‌ ನಂತರ ಹೇರ್‌ ಸ್ಟೈಲ್ ಮಾಡಿದ್ದು, ಅಲ್ಲಿಯೇ ಇದ್ದ ಗ್ರಾಹಕರೊಬ್ಬರು ವಿಡಿಯೋ ಸೆರೆ ಹಿಡಿದಿದ್ದಾರೆ.

ಈ ಕುರಿತು ದೇವರಾಜು ಮಾತನಾಡಿ, ಗುಂಪೊಂದರಲ್ಲಿ ಇದ್ದ ಈ ಮಂಗ ದಿನನಿತ್ಯ ಸಲೂನ್ ಬಳಿ ಬರುತ್ತಿತ್ತು. ಎಷ್ಟೇ ಗದರಿಸಿದರೂ ನನ್ನ ಕೆಲಸ ಮುಗಿಯುವವರೆಗೂ ಅಲ್ಲಿಂದ ಕದಲುತ್ತಿರಲಿಲ್ಲ. ತಮಾಷೆಗಾಗಿ ತಲೆ ಬಾಚಿದೆ, ಕೋತಿ ತಲೆ ಬಗ್ಗಿಸಿ ಕುಳಿತು ಮತ್ತಷ್ಟು ತಲೆ ಬಾಚುವಂತೆ ಕೇಳಿಕೊಳ್ಳುವಂತೆ ವರ್ತಿಸಿದಾಗ ಹೇರ್‌ಸ್ಟೈಲ್ ಮಾಡಿದೆ ಎಂದರು.

PREV
Read more Articles on
click me!

Recommended Stories

ಕಾಣೆಯಾಗಿದ್ದ 1.5 ವರ್ಷದ ಮಗು, ಇಡೀ ರಾತ್ರಿ ಕತ್ತಲು, ಮಳೆಗೆ ಹಳ್ಳದಲ್ಲೇ ಕೂತಿದ್ದ ಕಂದನ ಪೊಲೀಸರು ಪತ್ತೆ ಹಚ್ಚಿದ್ದು ಹೇಗೆ ಗೊತ್ತಾ?
ಪ್ರಧಾನಿ ಮೋದಿ ಆಗಮನ: ನಾಳೆ ನಗರದಲ್ಲಿ ವಾಹನ ಸಂಚಾರ ಮಾರ್ಗ ಬದಲು