Bagalakote: ಮುರುಗೇಶ್‌ ನಿರಾಣಿ ಸಕ್ಕರೆ ತಿರಸ್ಕರಿಸಿದ ಮಹಿಳೆ: ಬೆಂಬಲಿಗರಿಗೆ ಅವಮಾನ

By Sathish Kumar KH  |  First Published Feb 9, 2023, 6:22 PM IST

ಮನೆ ಮನೆಗೆ ಹಂಚಿದ ಸಕ್ಕರೆ ತಿರಸ್ಕರಿಸಿದ ಮಹಿಳೆ
ರಾಜಕೀಯ ಆಮಿಷಕ್ಕೆ ಒಳಗಾಗದ ಮಹಿಳೆಯ ವಿಡಿಯೋ ವೈರಲ್
ಬಾಗಲಕೋಟೆ ಜಿಲ್ಲೆಯ ಬೀಳಗಿ ಮತಕ್ಷೇತ್ರದ ಗಲಗಲಿಯಲ್ಲಿ ಘಟನೆ


ಬಾಗಲಕೋಟೆ (ಫೆ.09): ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಬೆಂಬಲಿಗರು ಹಂಚಿಕೆ ಮಾಡುತ್ತಿದ್ದ ಸಕ್ಕರೆಯನ್ನ ಮಹಿಳೆಯೊಬ್ಬಳು ತಿರಸ್ಕರಿಸಿ ಸಕ್ಕರೆ ಚೀಲ ಮರಳಿ ಕೊಂಡೊಯ್ಯುವಂತೆ ಹೇಳಿರೋ ವಿಡಿಯೋ ಇದೀಗ ವೈರಲ್ ಆಗಿದೆ.

ಹೌದು, ಬಾಗಲಕೋಟೆ ಜಿಲ್ಲೆಯ  ಬೀಳಗಿ ಮತಕ್ಷೇತ್ರದ ಗಲಗಲಿ ಗ್ರಾಮದಲ್ಲಿ ನಿರಾಣಿ ಅವರ ಬೆಂಬಲಿಗರು ಮನೆ ಮನೆಗೆ ಸಕ್ಕರೆ ಹಂಚಿಕೆ ಮಾಡಲು ಮುಂದಾಗಿದ್ದಾರೆ. ಈ ವೇಳೆ ಮಹಿಳೆಯೊಬ್ಬರ ಮನೆ ಮುಂದೆ ನಿಂತು ಸಕ್ಕರೆ ಚೀಲ ತಂದು ಕೊಡಲು ಹೋದಾಗ, ಸಕ್ಕರೆಯನ್ನ ಸ್ವೀಕರಿಸಲು ನಿರಾಕರಿಸಿದ ಮಹಿಳೆ ಮರಳಿ ಕೊಂಡೊಯ್ಯುವಂತೆ ಸೂಚಿಸಿದ್ದಾರೆ.

Tap to resize

Latest Videos

undefined

ಸೋಶಿಯಲ್ ಮೀಡಿಯಾದಲ್ಲಿ ಮಹಿಳೆಗೆ ಬೆಂಬಲ:  ಇನ್ನು ಸಕ್ಕರೆ ಚೀಲ ತೆಗೆದುಕೊಳ್ಳಲು ನಿರಾಕರಿಸಿದ ಮಹಿಳೆ. ಒತ್ತಾಯಪೂರ್ವಕವಾಗಿ ನೀಡಲು ಮುಂದಾದ ಸಕ್ಕರೆ ಚೀಲವನ್ನ ತಂದು ತಮ್ಮ ಮನೆಯ ಬಾಗಿಲು ಹೊರಗೆ ಇಟ್ಟಿದ್ದು, ಸಕ್ಕರೆ ಚೀಲ ನಿರಾಕರಿಸಿದ ಮಹಿಳೆಯ ವರ್ತನೆಗೆ ಸೋಶಿಯಲ್ ಮಿಡಿಯಾದಲ್ಲಿ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. ಗ್ರಾಮದಲ್ಲಿ ಈ ರೀತಿ ಮಹಿಳೆಯರ ವರ್ತನೆ ಬೆಂಬಲಿಸಿ ವಿಡಿಯೋ ಶೇರ್ ಮಾಡಿರೋ ಸಾಮಾಜಿಕ ಕಾರ್ಯಕರ್ತ ಯಲ್ಲಪ್ಪ ಹೆಗಡೆ ಈ ತಾಯಿಗಿರುವ ನಿಯತ್ತಿಗೆ ಜನತೆಯಿಂದ‌ ಧನ್ಯವಾದಗಳನ್ನ ಅರ್ಪಿಸಿದ್ದು, ಚುನಾವಣೆ ಸಮೀಪಿಸುತ್ತಿರುವಾಗ  ಆಸೆ, ಆಮಿಷಗಳಿಗೆ ಬಲಿಯಾಗದೆ ಪ್ರಬುದ್ಧತೆ ತೋರುವ ಇಂತಹ ಜನರಿಂದ ಮಾತ್ರ ಪ್ರಜಾಪ್ರಭುತ್ವ ಉಳಿಯಲು ಸಾಧ್ಯ. ಇಂತಹ ಆಲೋಚನೆ ಎಲ್ಲ ಮತದಾರರಿಗೂ ಬರಬೇಕಿದೆ ಎಂದು ಪೋಸ್ಟ್ ಮಾಡಿದ್ದಾರೆ.

ರಮೇಶ ಜಾರಕಿಹೊಳಿ ನಮ್ಮ ರಾಷ್ಟ್ರೀಯ ನಾಯಕರನ್ನ ಭೇಟಿ ಮಾಡಿದ್ದು ತಪ್ಪಲ್ಲ:ಸಚಿವ ಮುರುಗೇಶ ನಿರಾಣಿ

ಮೂರು ಬಾರಿ ಗೆಲ್ಲಿಸಿ ಮಂತ್ರಿ ಮಾಡಿದ ಬೀಳಗಿ ಜನ: ಬಾಗಲಕೋಟೆ (ಫೆ.5):  ಸಚಿವ ನಿರಾಣಿ ಜಮಖಂಡಿ ಮತಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರೆ ಎಂಬ ಚರ್ಚೆ ಹಿನ್ನೆಲೆ ಸ್ವತಃ ಪ್ರತಿಕ್ರಿಯೆ ನೀಡಿರುವ ಅವರು, ನಾನು ಬಹಳಷ್ಟು ಸಾರಿ ಇದನ್ನ ಹೇಳಿದ್ದಿನಿ. ಪ್ರತಿ ವಾರ ಮೂರು ದಿನ ಬೀಳಗಿಯಲ್ಲೇ ಇರ್ತೇನೆ. ಜಮಖಂಡಿ ಯಲ್ಲಿ ಒಂದೇ ಒಂದು ದಿನ ಇದ್ದ ಉದಾಹರಣೆ ಹೇಳಿ.‌ ಕಂಟಿನ್ಯೂ ನಾನು ಬೀಳಗಿಯಲ್ಲೇ ಇರೋದು,  ಬೀಳಗಿ ಜನರೇ ಮೂರು ಬಾರಿ ಎಂಎಲ್‌ಎ ಮಾಡಿ, ಎರಡು ಬಾರಿ ಮಂತ್ರಿ ಮಾಡಿದ್ದಾರೆ. ಅದರ ಸಲುವಾಗಿ ಬೀಳಗಿ ಜನರ ಋಣವನ್ನು ಜೀವನದುದ್ದಕ್ಕೂ ಪ್ರಾಮಾಣಿಕವಾಗಿ ಕೆಲಸ ಮಾಡಿದ್ರೂ ಮುಟ್ಟಿಸಲಿಕ್ಕೆ ಆಗಲ್ಲ. ಬರುವ ದಿನಗಳಲ್ಲಿ ನೂರಕ್ಕೂ ನೂರು ಬೀಳಗಿಯಲ್ಲೇ ಸ್ಪರ್ಧೆ ಮಾಡ್ತಿನಿ ಎಂದರು.

ಪ್ರಾಮಾಣಿಕವಾಗಿ ಜಮಖಂಡಿ ಅಭ್ಯರ್ಥಿ ಗೆ ಸಪೋರ್ಟ್: ಇನ್ನು ಜಮಖಂಡಿಯಲ್ಲಿ ಒತ್ತಡ ಸ್ವಾಭಾವಿಕ, ಅಲ್ಲಿ 33 ಹಳ್ಳಿ , ಅರ್ಧ ಜಮಖಂಡಿ ನನಗೆ ಬರತಿರೋದ್ರಿಂದ. ಮತ್ತು ವ್ಯವಹಾರದಲ್ಲಿ ಸಂಬಂಧ ಇರೋದ್ರಿಂದ, ಹತ್ತಿರದಲ್ಲಿರೋದ್ರಿಂದ ಅವರು ಇಲ್ಲಿ ಸಾಕಷ್ಟು ಅಭಿವೃದ್ಧಿ ಆಗಿದೆ, ಹಾಗಾಗಿ ಇಲ್ಲಿ ನಿಲ್ಲರಿ ಎಂಬ ಮನವಿ ಇದ್ದೇ ಇದೆ.  ಬಹಳ ಸ್ಪಷ್ಟವಾಗಿ ಹೇಳಿದ್ದೀನಿ ಇವತ್ತೂ ಹೇಳ್ತಿನಿ. ಕ್ಷೇತ್ರದ ಜನತೆಗೆ ಅಂಶಯ ಬೇಡ ನಾನು ಬೀಳಗಿಯಿಂದಲೇ ಸ್ಪರ್ಧೆ ಮಾಡ್ತಿನಿ. ನಮ್ಮಲ್ಲಿ ಯಾವ ಅಭ್ಯರ್ಥಿಯನ್ನ ಜಮಖಂಡಿ ಗೆ ಕೊಡ್ತಾರೆ. ಪ್ರಾಮಾಣಿಕವಾಗಿ ಜಮಖಂಡಿ ಅಭ್ಯರ್ಥಿ ಗೆ ಸಪೋರ್ಟ್ ಮಾಡ್ತಿನಿ. ನಮ್ಮ ಮನೆಯಲ್ಲಿ ಮುರುಗೇಶ ನಿರಾಣಿ, ಹನುಮಂತ ನಿರಾಣಿ ಬಿಟ್ಟು ಸ್ಪರ್ಧೆ ಮಾಡೋದಿಲ್ಲ.

Assembly election: ನಿರಾಣಿ ಹೇಳಿಕೆ ಹಿನ್ನೆಲೆ; ಕಲಬುರಗಿ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ!

 

 

ಭಗವಂತನ ಆಶೀರ್ವಾದದಿಂದ ಸಾಕಷ್ಟು ಕೈಗಾರಿಕೆಗಳು ಅಭಿವೃದ್ಧಿ ಆಗಿವೆ. ಕೇವಲ ನಮ್ಮ ರಾಜ್ಯದಲ್ಲಿ ಅಲ್ಲಿ, ಇಡೀ ದೇಶದಲ್ಲೇ ನಂಬರ್ ಒನ್ ಅನ್ನುವ ಸ್ಥಾನಕ್ಕೆ ನಾನು ಬಂದಿದ್ದೇನೆ. ಅದನ್ನ ನಮ್ಮ ಸಹೋದರ, ಮಕ್ಕಳು‌ ಮಾಡ್ತಿದ್ದಾರೆ. ನಮ್ಮನ್ನ ಹೊರತುಪಡಿಸಿ ಯಾರೂ ರಾಜಕಾರಣಕ್ಕೆ ಬರೋದಿಲ್ಲ,ಅದರ ಸಂಶಯ ಬೇಡ ಎಂದು ಸಚಿವ ನಿರಾಣಿ ಹೇಳಿದರು.

click me!