ಅಂತಾರಾಷ್ಟ್ರೀಯ ಯೋಗ ಗುರು ಬಾಬಾ ರಾಮ್ ದೇವ್ ಅವರು ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ, ಹರಿದ್ವಾರದ ಪತಂಜಲಿ ಪೀಠದ ವತಿಯಿಂದ ಉಡುಪಿ ಶ್ರೀ ಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ನಡೆಸುತ್ತಿರುವ ಬೃಹತ್ ಯೋಗ ಶಿಬಿರದ 3ನೇ ದಿನ ಸೋಮವಾಗ ಬೆಳಗ್ಗೆ ಸಾರ್ವಜನಿಕರಿಗೆ, ಸಂಜೆ ಮಹಿಳೆಯರು ಮತ್ತು ಮಕ್ಕಳಿಗಾಗಿಯೇ ವಿಶೇಷ ಶಿಬಿರವನ್ನು ನಡೆಸಿದ್ದಾರೆ.
ಉಡುಪಿ(ನ.19): ಅಂತಾರಾಷ್ಟ್ರೀಯ ಯೋಗ ಗುರು ಬಾಬಾ ರಾಮ್ ದೇವ್ ಅವರು ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ, ಹರಿದ್ವಾರದ ಪತಂಜಲಿ ಪೀಠದ ವತಿಯಿಂದ ಉಡುಪಿ ಶ್ರೀ ಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ನಡೆಸುತ್ತಿರುವ ಬೃಹತ್ ಯೋಗ ಶಿಬಿರದ 3ನೇ ದಿನ ಸೋಮವಾಗ ಬೆಳಗ್ಗೆ ಸಾರ್ವಜನಿಕರಿಗೆ, ಸಂಜೆ ಮಹಿಳೆಯರು ಮತ್ತು ಮಕ್ಕಳಿಗಾಗಿಯೇ ವಿಶೇಷ ಶಿಬಿರವನ್ನು ನಡೆಸಿದ್ದಾರೆ.
ಮಹಿಳಾ-ಮಕ್ಕಳ ಶಿಬಿರದಲ್ಲಿ ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು, ತರಂಗ ನಿಯತಕಾಲಿಕದ ವ್ಯವಸ್ಥಾಪಕ ಸಂಪಾದಕಿ ಸಂಧ್ಯಾ ಎಸ್.ಪೈ ಮತ್ತಿತರರು ಭಾಗವಹಿಸಿದ್ದರು.
ವಿಜಯನಗರ ಬಿಜೆಪಿ ಬಂಡಾಯ ಅಭ್ಯರ್ಥಿಗೆ 101 ಲೀ. ಕ್ಷೀರಾಭಿಷೇಕ!
ಈ ಸಂದರ್ಭದಲ್ಲಿ ಬಾಬಾ ರಾಮದೇವ್ ಅವರು ಮಹಿಳೆಯರು ಮತ್ತು ಮಕ್ಕಳಿಗೆ ವಿಶೇಷವಾದ ಯೋಗಗಳನ್ನು ತಿಳಿಸಿಕೊಟ್ಟರು. ವಿಶೇಷವಾಗಿ ಮಹಿಳೆಯರು ತಮ್ಮ ಅರೋಗ್ಯವನ್ನು ಕಾಪಾಡುವಲ್ಲಿ ಮಾಡಬೇಕಾದ ಯೋಗಾಸನ ಮತ್ತು ವಹಿಸಬೇಕಾದ ಜಾಗರೂಕತೆಯ ಬಗ್ಗೆ ಸಂದೇಶವನ್ನು ನೀಡಿದರು. ಮಕ್ಕಳು ಮನೋನಿಗ್ರಹ ಮತ್ತು ಏಕಾಗ್ರತೆಗೆ ಅಗತ್ಯವಾದ ಆಸನಗಳ ಬಗ್ಗೆ ವಿವರಗಳನ್ನು ನೀಡಿದ್ದಾರೆ.
ಸಾಲ ವಾಪಸ್ ಕೇಳಿದ್ದಕ್ಕೆ ಪೊಲೀಸ್ ಪೇದೆಯಿಂದ ಲೈಂಗಿಕ ಕಿರುಕುಳ.
ಶಿಬಿರದಲ್ಲಿ ಉಡುಪಿಯ ವಿವಿಧ ಶಾಲೆಗಳ ವಿದ್ಯಾರ್ಥಿಗಳು, ವಿಶೇಷ ಮಠದ ಸಂಸ್ಕೃತ, ಪೌರೋಹಿತ್ಯ ವಿದ್ಯಾರ್ಥಿಗಳು ಭಾಗವಹಿಸಿ ಯೋಗಾಸನಗಳನ್ನು ಕಲಿತುಕೊಂಡರು.