ಕಾಫಿನಾಡಿನ ಮನೆ ಮನೆಗಳ ಮೇಲೆ ಜೈ ಶ್ರೀ ರಾಮ್ ನಾಮಫಲಕ

By Suvarna News  |  First Published Jan 17, 2024, 9:20 PM IST

500 ವರ್ಷಗಳ ವನವಾಸದ ಬಳಿಕ ಐತಿಹಾಸಿಕ ಅಯೋಧ್ಯೆಯಲ್ಲಿ ರಾಮ ಲಲ್ಲನ ಪ್ರತಿಷ್ಠಾಪನೆ ಸಂತಸ ಸಡಗರಕ್ಕೆ ಸಾಕ್ಷಿಯಾಗಿದೆ. ಇದೀಗ ಕಾಫಿನಾಡಲ್ಲೂ ಅಂತಹುದೇ ಸಂಭ್ರಮ ಪ್ರತಿ ಮನೆ ಮನದಲ್ಲೂ ಮಿಡಿಯ ತೊಡಗಿದ್ದು, "ಜೈ ಶ್ರೀ ರಾಮ್" ಕೇಸರಿ ನಾಮಫಲಕ ಅಭಿಯಾನ ಗಮನ ಸೆಳೆಯುತ್ತಿದೆ.


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಜ.17): 500 ವರ್ಷಗಳ ವನವಾಸದ ಬಳಿಕ ಐತಿಹಾಸಿಕ ಅಯೋಧ್ಯೆಯಲ್ಲಿ ರಾಮ ಲಲ್ಲನ ಪ್ರತಿಷ್ಠಾಪನೆ ಸಂತಸ ಸಡಗರಕ್ಕೆ ಸಾಕ್ಷಿಯಾಗಿದೆ. ಇದೀಗ ಕಾಫಿನಾಡಲ್ಲೂ ಅಂತಹುದೇ ಸಂಭ್ರಮ ಪ್ರತಿ ಮನೆ ಮನದಲ್ಲೂ ಮಿಡಿಯ ತೊಡಗಿದ್ದು, "ಜೈ ಶ್ರೀ ರಾಮ್" ಕೇಸರಿ ನಾಮಫಲಕ ಅಭಿಯಾನ ಗಮನ ಸೆಳೆಯುತ್ತಿದೆ. ಕಾಫಿನಾಡಿನಲ್ಲಿ ಶ್ರೀ ರಾಮನ ಜಪ ಆರಂಭವಾಗಿದೆ. 

Tap to resize

Latest Videos

ಶ್ರೀ ರಾಮ್ ಅನ್ನೋ ಕೇಸರಿ ಬರಹ :  
ದೇಶ ಸೇರದಂತೆ ವಿಶ್ವದಲ್ಲೆಡೆ ರಾಮನ ಜಪ ಜೋರಾಗಿ ಸದ್ದಾಗುತ್ತಿದೆ. ಇತ್ತ ಕಾಫಿ ನಾಡಲ್ಲು ಏನು ಕಡಿಮೆ ಇಲ್ಲದಂತೆ ರಾಮನಜಪ ಆರಂಭವಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಹಿಂದೂಪರ ಕಾರ್ಯಕರ್ತರು ಮುಖಂಡರು ಮನೆಮನೆಗಳಿಗೆ ತೆರಳಿ ಜೈ ಶ್ರೀರಾಮ್ ಅನ್ನೋ ಘೋಷ ವಾಕ್ಯ ಬರಹಗಳನ್ನ ಮೂಡಿಸಿ ಅಯೋಧ್ಯೆ ಪ್ರಾಣ ಪ್ರತಿಷ್ಠಾಪನೆಗೆ ರಂಗು ನೀಡುತ್ತಿದ್ದಾರೆ. ರಾಮ ಲಲ್ಲನ ಪ್ರಾಣ ಪ್ರತಿಷ್ಠಾಪನೆಯವರೆಗೆ ಚಿಕ್ಕಮಗಳೂರಿನ ಸಾವಿರಾರು ಮನೆಗಳಿಗೆ ಜೈ ಶ್ರೀ ರಾಮ್ ಅನ್ನೋ ಘೋಷಣೆಗಳನ್ನು ಗೋಡೆಗಳ ಮೇಲೆ ಹಿಂದೂ ಕಾರ್ಯಕರ್ತರು ಬಿಡಿಸುವ ಮೂಲಕ ಅಭಿಯಾನಕ್ಕೆ ಕೈಜೋಡಿಸಿದ್ದಾರೆ. ಚಿಕ್ಕಮಗಳೂರು ನಗರದ ಹೊರವಲಯದ ಕಲ್ದೊಡ್ಡಿ ಬಡಾವಣೆಯಲ್ಲಿ ಈಗಾಗಲೇ ಸಾವಿರಾರು ಮನೆಗಳ ಗೋಡೆಗಳ ಮೇಲೆ ಕೇಸರಿ ಜೈ ಶ್ರೀರಾಮ್ ಬರಹ ರಾರಾಜಿಸುತ್ತಿದ್ದು, ಕೆಲವರು ಧರ್ಮ ಮರೆತು ಜೈ ಶ್ರೀ ರಾಮ್ ಅಭಿಯಾನಕ್ಕೆ ಸಾಮರಸ್ಯ ಮೆರೆಯುತ್ತಿದ್ದಾರೆ.

ರಾಮ ಮಂದಿರ ಪ್ರಾಣಪ್ರತಿಷ್ಠಾಪನೆ ದಿನ ರಜೆ ಘೋಷಿಸಿ, ಸಿಜೆಐಗೆ ಪತ್ರ ಬರೆದ ಭಾರತೀಯ ವಕೀಲರ ಸಂಘ!

ಭಾವೈಕ್ಯತೆಗೆ ಸಾಕ್ಷಿಯಾದ ಬಡಾವಣೆ ಜನ : 
ಅಯೋಧ್ಯೆಯಲ್ಲಿ ರಾಮಲಲ್ಲನ ಪ್ರತಿಷ್ಠಾಪನೆಯ ಕೊನೆಯ ದಿನದವರೆಗೂ ಎಷ್ಟು ಸಾಧ್ಯವಾಗುತ್ತೋ ಅಷ್ಟು ಮನೆಗಳಿಗೂ ಜೈ ಶ್ರೀ ರಾಮ್ ಗೋಡೆ ಬರಹ ಅಭಿಯಾನವನ್ನು ಮುಂದುವರಿಸಲು ವಿವಿಧ ಹಿಂದೂಪರ ಸಂಘಟನೆಗಳು ಮುಂದಾಗಿದ್ದು ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಕೆಲವು ಮುಸ್ಲಿಂ ಕುಟುಂಬದವರು ಕ್ರಿಶ್ಚಿಯನ್ ಸಮಾಜದವರು ಕೂಡ ತಮ್ಮ ಮನೆಯ ಗೋಡೆಗಳ ಮೇಲೆ ಜೈ ಶ್ರೀ ರಾಮ್ ಬರಹ ಬರೆಸಿಕೊಂಡು ಧರ್ಮ ಸಾಮರಸ್ಯ ಮೂಡಿಸುತ್ತಿರುವುದು ನಿಜಕ್ಕೂ ಸಂತಸ ಪಡುವ ವಿಚಾರ.

ಕಲುಷಿತ ನೀರು‌ ಸೇವಿಸಿ ಆರು ಮಂದಿ ಸಾವು ಹಿನ್ನೆಲೆ, ಕಾವಾಡಿಗರಹಟ್ಟಿಗೆ ಹೈಟೆಕ್ ಸ್ಪರ್ಶ ನೀಡಲು ಮುಂದಾದ ಸರ್ಕಾರ

ಅತ್ತ ಅಯೋಧ್ಯೆಯಲ್ಲಿ ಐತಿಹಾಸಿಕ ಕ್ಷಣಕ್ಕೆ ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿದ್ದರೆ ಇತ್ತ ಕರುನಾಡಿನ ಪ್ರತಿ ಮನೆ ಮನೆಗಳಲ್ಲಿ ಜೈ ಶ್ರೀ ರಾಮ್ ಅನ್ನೋ ಘೋಷಣೆ ಮಿಡಿಯುತ್ತಿರುವುದು ಹಿಂದೂಪರ ಸಂಘಟನೆಗಳಲ್ಲಿ ಹರ್ಷ ಮೂಡಿಸಿದೆ.ಒಟ್ಟಾರೆ ರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ಇನ್ನು ಕೇವಲ ನಾಲ್ಕು ದಿನಗಳು ಬಾಕಿ ಇರುವಂತೆಯೇ ಕಾಫಿ ನಾಡಿನದ್ಯಂತ ಹಿಂದೂ ಪರ ಸಂಘಟನೆಗಳು ರಾಮನ ಕುರಿತಾದ ವಿವಿಧ ಅಭಿಯಾನಗಳನ್ನು ಆರಂಭಿಸಿದ್ದು ಪ್ರತಿ ಹಿಂದೂ ಮನೆಗಳಿಗಲ್ಲಿ ರಾಮನ ಹಬ್ಬದಂತೆ ಆಚರಿಸಿ ಇತಿಹಾಸ ಸೃಷ್ಟಿಸಲು ಮುಂದಾಗಿರುವುದು ರಾಮಭಕ್ತರಲ್ಲಿ ಸಂತಸ ಮೂಡಿಸಿದೆ.

click me!