ಗಂಡನ ಕಿರುಕುಳಕ್ಕೆ ಬೇಸತ್ತು ಎರಡು ಹೆಣ್ಣು ಮಕ್ಕಳೊಂದಿಗೆ ಬಾವಿಗೆ ಹಾರಿದ ತಾಯಿ

By Sathish Kumar KH  |  First Published Jan 17, 2024, 6:39 PM IST

ಗಂಡನ ಕಿರುಕುಳದಿಂದ ಮನನೊಂದು ತನ್ನ ಎರಡು ಹೆಣ್ಣು ಮಕ್ಕಳನ್ನು ಹೆತ್ತ ತಾಯಿಯೇ ಬಾವಿಗೆ ತಳ್ಳಿ ಕೊಲೆಗೈದು ನಂತರ ತಾನೂ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ.


ಚಿಕ್ಕೋಡಿ (ಜ.17): ಗಂಡನ ಕಿರುಕುಳದಿಂದ ಮನನೊಂದು ತನ್ನ ಎರಡು ಹೆಣ್ಣು ಮಕ್ಕಳನ್ನು ಹೆತ್ತ ತಾಯಿಯೇ ಬಾವಿಗೆ ತಳ್ಳಿ ಕೊಲೆಗೈದು ನಂತರ ತಾನೂ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಸುಲ್ತಾನಪುರ ಗ್ರಾಮದ ಹೊರವಲಯದಲ್ಲಿ ಮನಕುಲಕುವ ಘಟನೆ ನಡೆದಿದೆ. ಎರಡು ಹೆಣ್ಣು ಮಕ್ಕಳ ಜೋತೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ತಾಯಿ ಸರಸ್ವತಿ ಕಿರವೆ (26), ಮಕ್ಕಳಾದ ದೀಪಿಕಾ (7), ಹಾಗೂ ರೀತಿಕಾ (4) ಮೃತ ದುರ್ದೈವಿಗಳು ಆಗಿದ್ದಾರೆ. ಮಹಾರಾಷ್ಟ್ರ ಸಾಂಗ್ಲಿಯ ಕಿರಣ ಎಂಬುವವರ ಜೊತೆ ಸರಸ್ವತಿ ಅವರನ್ನು 2016ರಲ್ಲಿ ವಿವಾಹ ಮಾಡಿಕೊಡಲಾಗಿತ್ತ. ಆದರೆ, ಗಂಡನ ಕಿರುಕುಳಕ್ಕೆ ಬೇಸತ್ತು ಸರಸ್ವತಿ ತವರು ಮನೆ ಸುಲ್ತಾನಪುರಕ್ಕೆ ಬಂದಿದ್ದಳು. ಈಗ ಮಕ್ಕಳನ್ನು ಬಾವಿಗೆ ತಳ್ಳಿ ತಾನೂ ಸಾವಿನ ಹಾದಿ ಹಿಡಿದಿದ್ದಾಳೆ.

Tap to resize

Latest Videos

Bengaluru FIR: ಒಂಟಿ ಮಹಿಳೆಯ ಕತ್ತು ಹಿಸುಕಿ ಪರಾರಿ, 800 ಸಿಸಿ ಟಿವಿಗಳಲ್ಲಿ ಕಂಡಿದ್ದು ಕಾಲಷ್ಟೇ!

ಇನ್ನು ಮೃತ ದೇಹಗಳನ್ನು ಬಾವಿಯಿಂದ ಹೊರ ತೆಗೆದ ಮೃತರ ಕುಟುಂಬಸ್ಥರು ಗಂಡನ ಮನೆಯ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪ ಮಾಡೊದ್ದಾರೆ. ಸರಸ್ವತಿ ಕಳೆದ 8 ತಿಂಗಳ ಹಿಂದೆಯೇ ಗಂಡನೊಂದಿಗೆ ಜಗಳವಾಡಿಕೊಂಡು ತವರು ಮನೆ ಸೇರಿದ್ದಳು. ಇನ್ನು ಗಂಡ ಒಂದು ದಿನಕ್ಕೂ ತವರು ಮನೆಗೆ ಬಂದು ಹೆಂಡತಿ ಮಕ್ಕಳನ್ನು ನೋಡಿ ಕರೆದುಕೊಂಡು ಹೋಗುವ ಪ್ರಯತ್ನವನ್ನೂ ಮಾಡಿಲ್ಲ. ಇನ್ನು ಆಗಾಗ್ಗೆ ಫೋನ್‌ ಮಾಡಿ ಬಾಯಿಗೆ ಬಂದಂತೆ ಬೈದು ಕಿರುಕುಳ ನೀಡುತ್ತಿದ್ದನು. ಇದರಿಂದ ಮನನೊಂದು ಆಕೆ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತವರು ಮನೆಯವರು ಹೇಳಿದ್ದಾರೆ. ಸ್ಥಳಕ್ಕೆ ಹಾರೂಗೇರಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಘಟನೆ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

click me!