Dharwad: ಅಪಾಯಕಾರಿ ಸ್ಧಿತಿಯಲ್ಲಿರುವ 192 ಮರಗಳ ಹರಾಜು, ಫೆ.19 ರೊಳಗೆ ತಕರಾರು ಸಲ್ಲಿಸಲು ಅವಕಾಶ

By Suvarna News  |  First Published Feb 17, 2023, 3:49 PM IST

ಧಾರವಾಡ ಶಹರದ ವಿವಿಧ ಬಡಾವಣೆಗಳ ರಸ್ತೆ ಬದಿ ಹಾಗೂ ವಿವಿಧ ಕಛೇರಿ ಆವರಣದಲ್ಲಿ ಅಪಾಯಕಾರಿ ಸ್ಧಿತಿಯಲ್ಲಿ 192 ಮರಗಳು ಮತ್ತು 155 ಟೊಂಗೆಗಳನ್ನು ವಲಯ ಅರಣ್ಯ ಅಧಿಕಾರಿ ಧಾರವಾಡರವರ ಕಛೇರಿಯಲ್ಲಿ ಫೆ. 22 ಹಾಗೂ 28 ರಂದು ಮಧ್ಯಾಹ್ನ 3 ಗಂಟೆಗೆ ಬಹಿರಂಗ ಹರಾಜು ಮಾಡಲು ಅರಣ್ಯ ಇಲಾಖೆ ನಿರ್ಧರಿಸಿದೆ.


ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ 

ಧಾರವಾಡ (ಫೆ.17): ಧಾರವಾಡ ಶಹರದ ವಿವಿಧ ಬಡಾವಣೆಗಳ ರಸ್ತೆ ಬದಿ ಹಾಗೂ ವಿವಿಧ ಕಛೇರಿ ಆವರಣದಲ್ಲಿ ಅಪಾಯಕಾರಿ ಸ್ಧಿತಿಯಲ್ಲಿ 192 ಮರಗಳು ಮತ್ತು 155 ಟೊಂಗೆಗಳನ್ನು ವಲಯ ಅರಣ್ಯ ಅಧಿಕಾರಿ ಧಾರವಾಡರವರ ಕಛೇರಿಯಲ್ಲಿ ಫೆ. 22 ಹಾಗೂ 28 ರಂದು ಮಧ್ಯಾಹ್ನ 3 ಗಂಟೆಗೆ ಬಹಿರಂಗ ಹರಾಜು ಮಾಡಲು ಅರಣ್ಯ ಇಲಾಖೆಯವರು ಕೋರಿರುತ್ತಾರೆ ಈ ಬಗ್ಗೆ ತಕರಾರು ಸಲ್ಲಿಸಬಯಸುವರು ಫೆ.19 ರೊಳಗೆ ಸಲ್ಲಿಸಬೇಕು.

Tap to resize

Latest Videos

ಧಾರವಾಡ ಶಹರದ ವಿವಿಧ ಬಡಾವಣೆಗಳ ರಸ್ತೆ ಬದಿ ಹಾಗೂ ವಿವಿಧ ಕಛೇರಿ ಆವರಣದಲ್ಲಿ ಅಪಾಯಕಾರಿ ಸ್ಧಿತಿಯಲ್ಲಿ 30 ಮರಗಳು ಮತ್ತು 56 ಟೊಂಗೆಗಳನ್ನು ವಲಯ ಅರಣ್ಯ ಅಧಿಕಾರಿ ಧಾರವಾಡರವರ  ಕಛೇರಿಯಲ್ಲಿ ಮಾ.09 ಮತ್ತು 16 ರಂದು ಮಧ್ಯಾಹ್ನ 3 ಗಂಟೆಗೆ ಬಹಿರಂಗ ಹರಾಜು ಮಾಡಲು ಅರಣ್ಯ ಇಲಾಖೆಯವರು ಕೋರಿರುತ್ತಾರೆ. ಈ ಬಗ್ಗೆ ತಕರಾರು ಸಲ್ಲಿಸಬಯಸುವರು ಮಾ.2 ರೊಳಗಾಗಿ ಸಲ್ಲಿಸಬಹುದು.

ಬೆಂಗಳೂರಿನಲ್ಲಿ ಮರಗಳಿಗೆ ಕೊಡಲಿ ಏಟು: 'ಮನಸು ಗಾಂಧಿ ಬಜಾರ್’ ಯೋಜನೆ ವಿರುದ್ಧ ಜನರ ಆಕ್ರೋಶ

ಹುಬ್ಬಳ್ಳಿ ಶಹರದ ವಿವಿಧ ಬಡಾವಣೆಗಳ ರಸ್ತೆ ಬದಿ ಹಾಗೂ ವಿವಿಧ ಕಛೇರಿ ಆವರಣದಲ್ಲಿ ಅಪಾಯಕಾರಿ ಸ್ಧಿತಿಯಲ್ಲಿ 43 ಮರಗಳು ಮತ್ತು 56 ಟೊಂಗೆಗಳು ವಲಯ ಅರಣ್ಯ ಅಧಿಕಾರಿ ಹುಬ್ಬಳ್ಳಿರವರ ಕಛೇರಿಯಲ್ಲಿ ಮಾ.14 ಮತ್ತು 21 ರಂದು ಮಧ್ಯಾಹ್ನ 3 ಗಂಟೆಗೆ ಬಹಿರಂಗ ಹರಾಜು ಮಾಡಲು ಅರಣ್ಯ ಇಲಾಖೆಯವರು ಕೋರಿರುತ್ತಾರೆ.  ಈ ಬಗ್ಗೆ ತಕರಾರು ಸಲ್ಲಿಸಬಯಸುವರು ತಮ್ಮ ತಕರಾರನ್ನು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಧಾರವಾಡ ಉಪ ವಿಭಾಗ ಧಾರವಾಡ ಹಾಗೂ ಮರ ಅಧಿಕಾರಿಯವರಿಗೆ ಅರಣ್ಯ ಸಂಕೀರ್ಣ ಕೆ.ಸಿ.ಪಾರ್ಕ ಎದುರು ಧಾರವಾಡದಲ್ಲಿ ಕಛೇರಿಯಲ್ಲಿ ಲಿಖಿತ ರೂಪದಲ್ಲಿ ಕಛೇರಿ ವೇಳೆಯಲ್ಲಿ ಮಾ.10 ರೊಳಗಾಗಿ ಸಲ್ಲಿಸಬಹುದಾಗಿದೆ.

Chikkamagaluru: ಕಾಡಿನ ರಕ್ಷಕನೇ ಭಕ್ಷಕನಾದ: ಮರಗಳನ್ನು ಕಡಿದು ಮಾರಿದ ಅರಣ್ಯಾಧಿಕಾರಿ ಸಸ್ಪೆಂಡ್

ನಿಗದಿತ ದಿನಾಂಕದೋಳಗೆ ತಕರಾರು ಸಲ್ಲಿಸದಿದ್ದರೆ ನಂತರ ಬಂದ ತಕರಾರುಗಳನ್ನು ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ದೂ. ಸಂ: 0836-2447092 ಸಂಪರ್ಕಿಸಬಹುದೆಂದು ಎಂದು ಧಾರವಾಡ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

click me!