ಧಾರವಾಡ: ಪ್ಲಾಸ್ಟಿಕ್ ವಸ್ತು ಬಳಸದೆ ಇತಿಹಾಸ ನಿರ್ಮಿಸಿದ ರಾಷ್ಟ್ರೀಯ ಯುವಜನೋತ್ಸವ..!

By Girish Goudar  |  First Published Feb 17, 2023, 2:22 PM IST

ಪರಿಸರ ಸ್ನೇಹಿ ವೇದಿಕೆ ಪರಿಕಲ್ಪನೆ ಯುವ ಅಧಿಕಾರಿಗಳ ವಿನೂತನ ಪ್ರಯತ್ನ, ವಿಲೇವಾರಿ ಮಾಡಬಹುದಾದ ರೂ.14 ಲಕ್ಷ ಮೊತ್ತದ ಪ್ಲಾಸ್ಟಿಕ್ ವಸ್ತುಗಳ ಬಳಕೆ. 


ವರದಿ: ಪರಮೇಶ್ವರ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ 

ಧಾರವಾಡ(ಫೆ.17):  ಧಾರವಾಡ ಜಿಲ್ಲೆಯಲ್ಲಿ 12 ರಿಂದ 16 ಜನವರಿ 2023 ರಂದು ನಡೆದ ರಾಷ್ಟ್ರೀಯ ಯುವಜನೋತ್ಸವವು ಬಹುತೇಕ ಕಡೆಗೆ ಯಾವುದೇ ಏಕ ಬಳಕೆ ಪ್ಲಾಸ್ಟಿಕ್ ವಸ್ತುಗಳನ್ನು ಉಪಯೋಗಿಸದೆಯೇ ಒಂದು ಇತಿಹಾಸವನ್ನು ನಿರ್ಮಿಸಲಾಗಿದೆ. 

Tap to resize

Latest Videos

ಧಾರವಾಡ ಜಿಲ್ಲಾಡಳಿತ ಆಯೋಜಿಸಿದ್ದಂತಹ 5 ದಿನಗಳ ಕಾರ್ಯಾಕ್ರಮದಲ್ಲಿ ದೇಶದ ವಿವಿದೆಡೆಯಿಂದ 7,000 ಯುವಜನತೆಯು ಒಳಗೊಂಡಂತೆ 10,000 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಈ ಬೃಹತ್ ಪ್ರಮಾಣದಲ್ಲಿ ಜನತೆಯ ಭಾಗವಹಿಸುವಿಕೆಯೊಂದಿಗೆ, ಅನಗತ್ಯ ತ್ಯಾಜ್ಯೋತ್ಪತ್ತಿಯನ್ನು ತಡೆಯುವ ಮೂಲಕ ಪ್ರಾಕೃತಿಕ ಸಂಪನ್ಮೂಲಗಳನ್ನು ಸಂರಕ್ಷಿಸುವ ಬಗ್ಗೆ  ಇಂದಿನ ಯುವಜನತೆಗೆ ಒಂದು ಪ್ರಮುಖ ಸಂದೇಶ ನೀಡುವ ಸಲುವಾಗಿ, ಈ ಯುವಜನೋತ್ಸವವನ್ನು ಒಂದು ಪರಿಸರ-ಸ್ನೇಹಿ ಹಸಿರು ಉತ್ಸವವನ್ನಾಗಿ ಮಾಡುವ ಬಗ್ಗೆ ನಾವು ಚಿಂತಿಸಿದ್ದೆವು ಎಂಬುದಾಗಿ ಪರಿಸರ-ಸ್ನೇಹಿ ಪ್ರಯತ್ನಗಳ ಮುಂದಾಳತ್ವ ವಹಿಸಿಕೊಂಡಿದ್ದ ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ನಿಯಮಿತದ (ಎಚ್‍ಡಿಎಸ್‍ಸಿಎಲ್) ವ್ಯವಸ್ಥಾಪಕ ನಿರ್ದೇಶಕ ಪ್ರಿಯಾಂಕ ಎಂ. ತಿಳಿಸಿದ್ದಾರೆ.

ಬಾಲ ಮತ್ತು ಕಿಶೋರ ಕಾರ್ಮಿಕರ ಪ್ರಕರಣ ಗಂಭೀರವಾಗಿ ಪರಿಗಣಿಸಿ: ಧಾರವಾಡ ಡಿಸಿ

ಬೆಂಗಳೂರು ಮೂಲದ ತ್ಯಾಜ್ಯ ನಿರ್ವಹಣೆಯಲ್ಲಿ ಒಂದು ಹೆಸರಾಂತ ಸಂಸ್ಥೆಯಾಗಿರುವ “ಸಾಹಸ್”, ಇವರನ್ನು ಸಂಪೂರ್ಣ ಕಾರ್ಯಕ್ರಮದ ಒಂದು ತ್ಯಾಜ್ಯ ವಸ್ತುಗಳ ನಿರ್ಧಾರಣಾ ಅಧ್ಯಯನ ನಡೆಸುವ ಸಲುವಾಗಿ ತೊಡಗಿಸಿಕೊಳ್ಳಲಾಗಿತ್ತು. ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ನಿಯಮಿತದ (ಎಚ್‍ಡಿಎಸ್‍ಸಿಎಲ್) ಹಾಗೂ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ (ಎಚ್‍ಡಿಎಂಸಿ) ಪರಿಸರ ಅಧಿಕಾರಿಗಳೊಂದಿಗೆ “ಸಾಹಸ್” ತಂಡವು ತ್ಯಾಜ್ಯ ವಸ್ತುಗಳನ್ನು ತಗ್ಗಿಸುವಿಕೆಯ ಕ್ರಮಗಳನ್ನು ನಿರ್ಧಾರಣೆ ಮಾಡಿತು ಹಾಗೂ ತನ್ನ ವರದಿಯನ್ನು ಅಳವಡಿಸಿಕೊಳ್ಳಲಾದ ಅತ್ಯಧಿಕ ಪ್ರಭಾವಪೂರ್ಣ ಕ್ರಮಗಳ ಮನ್ನಣೆಯಂತೆ ಒಂದು ಪ್ರಮಾಣಪತ್ರದೊಂದಿಗೆ ನೀಡಿತು.

ವರದಿಯಲ್ಲಿ ಗಮನಿಸಲಾದ ಕೆಲವು ಪ್ರಮುಖ ಅಂಶಗಳು: 

ಎಲ್ಲಾ ಊಟಗಳನ್ನೂ ಪುನರ್-ಉಪಯೋಗಿಸಬಹುದಾದ ಮೆಲಾಮೈನ್ ಪ್ಲೇಟುಗಳಲ್ಲಿ ಹಾಗೂ ಸ್ಟೈನ್‍ಲೆಸ್-ಸ್ಟೀಲ್ ಕಟ್ಲೆರಿಯಲ್ಲಿ ನೀಡಲಾಯಿತು. ಇದು ಪ್ಲೇಟುಗಳು, ಕಟ್ಲೆರಿ, ಬೌಲುಗಳು, ಕಪ್ಪುಗಳು, ಇತ್ಯಾದಿ 10,00,000 ಏಕ ಬಳಕೆ ಪ್ಲಾಸ್ಟಿಕ್ ಐಟಂಗಳನ್ನು ಉಪಯೋಗಿಸುವುದನ್ನು ತಡೆಯಿತು. ಪುನರ್-ಉಪಯೋಗಿಸಬಹುದಾದವುಗಳ ಬಳಕೆಯೊಂದಿಗೆ ಈ ಕಾರ್ಯಕ್ರಮದಲ್ಲಿ ಏನಿಲ್ಲವೆಂದರೂ 7 ರಿಂದ 11 ಟನ್‌ಗಳಷ್ಟು ತ್ಯಾಜ್ಯ ಉತ್ಪಾದನೆಯನ್ನು ತಡೆಯಲಾಗಿದೆ. 
ಪ್ರತಿಯೊಬ್ಬ ಭಾಗವಹಿಸುವವರಿಗೂ ಅವರ ಸ್ವಾಗತ ಕಿಟ್‌ನಲ್ಲಿ ಒಂದು ಸ್ಟೀಲ್ ಬಾಟಲಿಯನ್ನು ನೀಡಲಾಗಿತ್ತು.  ಯಾವುದೇ ಸಾಮಾನ್ಯ ನೀರಿನ ಬಾಟಲಿಗಳನ್ನು ಮಾರಾಟ ಮಾಡಲಿಲ್ಲ. ಎಲ್ಲಾ ಸ್ಥಳಗಳಲ್ಲಿಯೂ ಸ್ಟೀಲು ಮಗ್ಗುಗಳೊಂದಿಗೆ ನೀರು ನೀಡಿಕೆ/ವಿತರಣಾ ಸಾಧನಗಳನ್ನು ಒದಗಿಸಲಾಗಿತ್ತು. ಇದು ಆ ಕಾರ್ಯಕ್ರಮದಲ್ಲಿ ಹೆಚ್ಚುಕಡಿಮೆ 7,00,000 ಸಾಮಾನ್ಯ ನೀರಿನ ಬಾಟಲಿಗಳ ಉಪಯೋಗವನ್ನು ತಡೆಯಿತು. ಇದು ತಡೆಯಲಾದ ತ್ಯಾಜ್ಯಗಳ 23 ಟನ್‌ಗಳಿಗೆ ಸಮನಾಗಿರುವುದು. ಇದು ಭಾಗವಹಿಸುವವರ ನಡುವೆ, “ನಿಮ್ಮದೇ ಆದ ಬಾಟಲಿಯನ್ನು ತನ್ನಿರಿ” ಎಂಬ ಸಂದೇಶವನ್ನು ನೀಡಿದ್ದು, ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ಈ ಸಂದೇಶವನ್ನು ದೇಶದ ವಿವಿಧ ಭಾಗಗಳಿಗೆ ಕೊಂಡೊಯ್ದಿರುವರು.

ಒಟ್ಟಾರೆ 18 ಲಕ್ಷ ಟನ್‌ಗಳಷ್ಟು ತ್ಯಾಜ್ಯ ಉತ್ಪತ್ತಿಯಾಗಿರುವುದು, ಅದರ ಪೈಕಿ 85% ಸಾವಯವ ತ್ಯಾಜ್ಯವಾಗಿರುವುದು. ಒಣ ತ್ಯಾಜ್ಯದ ಒಂದು ಸಣ್ಣ ಪರಿಮಾಣವನ್ನು 150+ ಬಾಹ್ಯ ಮಾರಾಟಗಾರರುಗಳು ಉತ್ಪತ್ತಿ ಮಾಡಿರುವರು.  ಸಾವಯವ ತ್ಯಾಜ್ಯವನ್ನು ಧಾರವಾಡದ ಕಾಂಪೋಸ್ಟ್ ಘಟಕದಲ್ಲಿ ಕಾಂಪೋಸ್ಟ್ ಗೊಬ್ಬರವನ್ನಾಗಿ ಪರಿವರ್ತಿಸಲಾಗಿರುವುದು. ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆಯ ಘನ ತ್ಯಾಜ್ಯ ನಿರ್ವಹಣಾ ತಂಡವು ಅತ್ಯುತ್ತಮ ಪರಿಪಾಠಗಳ ಅನುಸರಿಸುವಿಕೆಯನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ದಿನದ ಇಪ್ಪತ್ತನಾಲ್ಕು ಗಂಟೆಯೂ ಶ್ರಮ ವಹಿಸಿರುವುದು.

ಮೋದಿ, ಶಾ ದೊಡ್ಡ ಭಯೋತ್ಪಾದಕರಂತೆ ವರ್ತಿಸ್ತಾರೆ : ಕಾಂಗ್ರೆಸ್ ಮುಖಂಡ ವಾಗ್ದಾಳಿ

ಅನುಸರಿಸಲಾದಂತಹ ಪರಿಸರ-ಸ್ನೇಹಿ ಪರಿಪಾಠಗಳು  ಕಾರ್ಯಾಕ್ರಮದ ಆಯೋಜಕರಿಗೆ ರೂ.3.5 ಲಕ್ಷ ಮೊತ್ತದಷ್ಟು ಹೆಚ್ಚಿನ ಮಿತವ್ಯಯತೆಯನ್ನು ನೀಡಿರುವುದು ಎಂಬುದನ್ನು “ಸಾಹಸ್” ತಂಡವು ಗಮನಿಸಿತು. ಈ ರೀತಿಯಾಗಿ ಅತ್ಯುತ್ತಮ ಬದಲಿ ವಸ್ತುಗಳನ್ನು ನೀಡುವ ವೇಳೆಯಲ್ಲಿಯೇ ಪರಿಸರವನ್ನು ಉಳಿಸುವಲ್ಲಿನ ಪ್ರಯತ್ನದಲ್ಲಿ ಒಂದು ಜಯದ ಸಂತಸವನ್ನು ನೀಡಿರುವುದು. ಸಾಮಾಜಿಕ ಕಾರ್ಯಕ್ರಮಗಳಲ್ಲಿ ಪ್ಲಾಸ್ಟಿಕ್ ಪ್ಲೇಟುಗಳು ಹಾಗೂ ಸಾಮಾನ್ಯ ನೀರಿನ ಬಾಟಲಿಗಳನ್ನು ಉಪಯೋಗಿಸುವ ಇಂದಿನ ದಿನಗಳಲ್ಲಿ ಒಂದು ಬೃಹತ್ ಪ್ರಮಾಣದ ಕಾರ್ಯಕ್ರಮಗಳನ್ನೂ ಸಹ ಪ್ಲಾಸ್ಟಿಕ್ ಪ್ಲೇಟುಗಳು ಹಾಗೂ ಸಾಮಾನ್ಯ ನೀರಿನ ಬಾಟಲಿಗಳಂತಹ ವಿಲೆವಾರಿಗಳನ್ನು ಉಪಯೋಗಿಸದೆಯೇ ನಡೆಸಬಹುದು ಎಂಬುದನ್ನು ರಾಷ್ಟ್ರೀಯ ಯುವಜನೋತ್ಸವವು ಯಶಸ್ವಿಯಾಗಿ ಮಾಡಿ ತೋರಿಸಿರುವುದು. ಈ ಪರಿಪಾಠಗಳನ್ನು ಪ್ರತಿಯೊಬ್ಬರೂ ಸುಲಭವಾಗಿ ಅನುಸರಿಸಬಹುದು. 

ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗ ಎಂ. ಅವರು ರಾಷ್ಟ್ರೀಯ ಯುವಜನೋತ್ಸವನ್ನು ಪರಿಸರ ಸ್ನೇಹಿ, ಹಸಿರು ಉತ್ಸವ ಮಾಡಿದ್ದಕ್ಕಾಗಿ ಸಾಹಸ್ ಸಂಸ್ಥೆ ನೀಡಿರುವ ಪ್ರಮಾಣಪತ್ರವನ್ನು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಗೆ ಫೆ.15 ರಂದು ನೀಡಿದರು.

click me!