ಬಳ್ಳಾರಿ: ಕಾಂಗ್ರೆಸ್ ಪಾಲಿಕೆ ಸದಸ್ಯನಿಗೆ ಹಿಗ್ಗಾಮುಗ್ಗಾ ಥಳಿತ, ಕಾರಣ?

Published : Jul 12, 2024, 08:27 AM IST
ಬಳ್ಳಾರಿ: ಕಾಂಗ್ರೆಸ್ ಪಾಲಿಕೆ ಸದಸ್ಯನಿಗೆ ಹಿಗ್ಗಾಮುಗ್ಗಾ ಥಳಿತ, ಕಾರಣ?

ಸಾರಾಂಶ

ಕಾಂಗ್ರೆಸ್ ಮಹಿಳಾ ಕಾರ್ಪೋರೆಟರ್ ಮೈದನ ಆ್ಯಂಡ್ ಗ್ಯಾಂಗ್ ಕಾಂಗ್ರೆಸ್ ಕಾರ್ಪೋರೆಟರ್ ಕುಬೇರ ಮೇಲೆ ಹಲ್ಲೆ  ನಡೆಸಲಾಗಿದೆ. ಕುಬೇರ 38 ನೇ ವಾರ್ಡ್ ಪಾಲಿಕೆ ಸದಸ್ಯರಾಗಿದ್ದಾರೆ. 

ಬಳ್ಳಾರಿ(ಜು.12):  ಕ್ಷುಲ್ಲಕ ಕಾರಣಕ್ಕೆ ಕಾಂಗ್ರೆಸ್ ಪಾಲಿಕೆ ಸದಸ್ಯನ ಮೇಲೆ ಹಲ್ಲೆ ನಡೆಸಿದ ಘಟನೆ ಬಳ್ಳಾರಿಯಲ್ಲಿ ನಿನ್ನೆ(ಗುರುವಾರ) ನಡೆದಿದೆ. ಮಹಾನಗರ ಪಾಲಿಕೆ ಮುಂಬಾಗದಲ್ಲೇ ಕಾರ್ಪೊರೇಟರ್ ಕುಬೇರ ಎಂಬುಬರಿಗೆ  ಹಿಗ್ಗಾಮುಗ್ಗ ಥಳಿಸಲಾಗಿದೆ.  ಕಾಂಗ್ರೆಸ್ ಮಹಿಳಾ ಕಾರ್ಪೋರೆಟರ್ ಮೈದನ ಆ್ಯಂಡ್ ಗ್ಯಾಂಗ್ ಕಾಂಗ್ರೆಸ್ ಕಾರ್ಪೋರೆಟರ್ ಕುಬೇರ ಮೇಲೆ ಹಲ್ಲೆ  ನಡೆಸಲಾಗಿದೆ. ಕುಬೇರ 38 ನೇ ವಾರ್ಡ್ ಪಾಲಿಕೆ ಸದಸ್ಯರಾಗಿದ್ದಾರೆ. 

ರವಿ ಎನ್ನುವ ವ್ಯಕ್ತಿ ಮೇಯರ್ ಚೇಂಬರ್‌ನಲ್ಲಿ ಪಾಲಿಕೆ ಕಾರ್ಪೋರೆಟರ್ ಕುಬೇರ ಅವರೊಂದಿಗೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದನಂತೆ. ರವಿ ಎಂಬಾತ 39 ನೇ ವಾರ್ಡ್ ಪಾಲಿಕೆ ಕಾಂಗ್ರೆಸ್ ಸದಸ್ಯೆ ಶಶಿಕಲಾರ ಅವರ ಮೈದುನನಾಗಿದ್ದಾನೆ.  

ಬೀದಿಗೆ ಬಿದ್ದ 10 ಕುಟುಂಬಗಳಿಗೆ ತಾತ್ಕಾಲಿಕ ಸೂರು ನಿರ್ಮಿಸಿಕೊಟ್ಟು ಮಾನವೀಯತೆ ಮೆರೆದ ಶ್ರೀರಾಮುಲು!

ಪಾಲಿಕೆಯಿಂದ ಹೊರಬರುತ್ತಿದ್ದಂತೆ ಕುಬೇರನ ಮೇಲೆ ರವಿ ಆ್ಯಂಡ್ ಗ್ಯಾಂಗ್ ಮನಬಂದಂತೆ ಹಲ್ಲೆ ಮಾಡಿದೆ. ಕುಬೇರ ಮತ್ತು ಕುಬೇರನ ಸ್ನೇಹಿತ ನಾಗರಾಜನ ಮೇಲೂ ಹಲ್ಲೆ ನಡೆಸಲಾಗಿದೆ. ಪಾಲಿಕೆ ಮುಂಭಾಗದಲ್ಲಿ ಹಲ್ಲೆ ಮಾಡಿರೋ ವಿಡಿಯೋ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ. ಹಲ್ಲೆ ಬಳಿಕ ಕುಬೇರ ವಿಮ್ಸ್‌ನ ಟ್ರಾಮಾ ಕೇರ್ ಆಸ್ಪತ್ರೆಗೆ ದಾಖಲಾಗಿದ್ದರು. ಟ್ರಾಮಾ ಕೇರ್‌ಗೆ ಬರುತ್ತಿದ್ದಂತೆ ಗುಂಪು ಕಟ್ಟಿಕೊಂಡು ಬಂದು ಮತ್ತೆ ರವಿ ಆ್ಯಂಡ್ ಗ್ಯಾಂಗ್ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. 

ಟ್ರಾಮಾ ಕೇರ್ ಮುಂದೆ ಕುಬೇರ ಮತ್ತವರ ಸ್ನೇಹಿತರಾದ ನಾಗರಾಜು, ವೀರೇಂದ್ರ ಮೂವರ ಮೇಲೂ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಹಲ್ಲೆ ಹಿಂದೆ ಹಳೆ‌ ದ್ವೇಷದ ಶಂಕೆ ವ್ಯಕ್ತವಾಗಿದೆ. ಹೀಗಾಗಿ ರವಿ ಮತ್ತು ಕುಬೇರನ ನಡುವೆ ನಡೆದ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ಗಾಂಧಿನಗರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

PREV
Read more Articles on
click me!

Recommended Stories

ನಟ ದರ್ಶನ್‌ಗೆ ಶುರುವಾಯ್ತು ಟೆನ್ಶನ್, ನಾಳೆ ಸಂಜೆ 4 ಗಂಟೆ ಆದೇಶ ಪ್ರಕಟಿಸಲಿದೆ ಹೈಕೋರ್ಟ್
Health Department: ಆಹಾರ ಇಲಾಖೆ ಸರ್ಜಿಕಲ್ ಸ್ಟ್ರೈಕ್; ನೈರ್ಮಲ್ಯ ಕೊರತೆ, ಕಲಬೆರಕೆ ಹಿನ್ನೆಲೆ ಖ್ಯಾತ ಹೋಟೆಲ್‌ಗಳು ಸೀಲ್‌ಡೌನ್!