ನಟ ದರ್ಶನ್ ಗ್ಯಾಂಗ್ ರೇಣುಕಾಸ್ವಾಮಿ ಕೊಲೆಗೈದ ಪಟ್ಟಣಗೆರೆ ಶೆಡ್‌ಗೆ 4.8 ಸ್ಟಾರ್ ರೇಟಿಂಗ್; ರಿವ್ಯೂವ್ ನೋಡ್ಲೇಬೇಕು!

By Sathish Kumar KH  |  First Published Jul 11, 2024, 7:36 PM IST

ನಟ ದರ್ಶನ್ ಅಂಡ್ ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಕೊಲೆ ಮಾಡಿದ ಪಟ್ಟಣಗೆರೆ ಶೆಡ್‌ಗೆ ಬೆಂಗಳೂರು ಜನತೆ ಗೂಗಲ್‌ ಮ್ಯಾಪ್‌ನಲ್ಲಿ 4.8 ಸ್ಟಾರ್ ರೇಟಿಂಗ್ ಕೊಟ್ಟಿದ್ದಾರೆ.


ಬೆಂಗಳೂರು (ಜು.11): ನಟ ದರ್ಶನ್ ಸ್ನೇಹಿತೆ ಹಾಗೂ ನಟಿ ಪವಿತ್ರಾ ಗೌಡಗೆ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಕಾಮೆಂಟ್‌ ಮಾಡಿದ ರೇಣುಕಾಸ್ವಾಮಿಯನ್ನು ನಟ ದರ್ಶನ್ ಅಂಡ್ ಗ್ಯಾಂಗ್‌ನಿಂದ ಕಿಡ್ನಾಪ್ ಮಾಡಿ ಭೀಕರವಾಗಿ ಥಳಿಸಿ ಕೊಲೆಗೈದ ಪಟ್ಟಣಗೆರೆ ಶೆಡ್‌ಗೆ ಬೆಂಗಳೂರು ಜನತೆ 5ಕ್ಕೆ ಬರೋಬ್ಬರಿ 4.8 ಸ್ಟಾರ್ ರೇಟಿಂಗ್ ಕೊಟ್ಟಿದ್ದಾರೆ.

ಕಳೆದೆರಡು ತಿಂಗಳ ಹಿಂದೆ ಹೇಳ ಹೆಸರಿಲ್ಲದಂತಿಲ್ಲ ಪಟ್ಟಣಗೆರೆ ಶೆಡ್‌ಗೆ ದುಬಾರಿ ಸ್ಟಾರ್ ಹೋಟೆಲ್‌ಗೂ ಇಲ್ಲದಷ್ಟು ಬೆಲೆ ಬಂದಿದೆ. ಗೂಗಲ್ ಮ್ಯಾಪ್‌ನಲ್ಲಿ ಪಟ್ಟಣಗೆರೆ ಶೆಡ್‌ ಎಂದು ಹುಡುಕಿದರೆ ಸೂಕ್ತ ಲೊಕೇಶನ್ ತೋರಿಸುವುದರ ಜೊತೆಗೆ ಈ ಸ್ಥಳದ ಮಹಿಮೆಯನ್ನೂ ತಿಳಿಸಲಾಗಿದೆ. ಬರೋಬ್ಬರಿ ನೂರಕ್ಕೂ ಅಧಿಕ ಜನರು ಪಟ್ಟಣಗೆರೆ ಶೆಡ್‌ನ ಬಗ್ಗೆ ರಿವ್ಯೂವ್ ನೀಡಿದ್ದು, ಈ ಪೈಕಿ ಬಹುತೇಕರು 5 ಸ್ಟಾರ್ ರೇಟಿಂಗ್ ಕೊಟ್ಟಿದ್ದಾರೆ. ಬೆರಳೆಣಿಕೆ ಜನರು ಮಾತ್ರ ಕಳಪೆ ರೇಟಿಂಗ್ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬರೋಬ್ಬರಿ 4.8 ಸ್ಟಾರ್ ರೇಟಿಂಗ್ ಅನ್ನು ಹೊಂದಿದ ಕೆಲವೇ ಕೆಲವು ಸ್ಥಳಗಳಲ್ಲಿ ಈಗ ಪಟ್ಟಣಗೆರೆ ಶೆಡ್‌ ಕೂಡ ಒಂದಾಗಿದೆ.

Tap to resize

Latest Videos

ಗೂಗಲ್‌ಗೂ ಗೊತ್ತಾಯ್ತು ಪಟ್ಟಣಗೆರೆ ಶೆಡ್ಡಿನ ಗಮ್ಮತ್ತು; ಈ ಲೊಕೇಶನ್‌ಗೆ 5 ಸ್ಟಾರ್ ರಿವ್ಯೂವ್ಸ್ ನೋಡಿ ನೆಟ್ಟಿಗರು ಸುಸ್ತು

ಇನ್ನು ಪಟ್ಟಣಗೆರೆ ಶೆಡ್ ನಟ ದರ್ಶನ್ ಕೇಸ್ ಬಳಿಕ ಟ್ರೆಂಡ್ ಆಗುತ್ತಿದೆ. ಗೂಗಲ್ ಮ್ಯಾಪ್ ನಲ್ಲಿ ಪಟ್ಟಗೆರೆ ಶೆಡ್ ಗೆ 4.8 ಸ್ಟಾರ್ ರೇಟಿಂಗ್ ಕೊಡಲಾಗಿದೆ. ಪಟ್ಟಣಗೆರೆ ಶೆಡ್‌ಗೆ ನೆಟ್ಟಿಗರಿಂದ ಚಿತ್ರ ವಿಚಿತ್ರ ರಿವ್ಯೂಗಳು ಬಂದಿವೆ. ಅದರಲ್ಲಿ 100ಕ್ಕೂ ಅಧಿಕ ಮಂದಿಯಿಂದ ಪಟ್ಟನಗೆರೆ ಶೆಡ್‌ಗೆ ರಿವ್ಯೂವ ಬಂದಿದ್ದು,ಸೋಷಿಯಲ್ ಮಿಡಿಯಾದಲ್ಲಿ ಪಟ್ಟಣಗೆರೆ ಶೆಡ್ ಬಗ್ಗೆ ಹಲವು ವಿಡಿಯೋಗಳು ವೈರಲ್ ಆಗುತ್ತಿವೆ.ಇನ್ನು ಇದು ಸ್ಟಾರ್ ರೇಟಿಂಗ್ ಕೊಡುವಷ್ಟು ಪ್ರಸಿದ್ಧ ಸ್ಥಳವಲ್ಲ, ಇದು ನಟ ದರ್ಶನ್ ಅಂಡ್ ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಕೊಲೆ ಮಾಡಿದ ಗ್ಯಾಂಗ್ ಆಗಿದೆ.

ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ ಸ್ಥಳಕ್ಕೆ ನಟ ದರ್ಶನ್ ಹಾಗೂ ಪವಿತ್ರಾಗೌಡ ಸೇರಿ 16 ಜನ ಆರೋಪಿಗಳನ್ನು ಕರೆದುಕೊಂಡು ಬಂದು ಪೊಲೀಸರು ಸ್ಥಳ ಮಹಜರು ಮಾಡಿದ್ದರು. ಈ ವೇಳೆ ನಟ ದರ್ಶನ್‌ನನ್ನು ಪೊಲೀಸರು ಕಸ್ಟಡಿಯಿಂದ ಹೊರಗೆ ಕರೆದುಕೊಂಡು ಬಂದಾಗ ಅವರನ್ನು ನೋಡಲು ಸಾವಿರಾರು ಅಭಿಮಾನಿಗಳು ಅಲ್ಲಿ ಸೇರಿದ್ದರು. ಇನ್ನು ಕೆಲವರು ಸ್ಥಳದ ಬಗ್ಗೆ ಮಾಹಿತಿ ಇಲ್ಲದೇ ಲೊಕೇಶನ್ ಬಗ್ಗೆ ಗೂಗಲ್ ಮ್ಯಾಪ್‌ನಲ್ಲಿ ಹುಡುಕಾಟ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪಟ್ಟಣಗೆರೆ ಶೆಡ್ ಇರುವ ಸ್ಥಳವನ್ನು ಗೂಗಲ್ ಮ್ಯಾಪ್‌ನಲ್ಲಿ ಐಡೆಂಟಿಫಿಕೇಶನ್ ಮಾಡಿದ್ದಾರೆ. ಇದಾದ ನಂತರ ಈ ಗೂಗಲ್ ಲೊಕೇಶನ್‌ಗೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡಿದ್ದಾರೆ.

ಜೈಲಿನೊಳಗೆ ಕಾಡು ಹೇಗಿದ್ದೀಯಾ ಎಂದು ಕಣ್ಣೀರು ಹಾಕಿದ ನಟ ದರ್ಶನ್; ನಿರ್ಮಾಪಕ ಶಿವಕುಮಾರ್ ಭಾವುಕ

ಪಟ್ಟಣಗೆರೆ ಶೆಡ್‌ನ ಗೂಗಲ್ ಲೊಕೇಶನ್‌ಗೆ ಬಗ್ಗೆ ಬಂದಿರುವ ತರಹೇವಾರಿ ಕಾಮೆಂಟ್‌ಗಳು ಇಲ್ಲಿವೆ ನೋಡಿ... 

  • ಪಟ್ಟಣಗೆರೆ ಶೆಡ್ ತುಂಬಾ ಸುಂದರವಾದ ಸ್ಥಳವಾಗಿದ್ದು, ಇಲ್ಲಿ ಸ್ವರರ್ಗವೇ ಇದೆ. ಒಮ್ಮೆ ಶೆಡ್‌ನ ಒಳಗೆ ಹೋದರೆ ನೀವು ಮತ್ತೆಂದೂ ಹೊರಗೆ ಬರುವುದಿಲ್ಲ. ವೀಕೆಂಡ್‌ನಲ್ಲಿ ತಪ್ಪದೇ ಭೇಟಿ ನೀಡಿ.
  • ಒಂದು ರಾತ್ರಿ ತಂಗಲು ಪಟ್ಟಣಗೆರೆ ಶೆಡ್‌ ಶಿಫಾರಸು ಮಾಡಿ.. ಉಚಿತ ಪಿಕಪ್ ಮತ್ತು ಡ್ರಾಪ್ ಲಭ್ಯವಿದೆ. ಇಲ್ಲಿ ಮಸಾಜ್ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
  • ಬೆಂಗಳೂರು ರೌಡಿಗಳೊಂದಿಗೆ ಉತ್ತಮ ವ್ಯವಹಾರ ಮತ್ತು ವ್ಯಾಜ್ಯ ಇತ್ಯರ್ಥಕ್ಕಾಗಿ ಉತ್ತಮ ಸ್ಥಳವಾಗಿದೆ. ನಿಮಗೆ ಜೀವನದ ಮೇಲೆ ಜಿಗುಪ್ಸೆ ಆಗಿದ್ದರೆ ಈ ಸ್ಥಳಕ್ಕೆ ಭೇಟಿ ನೀಡಬೇಕು.
  • ತುಂಬಾ ಒಳ್ಳೆ ಜಾಗ ಒಂದು ಮೆಸೆಜ್ ಮಾಡಿದ್ರೆ ಸಾಕು ಅವರೇ ಬಂದು ಪಿಕ್ ಮಾಡ್ತಾರೆ.
  • ಬೆಂಗಳೂರಿನಲ್ಲಿ ಹೋಗಲು ಅತ್ಯುತ್ತಮ ತಂಗುದಾಣ. ವಂಡರ್ಲಾ ಅಥವಾ ಫನ್ ವರ್ಲ್ಡ್‌ ಸ್ಥಳಕ್ಕಿಂತಲೂ ಹೆಚ್ಚು ಸಾಹಸಮಯವಾಗಿದೆ ಎಂದು ನಾನು ಕೇಳಿದ್ದೇನೆ. ಇಲ್ಲಿ ಉತ್ತಮ ಸಮಯವನ್ನು ಕಳೆಯಿರಿ.
  • ಅತ್ಯುತ್ತಮವಾದ ಶೆಡ್, ನೀವು ಜೀವಿತಾವಧಿಯಲ್ಲಿ ಒಮ್ಮೆ ಈ ಶೆಡ್ ಅನ್ನು ಭೇಟಿ ಮಾಡಬಹುದು. ನೀವು ಸ್ವರ್ಗ/ನರಕಕ್ಕೆ ಹೋಗಲು ಬಯಸಿದರೆ ದಯವಿಟ್ಟು ಇಲ್ಲಿಗೆ ಭೇಟಿ ನೀಡಿ.
  • ಕುಂಟೆ ಬಿಲ್ಲೆ ಆಡಲು ಉತ್ತಮವಾದ ಸ್ಥಳ.. ಶೆಡ್ದ್ ಹೋಗಣ ಬಾ!! ಕುಂಟೆಬಿಲ್ಲೆ ಆಡಣ ಬಾ!...
  • ಶೆಡ್ ಗೆ ಬಾ 😂🤣 ನಿಮ್ಮ ಜೀವನದಲ್ಲಿ ಒಂದು ಬಾರಿ ಭೇಟಿ ನೀಡಲು ಉತ್ತಮ ಸ್ಥಳ. ಒಂದೇ ಭೇಟಿಗೆ ನೇರವಾಗಿ ಸ್ವರ್ಗಕ್ಕೆ ಕರೆದೊಯ್ಯಲಿದೆ. ಕುಂಟೆ ಬಿಲ್ಲೆ ಆಟ ಹೆಚ್ಚು ಶಿಫಾರಸು ಮಾಡಿದ ಚಟುವಟಿಕೆಯಾಗಿದೆ.
  • ಸಿನಿಮಾ ನಟ ದರ್ಶನ್ ಮತ್ತು ನಟಿ ಪವಿತ್ರಾ ಗೌಡ ಅವರ ಗ್ಯಾಂಗ್ ನಿಂದ ಪಟ್ಟಣಗೆರೆ ಶೆಡ್‌ನಲ್ಲಿ ಚಿತ್ರದುರ್ಗ ಜಿಲ್ಲೆಯ ರೇಣುಕಾಸ್ವಾಮಿಯನ್ನು ಬಬರ್ಬರವಾಗಿ ಕೊಲೆ ಮಾಡಿದ ಸ್ಥಳವಾಗಿದೆ' ಎಂದು ರಿವ್ಯೂವ್‌ನಲ್ಲಿ ಬರೆದಿದ್ದಾರೆ.
click me!