ತುಮಕೂರು ಜಿಲ್ಲೆಯಲ್ಲಿ ಬಿಟ್ಟು ಬಿಡದೆ ಕಾಡುತ್ತಿರುವ ಮಳೆಯಿಂದ ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿವೆ. ಮತ್ತೊಂದೆಡೆ ಮಳೆಯ ಅವಾಂತರ ಮುಂದುವರೆದಿದೆ.
ವರದಿ : ಮಹಂತೇಶ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ತುಮಕೂರು
ತುಮಕೂರು(ಅ.18): ಜಿಲ್ಲೆಯಲ್ಲಿ ಬಿಟ್ಟು ಬಿಡದೆ ಕಾಡುತ್ತಿರುವ ಮಳೆಯಿಂದ ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿವೆ. ಮತ್ತೊಂದೆಡೆ ಮಳೆಯ ಅವಾಂತರ ಮುಂದುವರೆದಿದೆ. ನಿರಂತರ ಮಳೆಗೆ ಏಷ್ಯಾದ ಅತಿ ದೊಡ್ಡ ಸೋಲಾರ್ ಪಾರ್ಕ್‌ಗೆ ನೀರು ನುಗ್ಗಿದೆ. ಸೋಲಾರ್ ಘಟಕದ ಬ್ಲಾಕ್ ನಂಬರ್ 4 ಇದೀಗ ಕೆರೆ ಅಂಗಳವಾಗಿ ಮಾರ್ಪಟ್ಟಿದೆ. ತಾಟಿಕುಂಟೆ ಎಂಬ ಕೆರೆಯ ಪಕ್ಕದಲ್ಲಿ ತಗ್ಗುಪ್ರದೇಶ ಇದ್ದ ಕಾರಣ ಆ ಪ್ರದೇಶದವು ನೀರಿನಲ್ಲಿ ಮುಳಗಡೆಯಾಗಿದೆ ಎಂದು ತಿಳಿದು ಬಂದಿದೆ.
ಅವಧ್ ಕಂಪೆನಿಗೆ ಸೇರಿದ ಬ್ಲಾಕ್ ಇದಾಗಿದ್ದು, ಹೀಗೆ ಮುಳಗಡೆಯಾಗಿರೋ ಸೋಲಾರ್ ಪ್ಯಾನೆಲ್ ಗಳ ಮದ್ಯೆ ಯುವಕನೊಬ್ಬ ಈಜಾಡುತ್ತಿರುವ ವಿಡಿಯೋ ಭಾರೀ ವೈರಲ್ ಆಗಿದೆ. ಸುಮಾರು 12500 ಎಕರೆ ವಿಸ್ತೀರ್ಣದಲ್ಲಿ ಈ ಸೋಲಾರ್ ಪಾರ್ಕ್ ನಿರ್ಮಾಣಗೊಂಡಿದ್ದು, ಎರಡು ಸಾವಿರ ಮೆಗಾ ವ್ಯಾಟ್ ಸಾಮರ್ಥ್ಯವುಳ್ಳ ಸೋಲಾರ್ ಘಟಕ ಇದಾಗಿದೆ. ಇನ್ನು ಮುಳುಗಡೆಯಾಗಿರುವ ಸೋಲಾರ್ ಪ್ಯಾನೆಲ್ ಗಳ ಸುತ್ತಲೂ ವಿದ್ಯುತ್ ಪ್ರವಹಿಸುತ್ತಿರುತ್ತದೆ. ಆದರೆ ಸಿಬ್ಬಂದಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಸೋಲಾರ್ ಪಾರ್ಕ್ ನಲ್ಲಿ ಯುವಕನೊಬ್ಬ ಈಜಾಡಿ ವಿಡಿಯೋ ಮಾಡಿದ್ದು, ಈ ವೇಳೆ ಅವಘಡವಾಗಿದ್ರೆ ಯಾರು ಹೊಣೆ ಅನ್ನೋ ಪ್ರಶ್ನೆಯೂ ಉದ್ಭವವಾಗಿದೆ.
ಗ್ರಾ.ಪಂ. ಸದಸ್ಯನ ಕಿಡ್ನ್ಯಾಪ್ ಕೇಸ್ :ಅಮೃತೂರು ಪೊಲೀಸರಿಂದ ಮೂವರ ಬಂಧನ
ಮೂರು ದಿನದ ಹಿಂದೆ ಕೊಚ್ಚಿ ಹೋಗಿದ್ದ ವ್ಯಕ್ತಿಯ ಶವ ಪತ್ತೆ
ಮಳೆಯಿಂದ ದಿನೇ ದಿನೇ ಜಿಲ್ಲೆಯಲ್ಲಿ ಸಾವು ನೋವುಗಳು ಕೂಡ ಹೆಚ್ಚಾಗುತ್ತಿವೆ.ಸಾವು ನೋವುಗಳು ಕೂಡ ಹೆಚ್ಚುತೀವೆ. ಮೂರು ದಿನಗಳ ಹಿಂದೆ ನೀರು ಹರಿಯುತ್ತಿದ್ದ ಸೇತುವೆ ದಾಟಲು ಹೋಗಿ ಕೊಚ್ಚಿ ಹೊಗಿದ್ದ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದಾನೆ. ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಪಳವಳ್ಳಿ ಬಳಿ ಈ ಘಟನೆ ನಡೆದಿದೆ.
ಕಳೆದ ಮೂರು ದಿನಗಳಿಂದ ನಿರಂತರ ಶೋಧದ ಬಳಿ ಇಂದು ಶವ ದೊರೆತಿದೆ. 42 ವರ್ಷದ ಗಂಗಾಧರ್ (42) ಮೃತ ದುರ್ದೈವಿ, ಕಳೆದ ಮೂರು ದಿನಗಳ ಹಿಂದೆ ಕಂಚಗನಾಹಳ್ಳಿ ಕಡೆಯಿಂದ ಪಳವನಹಳ್ಳಿ ಕಡೆಗೆ ಬೈಕ್ ನಲ್ಲಿ ಬರ್ತಿದ್ದ ಗಂಗಾಧರ್. ಪಳವನಹಳ್ಳಿ ಹಳ್ಳ ದಾಟುವಾಗ ರಭಸವಾಗಿ ಹರಿಯೋ ನೀರಿನಲ್ಲಿ ಕೊಚ್ಚಿ ಹೋಗಿದ್ದ, ಕಳೆದ ಮೂರು ದಿನಗಳಿಂದ ಗಂಗಾಧರ್ ಗಾಗಿ ಶೋಧಕಾರ್ಯ ನಡೆಸಲಾಗಿತ್ತು. ಇಂದು ಬೆಳಗ್ಗೆ ಘಟನೆ ನಡೆದ ಸ್ಥಳದಿಂದ ಒಂದು ಕಿಲೋಮೀಟರ್ ದೂರದಲ್ಲಿ ಶವ ಪತ್ತೆಯಾಗಿದೆ. ಪಾವಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.