ಅವರಿಬ್ಬರು ಒಂದೇ ಊರಿನ ಪ್ರೇಮಿಗಳು, ಅವರಿಬ್ಬರಲ್ಲಿ ಅಂಕುರಿಸಿದ ಪ್ರೀತಿಗೆ ಜಾತಿ ಅಡ್ಡ ಬಂದಿತ್ತು, ಅನ್ಯಜಾತಿಯ ಯುವಕನನ್ನ ಪ್ರೇಮಿಸಿದ್ದಕ್ಕೆ ಯುವತಿಯ ತಂದೆ ಸೇರಿ ಆಕೆಯ ಸಂಬಂಧಿಗಳೇ ಆಕೆ ಮತ್ತು ಆಕೆಯನ್ನ ಪ್ರೇಮಿಸಿದ ಯುವಕ ಇಬ್ಬರನ್ನು ಹತ್ಯೆಗೈದಿದ್ದಾರೆ.
ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ.
ಬಾಗಲಕೋಟೆ: ಅವರಿಬ್ಬರು ಒಂದೇ ಊರಿನ ಪ್ರೇಮಿಗಳು, ಅವರಿಬ್ಬರಲ್ಲಿ ಅಂಕುರಿಸಿದ ಪ್ರೀತಿಗೆ ಜಾತಿ ಅಡ್ಡ ಬಂದಿತ್ತು, ಅನ್ಯಜಾತಿಯ ಯುವಕನನ್ನ ಪ್ರೇಮಿಸಿದ್ದಕ್ಕೆ ಯುವತಿಯ ತಂದೆ ಸೇರಿ ಆಕೆಯ ಸಂಬಂಧಿಗಳೇ ಆಕೆ ಮತ್ತು ಆಕೆಯನ್ನ ಪ್ರೇಮಿಸಿದ ಯುವಕ ಇಬ್ಬರನ್ನು ಹತ್ಯೆಗೈದಿದ್ದಾರೆ. ರಾಜೇಶ್ವರಿ ವಿಶ್ವನಾಥ್ ಕೊಲೆಯಾದ ಪ್ರೇಮಿಗಳು. ಘಟನೆಗೆ ಸಂಬಂಧಿಸಿದಂತೆ ಯುವತಿ ಕಡೆಯವರನ್ನು ಪೊಲೀಸರು ಬಂಧಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬೇವಿನಮಟ್ಟಿ ಗ್ರಾಮದಲ್ಲಿ ಈ ಅನಾಹುತ ಸಂಭವಿಸಿದೆ. ವಿಶ್ವನಾಥ, ಅದೇ ಗ್ರಾಮದ ರಾಜೇಶ್ವರಿ ಎಂಬಾಕೆಯನ್ನು ಪ್ರೀತಿಸುತ್ತಿದ್ದ ಸುಮಾರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದ ಇವರಿಬ್ಬರಿಗೆ ಜಾತಿ ಅಡ್ಡ ಬಂದಿತ್ತು. ಹೀಗಾಗಿ ಯುವತಿಯ ಕುಟುಂಬಸ್ಥರು ಈ ಹಿಂದೆ ಹಲವು ಬಾರಿ ವಿಶ್ವನಾಥ್‌ಗೆ ಬುದ್ದಿ ಹೇಳಿದ್ದಾರೆ. ಎರಡೂ ಬಾರಿ ಹಲ್ಲೆಯೂ ಮಾಡಿದ್ದರಂತೆ.
ನಂತರ ಗ್ರಾಮದ ಹಿರಿಯರು ಸೇರಿ ಈ ವಿಚಾರವನ್ನು ಅಲ್ಲಿಗೆ ಬಗೆಹರಿಸಿದ್ದರು. ಇಷ್ಟೆಲ್ಲಾ ನಡೆದ ಮೇಲೆ ವಿಶ್ವನಾಥ (Vishwanath)ಊರು ಬಿಟ್ಟು ದೂರದ ಕಾಸರಗೋಡಿಗೆ ಗಾರೆ ಕೆಲಸಕ್ಕೆಂದು ದುಡಿಯಲು ಹೋಗಿದ್ದ. ಆದ್ರೆ ವ್ಯವಸ್ಥಿತವಾಗಿ ಪ್ಲ್ಯಾನ್ ಮಾಡಿ ವಿಶ್ವನಾಥನನ್ನು ಊರಿಗೆ ಕರೆಯಿಸಿ ಮಗಳು ರಾಜೇಶ್ವರಿ (Rajeshwari) ಜೊತೆ ಆತನನ್ನು ಆಕೆಯ ಮನೆ ಮಂದಿ ಮುಗಿಸಿಬಿಟ್ಟಿದ್ದರು. ಇದರಿಂದ ಹುಚ್ಚು ಪ್ರೀತಿಗೆ ಇವರಿಬ್ಬರೂ ಬಲಿಯಾಗಿದ್ದಾರೆ. ಈ ವಿಚಾರ ಇದೀಗ ವಿಶ್ವನಾಥ ಕುಟುಂಬಸ್ಥರಲ್ಲಿ ತಲ್ಲಣ ಮೂಡಿಸಿದೆ. ಅಲ್ಲದೇ ರಾಜೇಶ್ವರಿ ಕುಟುಂಬಸ್ಥರ ವಿರುದ್ಧ ವಿಶ್ವನಾಥ (Vishwanath) ತಾಯಿ ಲಕ್ಷ್ಮೀಬಾಯಿ, ತಂಗಿ ನೇತ್ರಾ ಆಕ್ರೋಶ ಹೊರಹಾಕಿದ್ದಾರೆ.
undefined
ಮಂಡ್ಯ: ಪ್ರೀತಿಸಿ ಓಡಿ ಹೋದ ಅಪ್ರಾಪ್ತ ಪ್ರೇಮಿಗಳು: ಮರ್ಯಾದೆಗೆ ಅಂಜಿ ಹುಡುಗಿ ತಂದೆ ಆತ್ಮಹತ್ಯೆ
ಒಂದು ವರ್ಷದ ಹಿಂದೆ ಯುವತಿ ರಾಜೇಶ್ವರಿ ಮನೆಯವರು ಯುವಕ ವಿಶ್ವನಾಥ್‌ನನ್ನ ಸಾಯುವ ಹಾಗೆ ಹಲ್ಲೆ ನಡೆಸಿದ್ದರು. ಇದಾದ ಬಳಿಕ ವಿಶ್ವನಾಥ್ ಊರು ಬಿಟ್ಟು ದೂರ ಹೋಗಿದ್ದರೂ ರಾಜೇಶ್ವರಿ ಜೊತೆಗಿನ ಸಂಪರ್ಕ ಕಡಿದಿರಲಿಲ್ಲ. ಫೋನ್ (Phone) ಮೂಲಕ ಸಂಪರ್ಕದಲ್ಲಿದ್ದ ವಿಚಾರ ಹೇಗೋ ರಾಜೇಶ್ವರಿ ಮನೆಯವರಿಗೆ ತಿಳಿದಿದೆ. ಸಾಕಷ್ಟು ಬಾರಿ ಬುದ್ದಿ ಹೇಳಿದ್ರೂ ಕೇಳದ ಇವರ ವರ್ತನೆಯಿಂದ ರಾಜೇಶ್ವರಿ ಕುಟುಂಬಸ್ಥರು ತಮ್ಮ ಮರ್ಯಾದೆಗೆ ಇದೆಲ್ಲಿ ಧಕ್ಕೆ ತರುವುದೋ ಎಂದು ಮೋಸದಿಂದ (Cheeting) ವಿಶ್ವನಾಥ್‌ನನ್ನು ಕರೆಸಿ ಇಬ್ಬರನ್ನು ಕೊಲೆ ಮಾಡಿದ್ದಾರೆ.
ರಾಜೇಶ್ವರಿ ತಂದೆ ಪರಸಪ್ಪ ಕೊಲೆಯ ಪ್ಲ್ಯಾನ್ ಮಾಡಿದ್ದು, ಇದಕ್ಕೆ. ರಾಜೇಶ್ವರಿ ಮಾವ ಮತ್ತು ಸಹೋದರ ಸಂಬಂಧಿಗಳು ಸಾಥ್ ನೀಡಿದ್ದಾರೆ. ಅದರಂತೆ ಆಕೆಯ ಮಾವ ಬಾಗಪ್ಪ ನಿಮ್ಮಿಬ್ಬರನ್ನ ನಾನು ಒಂದು ಮಾಡ್ತಿನಿ. ನಿಮ್ಮಪ್ಪನನ್ನ ಸಹ ನಾನು ಒಪ್ಪಿಸುತ್ತೇನೆ ಎಂದು ರಾಜೇಶ್ವರಿಗೆ ನಂಬಿಸಿದ್ದಾನೆ. ಇದನ್ನ ನಂಬಿದ ರಾಜೇಶ್ವರಿ ವಿಶ್ವನಾಥ್ ಗೆ ವಿಷಯ ತಿಳಿಸಿ ಊರಿಗೆ ಬರುವಂತೆ ಹೇಳಿದ್ದಾಳೆ. ಅದ್ರಂತೆ ವಿಶ್ವನಾಥ ಬಸ್ ಹಿಡಿದು ಕಾಸರಗೋಡಿನಿಂದ ಊರ ಕಡೆಗೆ ಬರಲು ಮುಂದಾಗಿದ್ದಾನೆ. ಇತ್ತ ಆತನ ಜೊತೆಗೆ ನಿನ್ನನ್ನು ಬಿಟ್ಟು ಬರೋದಾಗಿ ರಾಜೇಶ್ವರಿಯನ್ನ ಕರೆದುಕೊಂಡ ಹೋದ ಮಾವ ಬಾಗಪ್ಪ(Baappa), ಸಹೋದರ ರವಿ(Ravi), ಹಾಗೂ ಸಂಬಂಧಗಳಾದ ಹನುಮಂತ (Hanumanta), ಬೀರಪ್ಪ ಅವರನ್ನ ಕೂಡಿ ಕೊಂಡಿದ್ದಾರೆ. ಅದು ಸೆಪ್ಟೆಂಬರ್ 30ರ ಸಂಜೆ ನರಗುಂದ (Naragunda) ಪಟ್ಟಣಕ್ಕೆ ಬಂದ ವಿಶ್ವನಾಥ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದ. ಅಲ್ಲಿಗೆ ಹೋದ ಇವ್ರೆಲ್ಲಾ ಬಸ್ ನಿಲ್ದಾಣದಿಂದ ಹೊರ ಬರುವಂತೆ ರಾಜೇಶ್ವರಿ ಮೂಲಕ ಕರೆಯಿಸಿಕೊಂಡಿದ್ದಾರೆ. ಆಗ ತನ್ನ ಹತ್ತಿರ ಇದ್ದ ಎರಡು ಬ್ಯಾಗಗಳನ್ನ ಬಸ್ ನಿಲ್ದಾಣದಲ್ಲೇ ಬಿಟ್ಟು ಹೋದ ವಿಶ್ವನಾಥನನ್ನ ಬುಲೆರೋ ವಾಹನದಲ್ಲಿ ಕರೆದುಕೊಂಡು ಹೋಗಿದ್ದಾರೆ.
ಮುಂದೆ ಟಾಟಾ ಏಸ್ ನಲ್ಲಿ ರಾಜೇಶ್ವರಿ ಹಾಗೂ ಬುಲೆರೊ ವಾಹನದಲ್ಲಿ ವಿಶ್ವನಾಥನನ್ನ ಕರೆದುಕೊಂಡು ಇಬ್ಬರನ್ನು ವಾಹನಗಳಲ್ಲೇ ಪ್ರತ್ಯೇಕವಾಗಿ ಅಂದರೆ ಯುವತಿಯನ್ನ ವೇಲ್‌ನಿಂದ ಕತ್ತು ಬಿಗಿದು ಕೊಲೆಗೈದರೆ ಯುವಕನನ್ನ ಕಲ್ಲಿನಿಂದ ಚಚ್ಚಿ ಕೊಲೆ ಮಾಡಿ ಮುಗಿಸಿದ್ದಾರೆ. ನಂತರ ಅವರಿಬ್ಬರ ಮೃತ ದೇಹಗಳನ್ನ ಹುನಗುಂದ ಸಮೀಪದಲ್ಲಿನ ಅಲಮಟ್ಟಿ ಸೇತುವೆ ಮೇಲಿಂದ ಕೃಷ್ಣಾ ನದಿಗೆ ಎಸೆದಿದ್ದಾರೆ. ಈ ವೇಳೆ ಸಾಕ್ಷಿ ನಾಶಕ್ಕಾಗಿ ಇಬ್ಬರ ಮೈಮೇಲಿನ ಬಟ್ಟೆಗಳನ್ನ ತೆಗೆದು ಒಳ ಉಡುಪು ಮಾತ್ರ ಬಿಟ್ಟು ಎಸೆದಿದ್ದು, ಅವರ ಬಟ್ಟೆಗಳನ್ನ ಸಂಗಮ ಕ್ರಾಸ್‌ನಲ್ಲಿ ಸುಟ್ಟು ಹಾಕಿದ್ದಾರೆ.
'ಮೊದ್ಲು ಲವ್ವು, ನಂತ್ರ ನೋವು.. ಕೊನೆಗ್ ಸಾವು..!' ಬಸ್ಸಲ್ಲಿ ಹುಟ್ಟಿದ ಪ್ರೀತಿ ಬೆಳೆಯೋ ಮುಂಚೆಯೇ ಅಂತ್ಯ!
ಇದಾದ ನಂತರ ಅಕ್ಟೋಬರ್ 7ರಂದು ಬಾಗಲಕೋಟೆ (Bagalkote) ಗ್ರಾಮೀಣ ಠಾಣೆಯಲ್ಲಿ ರಾಜೇಶ್ವರಿ ತಂದೆ ತನ್ನ ಮಗಳು ನಾಪತ್ತೆ ಆಗಿದ್ದ ಪ್ರಕರಣ ದಾಖಲಿಸಿದ್ದಾರೆ. ಆದರೆ ಆಕೆ ಇನ್ನೂ ಮೈನರ್ ಆಗಿದ್ದರಿಂದ ಕಿಡ್ನಾಪ್ ಎಂದು ಪ್ರಕರಣ ದಾಖಲಾಗಿತ್ತು. ಅತ್ತ ಬ್ಯಾಗ್ ನಿಂದಾಗಿ ನರಗುಂದ ಠಾಣೆ ಪೊಲೀಸರು ವಿಶ್ವನಾಥ ಮನೆಯವರಿಗೆ ಕರೆ ಮಾಡಿದ್ದರಿಂದಾಗಿ ಅಕ್ಟೋಬರ್ 4 ನೇ ತಾರೀಖು ನರಗುಂದ ಠಾಣೆಯಲ್ಲಿ ವಿಶ್ವನಾಥ ನಾಪತ್ತೆ ಬಗ್ಗೆ ಆತನ ತಾಯಿ ಲಕ್ಷ್ಮಿಬಾಯಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ಬೆನ್ನುಬಿದ್ದ ಪೋಲೀಸರು ಆರೋಪಿಗಳ ಹೆಡೆಮುರಿ ಕಟ್ಟಿದ್ದು, ಯುವತಿಯ ತಂದೆ ಪರಸಪ್ಪ ಮತ್ತು ಸಂಬಂಧಿಗಳಾದ ಬೀರಪ್ಪ ,ಹನುಮಂತ, ಹಾಗೂ ರವಿಯನ್ನ ಬಂಧಿಸಿದ್ದಾರೆ. ಅಲ್ಲದೇ ಉಳಿದ ಬಾಗಪ್ಪ, ಬಸಪ್ಪ, ದರೆಪ್ಪ ಎಂಬುರಿಗಾಗಿ ತಲಾಶ ನಡೆಸಲಾಗಿದೆ ಎಂದು ಬಾಗಲಕೋಟೆ ಎಸ್ಪಿ ಜಯಪ್ರಕಾಶ್ ಮಾಹಿತಿ ನೀಡಿದ್ದಾರೆ.
ಒಟ್ಟಿನಲ್ಲಿ ಬಾಳಿ ಬದುಕಬೇಕಿದ್ದ ಯುವಪ್ರೇಮಿಗಳು ಮರ್ಯಾದಾ ಹತ್ಯೆ ಕಾರಣ ಜೀವ ಕಳೆದುಕೊಳ್ಳುವಂತಾಗಿದ್ದು, ಅತ್ತ ಯುವತಿ ಮನೆಯವರು ಕೃತ್ಯವೆಸಗಿ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದರೆ, ಇತ್ತ ಯುವಕನ ಮನೆಮಂದಿ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ.