ಲಾಕ್‌ಡೌನ್ ಕರ್ತವ್ಯಕ್ಕೆ ಹೊರಟಿದ್ದ ಎಎಸ್‌ಐ ಹೃದಯಾಘಾತದಿಂದ ಸಾವು

Kannadaprabha News   | Asianet News
Published : Apr 16, 2020, 08:56 AM IST
ಲಾಕ್‌ಡೌನ್ ಕರ್ತವ್ಯಕ್ಕೆ ಹೊರಟಿದ್ದ ಎಎಸ್‌ಐ ಹೃದಯಾಘಾತದಿಂದ ಸಾವು

ಸಾರಾಂಶ

ಕರ್ತವ್ಯಕ್ಕೆ ಹಾಜರಾಗಲು ಹೊರಟಿದ್ದ ಎಎಸ್‌ಐಯೊಬ್ಬರು ಹೃದಯಾಘಾತದಿಂದ ಮೃತಪಟ್ಟಘಟನೆ ಕೊಡಗಿನ ಮಡಿಕೇರಿಯಲ್ಲಿ ನಡೆದಿದೆ. ಮಡಿಕೇರಿಯಲ್ಲಿ ಟ್ರಾಫಿಕ್‌ ವಿಭಾಗದಲ್ಲಿ ಎಎಸ್‌ಐ ಆಗಿದ್ದ ವೆಂಕಟೇಶ್‌ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಮಡಿಕೇರಿ(ಏ.16): ಕರ್ತವ್ಯಕ್ಕೆ ಹಾಜರಾಗಲು ಹೊರಟಿದ್ದ ಎಎಸ್‌ಐಯೊಬ್ಬರು ಹೃದಯಾಘಾತದಿಂದ ಮೃತಪಟ್ಟಘಟನೆ ಕೊಡಗಿನ ಮಡಿಕೇರಿಯಲ್ಲಿ ನಡೆದಿದೆ. ಮಡಿಕೇರಿಯಲ್ಲಿ ಟ್ರಾಫಿಕ್‌ ವಿಭಾಗದಲ್ಲಿ ಎಎಸ್‌ಐ ಆಗಿದ್ದ ವೆಂಕಟೇಶ್‌ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಬೆಳಗ್ಗೆ ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಲು ಹೊರಟಿದ್ದ ವೇಳೆ ಹೃದಯಾಘಾತವಾಗಿದ್ದು, ತಕ್ಷಣವೇ ಚಿಕಿತ್ಸೆಗಾಗಿ ಅವರನ್ನು ಮಡಿಕೇರಿಯ ಅಶ್ವಿನಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಶ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೂ ಅವರ ಸ್ಥಿತಿ ಗಂಭೀರವಾಗಿದ್ದ ಕಾರಣಕ್ಕೆ ಅವರನ್ನು ಮೈಸೂರು ಆಸ್ಪತ್ರೆಗೆ ರವಾನಿಸಲಾಯಿತು.

ಸತತ 11ನೇ ದಿನವೂ ದಕ್ಷಿಣ ಕನ್ನಡ ಕೊರೋನಾ ಮುಕ್ತ

ಆದರೆ ಆಸ್ಪತ್ರೆಗೆ ತಲುಪುವ ಮಾರ್ಗ ಮಧ್ಯವೇ ವೆಂಕಟೇಶ್‌ ಅವರು ಮೃತಪಟ್ಟಿದ್ದಾರೆ. ಮಡಿಕೇರಿಯಲ್ಲಿ ಟ್ರಾಫಿಕ್‌ ವಿಭಾಗದಲ್ಲಿ ಎಎಸ್‌ಐ ಆಗಿ ವೆಂಕಟೇಶ್‌ ಕರ್ತವ್ಯ ನಿರ್ವಹಿಸುತ್ತಿದ್ದರು.

PREV
click me!

Recommended Stories

ಸಂತನಾಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಿದರೂ ಉನ್ನತ ಶಿಕ್ಷಣ ನೌಕರರ ಸೌಲಭ್ಯಕ್ಕೆ ಕತ್ತರಿ!
ಕಲ್ಯಾಣ ಕರ್ನಾಟಕ ನಾಡು ಈಗ ಗಾಂಜಾ ನೆಲೆವೀಡು: ನಶೆಯಲ್ಲಿ ತೇಲುತ್ತಿರೋ ಯುವ ಜನಾಂಗ