ನಡುರಸ್ತೆಯಲ್ಲೇ ಅಬಕಾರಿ ಉಪ ಅಧೀಕ್ಷಕರೊಬ್ಬರ ಮೇಲೆ ಅಬಕಾರಿ ಇನ್ಸ್‌ಪೆಕ್ಟರ್‌ನಿಂದ ಏಕಾಏಕಿ ಹಲ್ಲೆಯಾದ ಘಟನೆ ಬೆಳಕಿಗೆ ಬಂದಿದೆ. ಅಧಿಕಾರಿಗಳು ಬಡಿದಾಡಿಕೊಂಡ ವೀಡಿಯೋ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ.
ಮಡಿಕೇರಿ(ಏ.16): ನಡುರಸ್ತೆಯಲ್ಲೇ ಅಬಕಾರಿ ಉಪ ಅಧೀಕ್ಷಕರೊಬ್ಬರ ಮೇಲೆ ಅಬಕಾರಿ ಇನ್ಸ್‌ಪೆಕ್ಟರ್‌ನಿಂದ ಏಕಾಏಕಿ ಹಲ್ಲೆಯಾದ ಘಟನೆ ಬೆಳಕಿಗೆ ಬಂದಿದೆ. ಅಧಿಕಾರಿಗಳು ಬಡಿದಾಡಿಕೊಂಡ ವೀಡಿಯೋ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ.
ಸೋಮವಾರಪೇಟೆ ತಾಲೂಕಿನ ಆಲೂರು ಸಿದ್ದಾಪುರದಲ್ಲಿ ಘಟನೆ ನಡೆದಿದ್ದು, ನಡು ರಸ್ತೆಯಲ್ಲಿಯೇ ಅಬಕಾರಿ ಇಲಾಖೆ ಅಧಿಕಾರಿಗಳು ಕಿತ್ತಾಡಿಕೊಂಡಿದ್ದಾರೆ. ಮದ್ಯ ಅಕ್ರಮ ಮಾರಾಟ ಪರಿಶೀಲನೆಗೆ ಸ್ಥಳಕ್ಕೆ ಅಬಕಾರಿ ಉಪ ಅಧೀಕ್ಷಕರು ತೆರಳಿದ್ದರು.
ಬಳಿಕ ಸ್ಥಳಕ್ಕೆ ಬಂದಿದ್ದ ಅಬಕಾರಿ ಇನ್ಸ್‌ಪೆಕ್ಟರ್ ಹಾಗೂ ಕಾರು ಚಾಲಕನಿಂದ ಉಪ ಅಧೀಕ್ಷಕರ ಮೇಲೆ ಹಲ್ಲೆಯಾಗಿದೆ. ಅವಾಚ್ಯ ಶಬ್ದ ಬಳಸಿ ಅಬಕಾರಿ ಉಪ ನಿರೀಕ್ಷಕ, ಇನ್ಸ್‌ಪೆಕ್ಟರ್ ಕಿತ್ತಾಡಿಕೊಂಡಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.