ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಜುಲೈ 25) : ಬೆಂಗಳೂರಿನಲ್ಲಿ ಶಂಕಿತ ಉಗ್ರ ಸಿಕ್ಕಿಬಿದ್ದಿದ್ದು, ರಾಜ್ಯ ಉಗ್ರರ ಅಡಗುತಾಣವಾಗ್ತಿದೆಯಾ ಎನ್ನುವ ಅನುಮಾನಗಳು ಮೂಸುತ್ತಿವೆ. ಈ ನಡುವೆ ಬುರ್ಕಾಧಾರಿಯೊಬ್ಬ ಆಲಮಟ್ಟಿ ಡ್ಯಾಂ ಬಳಿ ಸುತ್ತಾಡುವ ಮೂಲಕ ಆತಂಕ ಮೂಡಿಸಿದ್ದಾನೆ. ಹೈ ಸೆಕ್ಯೂರಿಟಿ ಇರುವ ಆಲಮಟ್ಟಿ ಡ್ಯಾಂ ಬಳಿ ಬುರ್ಕಾಧಾರಿ ಸುತ್ತಾಟ ಹಲವು ಅನುಮಾನಗಳಿಗೆ ಕಾರಣವಾಗಿತ್ತಾದ್ರು, ಅಲ್ಲಿನ ಭದ್ರತಾ ಸಿಬ್ಬಂದಿಗಳು ವಿಚಾರಿಸಿದಾಗ ಅಚ್ಚರಿಯ ವಿಚಾರ ತಿಳಿದು ಬಂದಿದೆ. ಬುರ್ಕಾದಲ್ಲಿ ಇದ್ದದ್ದು ಅವನಲ್ಲ.. ಅವಳು ಅನ್ನೋದು ಗೊತ್ತಾಗಿದೆ.
ಡ್ಯಾಂ ಬಳಿ ಬುರ್ಕಾಧಾರಿ ಓಡಾಟ ; ಕೆಲಕಾಲ ಆತಂಕ..!
ಇಂದು ಬೆಳಿಗ್ಗೆ ಆಲಮಟ್ಟಿ ಡ್ಯಾಂ(Almatti Dam) ಗೇಟ್ ಬಳಿ ಬುರ್ಕಾಧಾರಿ ಓಡಾಟ ನಡೆಸುತ್ತಿದ್ದ, ಇದನ್ನ ಕಂಡ ಅಲ್ಲಿನ ಭದ್ರತಾ ಸಿಬ್ಬಂದಿ(Security) ಕೆಲಕಾಲ ಆತಂಕಗೊಂಡಿದ್ದಾರೆ. ಡ್ಯಾಂ ಒಳಗೆ ಪ್ರವೇಶಕ್ಕೆ ಕೇಳಿದ್ದಾಗಲು ಇನ್ನು ಸಮಯವಾಗಿಲ್ಲ ಎಂದು ವಾಪಾಸ್ ಕಳಿಸಿದ್ದಾರೆ. ಆದ್ರೆ ಬುರ್ಕಾಧಾರಿ ನಡೆ ಅನುಮಾನ ಹುಟ್ಟಿಸುವಂತಿದ್ದು, ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ಉಂಟಾಗಿದೆ. ಬುರ್ಕಾಧಾರಿ ಯಾರೆಂದು ವಿಚಾರಿಸಲಾಗಿ, ಬುರ್ಕಾದಲ್ಲಿ ಮಹಿಳೆಯಿಲ್ಲ, ಯುವನಿಕರೋದು ಪತ್ತೆಯಾಗಿದೆ.. ಈ ವಿಚಾರ ಮತ್ತಷ್ಟು ಆತಂಕ ಸೃಷ್ಟಿ ಮಾಡಿದೆ.
ಆಲಮಟ್ಟಿ ಡ್ಯಾಂನಿಂದ 75,000 ಕ್ಯುಸೆಕ್ ನೀರು ಬಿಡುಗಡೆ: ನದಿಪಾತ್ರದ ಜನರಲ್ಲಿ ಮುಂಜಾಗೃತೆಗೆ ಸೂಚನೆ
ಬುರ್ಕಾದಲ್ಲಿದ್ದದ್ದು ಯಾರು? ಆತಂಕವೋ ಆತಂಕ...!
ಬುರ್ಕಾ ಧರಿಸಿದಾತ ಡ್ಯಾಂ ಬಳಿ ಬರ್ತಿದ್ದಂತೆ ವಿಚಾರಿಸಿದಾಗ ಧ್ವನಿ ಕೇಳಿ ಭದ್ರತಾ ಸಿಬ್ಬಂದಿಗೆ ಅನುಮಾನ ಬಂದಿದೆ. ವಿಚಾರಣೆ ನಡೆಸಿದಾಗ ಒಳಗಿರೋದು ಅವಳಲ್ಲ ಅವನು ಅನ್ನೋದು ಗೊತ್ತಾಗಿದೆ. ಇದರಿಂದ ಅಲ್ಲಿ ಆತಂಕ ಹೆಚ್ಚಾಗಿದೆ. ಭದ್ರತಾ ಸಿಬ್ಬಂದಿಯಲ್ಲೂ ಈ ವಿಚಾರ ಆತಂಕ ಮೂಡಿಸಿದೆ. ಆದರೆ ಆ ಯುವಕನನ್ನ ಹತ್ತಿರದಲ್ಲೆ ಇರುವ ಭದ್ರತಾ ಕಚೇರಿಗೆ ಕೊಂಡೊಯ್ದು ವಿಚಾರಿಸಲಾಗಿ ಮತ್ತೊಂದು ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ. ಆ ವಿಚಾರ ತಿಳಿದು ಅಲ್ಲಿದ್ದವರಿಗೆ ನಗಬೇಕೋ ಅಳಬೇಕೋ ಅನ್ನೋದೆ ಗೊಂದಲಕ್ಕಿಡು ಮಾಡಿದೆ..
ಭದ್ರತಾ ಸಿಬ್ಬಂದಿಗೆ ಕನ್ಪ್ಯೂಜ್ ಮೇಲೆ ಕನ್ಪ್ಯೂಜ್..!
ಠಾಣೆಗೆ ಕರೆದುಕೊಂಡು ವಿಚಾರಣೆ ಮಾಡಿದಾಗ ಬುರ್ಕಾದಲ್ಲಿದ್ದ ಯುವಕ ನಾನು ಅವನಲ್ಲ.. ಅವಳು ಎಂದು ರಾಗ ತೆಗೆದಿದ್ದಾನೆ. ಇದರಿಂದ ಕನ್ಪ್ಯೂಜ್ ಆದ ಭದ್ರತಾ ಸಿಬ್ಬಂದಿಗೆ ಕೆಲಕಾಲ ಏನು ಮಾಡಬೇಕು ಅನ್ನೋದೆ ಅರ್ಥವಾಗಿಲ್ಲ. ಬುರ್ಕಾದಲ್ಲಿದ್ದದ್ದು ಅವಳಲ್ಲ ಅವನು ಅಂತಾ ಗೊತ್ತಾದ ಮೇಲೆ ಆತಂಕದಲ್ಲಿದ್ದ ಭದ್ರತಾ ಸಿಬ್ಬಂದಿಗೆ ಆತ ನಾನು ಅವನಲ್ಲ ಅವಳು ಅಂದಾಗ ಮತ್ತಷ್ಟು ಕನ್ಪ್ಯೂಜ್ ಉಂಟಾಗಿದೆ.. ಸರಿಯಾಗಿ ವಿಚಾರಿಸಿದಾಗ ಅದೊಂದು ಮ್ಯಾಟರ್ ಬಯಲಾಗಿದೆ..
ಪಂಚನದಿಗಳ ಬೀಡು ವಿಜಯಪುರದಲ್ಲಿ ನೀರಿಗಾಗಿ ಶುರುವಾಗಿದೆ ರೈತರ ಪರದಾಟ.!
ಬಯಲಾಯ್ತು ಅವನಲ್ಲ, ಅವಳ ಮ್ಯಾಟರ್..!
ಠಾಣೆಯಲ್ಲಿ ಭದ್ರತಾ ಸಿಬ್ಬಂದಿ ವಿಚಾರಣೆ ನಡೆಸಿದ ವೇಳೆ "ನಾ ಅವನಲ್ಲ ಅವಳು" ಅನ್ನೋ ಸಿನಿಮಾ ಕಥೆ ಬಿಚ್ಚಿಕೊಂಡಿದೆ. ವಿಚಾರಣೆಯಲ್ಲಿ ಬುರ್ಕಾದಲ್ಲಿ ಇದ್ದದ್ದು ನಾನು ಅವನಲ್ಲ,, ನಾನು ಅವಳು ಎನ್ನುವ ತನ್ನ ಖಾಸಗಿ ವಿಚಾರವನ್ನ ಬಿಚ್ಚಿಟ್ಟಿದ್ದಾನೆ. ನನಗೆ ಹೆಣ್ಣಾಗುವ ಆಸೆ ಬಂದಿದೆ, ನನ್ನಲ್ಲಿ ಹೆಣ್ತತ ಮೊಳಕೆ ಒಡೆದಿದೆ. ನಾನು ಈಗ ನಾನಾಗಿ ಉಳಿದಿಲ್ಲ, ನಾನು ಅವಳಾಗಿ ಬದಲಾಗಿದ್ದೇನೆ ಎಂದಿದ್ದಾನೆ.
ಪೊದೆಯಲ್ಲಿ ಅಡಗಿ ಲಿಪ್‌ಸ್ಟಿಕ್ ಹಚ್ಚಿಕೊಂಡ..!
ಭದ್ರತಾ ಸಿಬ್ಬಂದಿಗಳಿಗೆ ಮೊದಲೇ ಈತನ ನಡೆ ಅನುಮಾನ ಹುಟ್ಟಿಸಿದ್ದರಿಂದ ದೂರದಿಂದಲೇ ಚಲನವಲನಗಳನ್ನ ಗಮನಿಸಿದ್ದಾರೆ. ಹಾಗೇ ಭದ್ರತಾ ಸಿಬ್ಬಂದಿ ಮಾತನಾಡಿಸಿಕೊಂಡು ಹೋದವ ಸೀದಾ ಪೊದೆ ಸೇರಿ ಬಿಟ್ಟಿದ್ದಾನೆ. ಕುತೂಹಲದಿಂದ ಸಿಬ್ಬಂದಿ ನೋಡಿದಾಗ ಆತ ಅಲ್ಲಿ ಕುಳಿತು ಯುವತಿಯರಂತೆ ಲಿಪ್ಸ್ಟಿಕ್ ಹಚ್ಚಿಕೊಳ್ಳೋದು ಕಂಡು ಬಂದಿದೆ. ಹೆಣ್ಣಿನಂತೆ ರೆಡಯಾಗೋದಕ್ಕೆ ಪೊದೆ ಸೇರಿದ್ದನ್ನ ಕಂಡು ಸಿಬ್ಬಂದಿ ಅಚ್ಚರಿಗೊಂಡಿದ್ದಾರೆ..
ಮನೆಯಲ್ಲಿ ಮದುವೆಗೆ ಹೆಣ್ಣು ನೋಡಿದಕ್ಕೆ ಓಡಿ ಬಂದ..!
ಹೀಗೆ ಬುರ್ಕಾದಲ್ಲಿ ಸಿಕ್ಕಿಬಿದ್ದ ಅವಳು, ಮೊದಲು ಅವನಾಗಿಯೇ ಇದ್ದ ಕಿಶೋರ್ ಮಲ್ಲಿಕಾರ್ಜುನಸ್ವಾಮಿ ಅಂತೆ. ಹಾಸನ ಮೂಲದ ಸಕಲೇಶಪುರ ನಿವಾಸಿ. ಮೊದಲು ಅವನಾಗಿದ್ದ ಕಿಶೋರ್ ಗೆ ಇತ್ತಿಚೇಗೆ ತಾನು ಅವನಲ್ಲ ಅವಳು ಅನ್ನೋ ವಿಚಾರ ತಿಳಿದಿದೆ. ಆದ್ರೆ ಮನೆಯಲ್ಲಿ ಮದುವೆಗೆ ಹೆಣ್ಣು ನೋಡೊಕೆ ಶುರು ಮಾಡಿದ ಮೇಲೆ ಕಿಶೋರ್ ಮನೆ ಬಿಟ್ಟು ಓಡಿ ಬಂದಿದ್ದಾನಂತೆ. ಹೀಗೆ ಬಂದವ ಬುರ್ಕಾ ಧರಿಸಿ ಅಡ್ಡಾಡೋಕೆ ಶುರು ಮಾಡಿದ್ದನಂತೆ. ಹೀಗೆ ಬುರ್ಕಾ ಧರಿಸಿ ಆಲಮಟ್ಟಿ ಡ್ಯಾಂ ಬಳಿ ಬಂದಾಗ ಭದ್ರತಾ ಸಿಬ್ಬಂದಿ ಕೈಗೆ ತಗಲಾಕಿಕೊಂಡಿದ್ದಾನಂತೆ..
ಅವನಲ್ಲಿ ಮೊಳಕೆಯೊಡೆದ ಅವಳು..!
ಕಿಶೋರ್ ಭದ್ರತಾ ಸಿಬ್ಬಂದಿಗಳ ಎದುರು ಅಸಲಿ ತಾನು ಏನು ಅನ್ನೋದನ್ನ ಬಿಚ್ಚಿಟ್ಟಿದ್ದಾನೆ. ಮೊದಲು ಹುಡುಗರಂತೆ ಬೆಳೆದ ಕಿಶೋರ್ ಗೆ ಇತ್ತಿಚೇಗೆ ಹೆಣ್ಣಾಗಿ ಪರಿವರ್ತನೆಯಾಗಿರೋದು ಪಕ್ಕಾ ಆಗಿದೆಯಂತೆ. ಮನೆಯಲ್ಲಿ ಯಾರು ಇಲ್ದೆ ಇರೋವಾಗ ಹೆಣ್ಣಿನಂತೆ ಬಟ್ಟೆ ಧರಿಸುತ್ತಿದ್ದನಂತೆ. ಕೊನೆಗೆ ಮನೆಯಲ್ಲಿ ಈ ವಿಚಾರ ಹೇಳಲಾಗದೆ ಮನೆ ಬಿಟ್ಟು ಬಂದಿದ್ದಾನಂತೆ..