ಕಲಬುರಗಿ (ಜು.25) : ತಾಲೂಕಿನ ಕಡಣಿ ಗ್ರಾಮದ ಹೊರವಲಯದ ಹಳ್ಳದಲ್ಲಿ ಶುಕ್ರವಾರ ರಾತ್ರಿ ಕೊಚ್ಚಿ ಹೋಗಿದ್ದ ವ್ಯಕ್ತಿ ಶನಿವಾರ ಶವವಾಗಿ ಪತ್ತೆಯಾಗಿದ್ದು, ಅಂತ್ಯಕ್ರಿಯೆ ಮುಂಚೆಯೇ ಮೃತರ ಕುಟುಂಬಕ್ಕೆ 5 ಲಕ್ಷ ರು. ಪರಿಹಾರ ವಿತರಿಸಲಾಯಿತು. ಸಿದ್ದು ಕೆರಮಗಿ (36) ಮಳೆ ಅನಾಹುತಕ್ಕೆ ಬಲಿಯಾದ ಯುವಕ. ಒಂದು ಕಿಲೋ ಮೀಟರ್ ದೂರದಲ್ಲಿ ಮುಳ್ಳು ಕಂಟಿಯಲ್ಲಿ ಸಿಲುಕಿರುವ ದೇಹ ಶನಿವಾರ ಬೆಳಿಗ್ಗೆ ಪತ್ತೆಯಾಗಿದೆ. ಶುಕ್ರವಾರ ಸಂಜೆ ಧಾರಾಕಾರ ಮಳೆ ಸುರಿದ್ದಿದ್ದು, ಹೊಲದಲ್ಲಿ ಕಾಯಿಪಲ್ಯ ತರಲು ಹೋಗಿದ್ದ ಟಂಟಂ ವಾಹನ ಸಿಕ್ಕಿಬಿದ್ದಿರುವುದನ್ನು ಹೊರ ತೆಗೆಯಲು ಟ್ರ್ಯಾಕ್ಟರ್ ಹೊರಟಿತ್ತು. ಜೋರಾದ ಮಳೆಗೆ ಹಳ್ಳ ತುಂಬಿದ ಕಾರಣ ಟ್ರ್ಯಾಕ್ಟರ್ ನೀರಿನ ರಭಸಕ್ಕೆ ನೀರಲ್ಲಿ ಹರಿದು ಹೋಯಿತು. ಟ್ರ್ಯಾಕ್ಟರ್ ಚಾಲಕ ಕಂಟಿಯೊಂದನ್ನು ಹಿಡಿದು ಸ್ವಲ್ಪ ಸಮಯದ ನಂತರ ಹೊರ ಬಂದ. ಆದರೆ ಟ್ರ್ಯಾಕ್ಟರ್‌ನಲ್ಲಿದ್ದ ಸಿದ್ದು ಕೆರಮಗಿ ನೀರಲ್ಲಿ ಕೊಚ್ಚಿಕೊಂಡು ಹೋದರು. ಇವರ ಪತ್ತೆಗಾಗಿ ಶುಕ್ರವಾರ ರಾತ್ರಿಯಿಡಿ ಅಗ್ನಿಶಾಮಕ ದಳ ಹಾಗೂ ಇತರರು ಶೋಧ ನಡೆಸಿದರೂ ಸಿಗಲಿಲ್ಲ. ಶನಿವಾರ ಬೆಳಿಗ್ಗೆ ಶವ ಪತ್ತೆಯಾಗಿದೆ.
ತ್ತರ ಕರ್ನಾಟಕದ 7 ಜಿಲ್ಲೆಗಳಲ್ಲಿ ಭಾರೀ ಮಳೆ: ಸಿಡಿಲಿಗೆ ರೈತ ಬಲಿ
undefined
5 ಲಕ್ಷ ರು. ಪರಿಹಾರ ವಿತರಣೆ: ಶವ ಪತ್ತೆಯಾದ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆ ಮುಂಚೆಯೇ ಮೃತರ ಪತ್ನಿ ನಂದಿನಿಗೆ ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಅವರು ನೈಸರ್ಗಿಕ ವಿಕೋಪ ಪರಿಹಾರ ನಿಧಿಯಿಂದ 5 ಲಕ್ಷ ರು. ಪರಿಹಾರ ವಿತರಿಸಿದರು. ಇದಲ್ಲದೆ ನಿರ್ಗತಿಕ ವಿಧವಾ ವೇತನದ ಮಂಜೂರಾತಿ ಪತ್ರ ಸಹ ಮೃತರ ಪತ್ನಿಗೆ ನೀಡಲಾಯಿತು. ಕಲಬುರಗಿ ತಹಸೀಲ್ದಾರ ಪ್ರಕಾಶ ಕುದರಿ ಸೇರಿದಂತೆ ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ಮುಂತಾದವರಿದ್ದರು. ನಂತರ ಮೃತ ವ್ಯಕ್ತಿಯ ಅಂತ್ಯಕ್ರಿಯೆ ನೆರವೇರಿತು.
ಕಡಣಿ ಗ್ರಾಮಕ್ಕೆ ಅಲ್ಲಮಪ್ರಭು ಪಾಟೀಲ್ ಭೇಟಿ: ಭಾರಿ ಮಳೆಗೆ ಹಳ್ಳದ ರಭಸದ ನೀರಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿರುವ ಸಿದ್ದಣ್ಣ ಕೆರಮಗಿ ಮನೆಗೆ ಮಾಜಿ ಎಂಲ್‌ಸಿ ಅಲ್ಲಮ ಪ್ರಭು ಪಾಟೀಲ್ ಭೇಟಿ ನೀಡಿ ನೊಂದ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಜು.22ರ ರಾತ್ರಿ ಸುರಿದ ಧಾರಾಕಾರ ಭಾರಿ ಮಳೆಗೆ ಸಿದ್ದಣ್ಣ ತಂದೆ ನಾಗಣ್ಣ ಕರೆಮಗಿ ಕಡಣಿಯಿಂದ ಮಿಣಜಿಗಿ ಹೋಗುವ ರಸ್ತೆಯಲ್ಲಿ ಹಳ್ಳ ತುಂಬಿದ ಕಾರಣ ಸೇತುವೆ ದಾಟುವಾಗ ಟ್ರ್ಯಾಕ್ಟರ್ ಮುಗುಚಿ ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದರಿಂದ ಈ ಮನೆಯಲ್ಲಿ ಗೋಳಾಟ ಮುಗಿಲು ಮುಟ್ಟಿತ್ತು.
ಈ ಮೊದಲೇ ಕುಮಾರಸ್ವಾಮಿ ಕೊಟ್ಟ ಸಲಹೆಗೆ BSY ಸರ್ಕಾರ ನಿರ್ಲಕ್ಷ್ಯ,ರೈತ ಸಾವು
ಮಳೆಗೆ ಕಡಣಿ ಸೇರಿದಂತೆ ಸುತ್ತಮುತ್ತ ಗ್ರಾಮದಲ್ಲಿ ರೈತರ ಬೆಳೆ ಭಾರಿ ಪ್ರಮಾಣದಲ್ಲಿ ಹನಿಯಾಗಿದೆ. ನೀರಲ್ಲಿ ಎಲ್ಲವೂ ಕೊಚ್ಚಿ ಹೋಗಿದೆ, ಸರ್ಕಾರ ತಕ್ಷಣ ಪರಿಹಾರದ ವ್ಯವಸ್ಥೆ ಮಾಡಬೇಕು ಎಂದು ಅಲ್ಲಮ ಪ್ರಭು ಪಾಟೀಲ್ ಆಗ್ರಹಿಸಿದ್ದಾರೆ. ಕಲಬುರಗಿ ತಾಲೂಕಿನ ಕಡಣಿ ಗ್ರಾಮದ ಹೊರವಲಯದ ಹಳ್ಳದಲ್ಲಿ ಕೊಚ್ಚಿಹೋಗಿದ್ದ ಸಿದ್ದು ಕೆರಮಗಿ ಶವವಾಗಿ ಪತ್ತೆಯಾದ ಹಿನ್ನೆಲೆಯಲ್ಲಿ ಆತನ ಪತ್ನಿಗೆ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ಅವರು 5 ಲಕ್ಷ ರು. ಪರಿಹಾರ, ನಿರ್ಗತಿಕ ವಿಧವಾ ವೇತನ ಮಂಜೂರಾತಿ ಪತ್ರ ವಿತರಿಸಿದರು.