ಕಲಬುರಗಿಯ 10ರೂ. ವೈದ್ಯರಿಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ!

By Kannadaprabha News  |  First Published Jul 25, 2022, 1:04 PM IST

ಕೋವಿಡ್‌ ಸಂಕಷ್ಟದ ಕಾಲದಲ್ಲಿ ಡಾ.ಮಲ್ಹಾರರಾವ್‌ ಮಲ್ಲೆ ಮುನ್ನೆಡಿಸಿಕೊಂಡು ಹೊರಟಿರುವ ’ಲಸಿಕಾ ಅಭಿಯಾನ’ಕ್ಕೆ ಪ್ರಧಾನಿ ಮೋದಿಯಯವರು ಪತ್ರ ಬರೆದು ಮೆಚ್ಚುಗೆ  ವ್ಯಕ್ತಪಡಿಸಿದ್ದಾರೆ


ಕಲಬುರಗಿ (ಜು.25) : ಕಳೆದ 40 ವರ್ಷಗಳಿಂದ ತಾವು ಜನರಿಗೆ ನೀಡುವ ಗುಣಮಟ್ಟದ ವೈದ್ಯಕೀಯ ಸಲಹೆ, ಸೂಚನೆ, ಚಿಕಿತ್ಸೆಗೆ ಪ್ರತಿಯಾಗಿ ಪಡೆಯುವ ಶುಲ್ಕ (ಕೇವಲ 10 ರು.) ದಿಂದಲೇ ಮನೆಮಾತಾಗಿರುವ ಕಲಬುರಗಿಯ ಜನಸ್ನೇಹಿ ವೈದ್ಯ ಡಾ.ಮಲ್ಹಾರ ರಾವ್‌ ಮಲ್ಲೆ ಇದೀಗ ಕೋವಿಡ್‌ ಸಂಕಷ್ಟದಲ್ಲಿ ನಿಸ್ವಾರ್ಥತೆಯಿಂದ ನೀಡಿರುವ ಸೇವೆಯಿಂದಲೇ ದೇಶದ ಪ್ರಧಾನಿ ನರೇಂದ್ರ ಮೋದಿ ಗಮನ ಸೆಳೆದಿದ್ದಾರೆ. ವಿಡ್‌ ಸೋಂಕಿನ ಸಂಕಷ್ಟದ ಸಂದರ್ಭದಲ್ಲಿ ಮುಂಚೂಣಿಯಲ್ಲಿ ನಿಂತು ಸಮಾಜದ ಕಡು ಬಡವರು ಸೇರಿದಂತೆ ಎಲ್ಲಾ ವರ್ಗದ ಜನತೆಗೆ ಕೋವಿಡ್‌ ಲಸಿಕೆ ನೀಡುವಲ್ಲಿ ಡಾ.ಮಲ್ಲೆ ತೋರಿರುವ ಮುತುವರ್ಜಿ ಮೋದಿ ಮೆಚ್ಚುಗೆಗೆ ಪಾತ್ರವಾಗಿದ್ದು, ಸೇವೆಯೇ ಉಸಿರಾಗಿರೋ ಡಾ.ಮಲ್ಲೆ ಮುಡಿಗೆ ಇದು ಹೊಸಗರಿಯಾಗಿದೆ.

ಡಾ.ಮಲ್ಲೆ ಸೇವೆಗೆ ಮೋದಿ ಮೆಚ್ಚುಗೆ:

Latest Videos

undefined

ಪ್ರಧಾನಿ ನರೇಂದ್ರ ಮೋದಿ(PM Narendra Modi) ಜು.17ರಂದು ಡಾ.ಮಲ್ಹಾರರಾವ್‌ ಮಲ್ಲೆಗೆ (Mallahrao)ಪತ್ರ ಬರೆದು ಕೋವಿಡ್‌ ಲಸಿಕಾಕರಣ(Covd Vaccination)ದಲ್ಲಿ ಸೆಂಟ್‌ ಜಾನ್‌ (Saint john) ಆ್ಯಂಬುಲೆನ್ಸ್‌ ಅಡಿಯಲ್ಲಿ ನಗರ ಆರೋಗ್ಯ ಕೇಂದ್ರದಲ್ಲಿ ನಡೆಸಿರುವ ಲಸಿಕಾ ಅಭಿಯಾನ, ಲಸಿಕೆಯ ಪರ ಜನಜಾಗೃತಿ ಆಂದೋಲನಕ್ಕೆ ತಲೆದೂಗಿದ್ದಾರೆ.

ಕೋವಿಡ್‌ ಸಂಕಷ್ಟಭಾರತಕ್ಕೆ ಇದಿರಾಗಿತ್ತು. ಈ ಸಂಕಷ್ಟದಲ್ಲಿ ನಿಮ್ಮಂತಹ ದಿಟ್ಟ, ಜನಪರ ಹಾಗೂ ಸೇವಾಪರತೆಯ ವೈದ್ಯರು ದೇಶದ ಜನತೆಯ ಜೊತೆಗೆ ನಿಂತು ಕೋವಿಡ್‌ ಮಹಾಮಾರಿಯಿಂದ ಎಲ್ಲರು ಪಾರಾಗುವಂತೆ ಮಾಡಿದೆ. ನಿಮ್ಮ ಈ ಸೇವಾ ಪರತೆಗೆ ಅಭಿನಂದನೆಗಳು ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಪತ್ರದಲ್ಲಿ ಡಾ.ಮಲ್ಲೆ ಮತ್ತು ಅವರ ಕುಟುಂಬಕ್ಕೆ ಶುಭ ಕೋರಿದ್ದಾರೆ. ಕೋವಿಡ್‌ನ ವಿರುದ್ಧದ ನಮ್ಮ ಯುದ್ಧದಲ್ಲಿ ದೇಶ 200 ಕೋಟಿ ಲಸಿಕೆಗಳನ್ನು ಜನತೆಗೆ ಹಾಕಿದೆ. ಈ ಮಹಾ ಲಸಿಕಾ ಅಭಿಯಾನದಲ್ಲಿ ನಿಮ್ಮಂತಹ ನಿಸ್ಪೃಹತೆಯ, ಸೇವಾಪರತೆಯ ವೈದ್ಯರ ಕೊಡುಗೆ ಅಪಾರ ಎಂದೂ ಮೋದಿ ಮೆಚ್ಚುಗೆ ಸಾಲುಗಳನ್ನು ಬರೆದಿದ್ದಾರೆ.

ಕೋವಿಡ್‌ ಕಾಲದ ಸಂಕಷ್ಟಗಳನ್ನೆಲ್ಲ ಮೆಟ್ಟಿನಿಲ್ಲುವಲ್ಲಿ ವೈದ್ಯರಾಗಿ, ಕೋವಿಡ್‌ ಮುಂಚೂಣಿ ಸೈನಿಕರಾಗಿ ನೀವು ತೋರಿದ ಅಪ್ರತಿಮ ಧೈರ್ಯ ಹಾಗೂ ಸೇವೆಯ ಕಾಯಕಕ್ಕೆ ದೇಶ ಎಂದಿಗೂ ತಮಗೆ ಋುಣಿಯಾಗಿದೆ. ಕೋವಿಡ್‌ ಸಂಕಷ್ಟಪ್ರಪಂಚವನ್ನೇ ಕಾಡಿದ ಸಂದರ್ಭದಲ್ಲಿ ನಿಮ್ಮಂತಹ ವೈದ್ಯರ ನೆರವಿನಿಂದ ಭಾರತ ಕೋವಿಡ್‌ ಹೊಡೆದೋಡಿಸುವಲ್ಲಿ ತೋರಿರುವ ಧೈರ್ಯ ಹಾಗೂ ಸಾಹಸದ ಕಥೆಗಳು, ಕಾರ್ಯಗಳು ಮುಂದಿನ ಪೀಳಿಗೆಗೆ ಎಂದಿಗೂ ಮಾದರಿಯಾಗಲಿವೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.

2 ಲಕ್ಷಕ್ಕೂ ಹೆಚ್ಚು ಲಸಿಕಾಕರಣ ಮಾಡಿರುವ ಡಾ.ಮಲ್ಲೆ:

ಡಾ.ಮಲ್ಹಾರ್‌ ರಾವ್‌ ಮಲ್ಲೆ 74 ವರ್ಷದ ಅನುಭವಿ ವೈದ್ಯರು. ಜನರ ಸೇವೆಗಾಗಿಯೇ ವೈದ್ಯಕೀಯಕ್ಕೆ ಬಂದಿರುವ ಇವರು ಸೆಂಟ್‌ ಜಾನ್‌ ಆ್ಯಂಬುಲನ್ಸ್‌ ಅಡಿಯಲ್ಲಿ ಹೊಂದಿರುವ ನಗರ ಆರೋಗ್ಯ ಕೇಂದ್ರದಲ್ಲಿ ತಾವೇ ಖುದ್ದು ಮುಂದೆ ನಿಂತು ಕೋವಿಡ್‌ ಲಸಿಕೆ ಹೊಸತಾಗಿ ಬಂದಂತಹ ದಿನದಿಂದ ಇಂದಿನವರೆಗೂ ನಿತ್ಯ ಸರಾಸರಿ ಕನಿಷ್ಠ 50, ಗರಿಷ್ಟ250ರಷ್ಟುಜನರಿಗೆ ಲಸಿಕೆ ನೀಡಿದವರು. 2 ವರ್ಷದಲ್ಲಿ ಸುಮಾರು 2 ಲಕ್ಷ ದಷ್ಟುಜನರಿಗೆ ಲಸಿಕೆ ನೀಡಿದ ಖ್ಯಾತಿ ಇವರದ್ದಾಗಿದೆ.

ಇವರ ನಿರಂತರ ಲಸಿಕಾಕರಣದಿಂದಾಗಿ ನಗರದಲ್ಲಿರುವ ಜಿಮ್ಸ್‌, ಇಎಸ್‌ಐಸಿ ಸೇರಿದಂತಿರುವ 11 ಲಸಿಕಾಕರಣ ಕೇಂದ್ರಗಳಲ್ಲೇ ಡಾ.ಮಲ್ಲೆಯವರ ಕ್ಲಿನಿಕ್‌ನಲ್ಲಿ ಜನ ಲಸಿಕೆಗಾಗಿ ಕಿಕ್ಕಿರಿದು ಸೇರಿರುತ್ತಿದ್ದ ನೋಟಗಳು ಸದಾಕಾಲ ಕಂಡು ಬರುತ್ತಿದ್ದವು. ಜನ ಲಸಿಕೆಯೇ ಬೇಡವೆಂದು ದೂರ ಹೋಗುತ್ತಿದ್ದಾಗಲೂ ಡಾ.ಮಲ್ಲೆ ಜಾಗೃತಿ ಮೂಡಿಸಿದ ಪರಿ ಅನನ್ಯ ಎಂದು ಸೋಂಕಿನಿಂದ ಬಚಾವ್‌ ಆಗಿರುವ ಅನೇಕರು ಹೇಳುತ್ತಾರೆ.

ಜನ ಸೇವೆಗೆ ಸದಾ ಬೆಲೆ ಇದೆ: ಡಾ.ಮಲ್ಲೆ:

ಲಸಿಕಾಕರಣದ ತಮ್ಮ ನಿರಂತರ ಸೇವೆಗೆ ಪ್ರಧಾನಿ ಮೋದಿ ಪತ್ರ ಬರೆದು ಶಹಬಾಸ್‌ಗಿರಿ ನೀಡಿರೋದಕ್ಕೆ ಡಾ.ಮಲ್ಲೆ ಸಂತಸದಲ್ಲಿದ್ದಾರೆ. ’ಕನ್ನಡಪ್ರಭ ’ಜೊತೆ ಮಾತನಾಡಿದ ಅವರು, ಜನಪರ ಹಾಗೂ ಸೇವಾ ಪರತೆಯ ಕೆಲಸಗಳು ಎಂದಿಗೂ ಗಮನ ಸೆಳೆಯುತ್ತವೆ ಎನ್ನಲು ಇದೇ ಸಾಕ್ಷಿ, ಕಲಬುರಗಿಯಲ್ಲಿ ಮಾಡಿದ ಕೆಲಸಕ್ಕೆ ಪ್ರಧಾನಿ ಪತ್ರ ಬರೆದು ಮೆಚ್ಚುಗೆ ಸೂಚಿಸುವುದು ನನಗಂತೂ ಸಂತೋಷ ಉಂಟು ಮಾಡಿದೆ. ಇದು ಇನ್ನೂ ಹೆಚ್ಚಿಗೆ ಪ್ರೇರಣೆ ನೀಡಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರ ಬೂಸ್ಟರ್‌ ಡೋಸ್‌ಗೆ ಬೆಲೆ ನಿಗದಿಪಡಿಸಿದಾಗಲೂ ನಗರ ಆರೋಗ್ಯ ಕೇಂದ್ರವನ್ನ ಲಸಿಕೆ ಕೇಂದ್ರವಾಗಿಸಿತ್ತು. ಈ ಹಂತದಲ್ಲಿ ಡಾ.ಮಲ್ಲೆಯವರು ಜನತೆಗೆ ಅದೆಲ್ಲಿ ಲಸಿಕೆ ಹಣ ಹೊರೆಯಾಗುವುದೋ ಎಂದು ತಮಗೆ ಪ್ರತಿ ಲಸಿಕೆಗೆ ಸರ್ಕಾರ ನೀಡುತ್ತಿದ್ದ ಸೇವಾ ಶುಲ್ಕದಲ್ಲೇ 50 ರು.ನಷ್ಟುಹಣ ಜನರು ಲಸಿಕೆ ಹಾಕಿಸಿಕೊಂಡಾಗ ಅದಕ್ಕೆ ಪ್ರತಿಯಾಗಿ ಲಸಿಕೆ ಬೆಲೆಯಲ್ಲೇ ಕಮ್ಮಿ ಮಾಡಿ ನೀಡುತ್ತಿದ್ದರು ಎಂಬುದು ಡಾ. ಮಲ್ಲೆ ಜನಪರ ಕಾಳಜಿಗೆ ಕನ್ನಡಿ. ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂವಾಗಿ 75 ದಿನಗಳ ಕಾಲ ಬೂಸ್ಟರ್‌ ಡೋಸ್‌ ಉಚಿತವಾಗಿ ನೀಡೋದಾಗಿ ಘೋಷಿಸಿದ್ದರಿಂದ ಈಗಲೂ ಡಾ. ಮಲ್ಲೆ ತಮ್ಮ ಕ್ಲಿನಿಕ್‌ನಲ್ಲಿ ನಿತ್ಯ 50ರಿಂದ 60 ರಷ್ಟುಜನರಿಗೆ ಲಸಿಕೆ ನೀಡುತ್ತಿದ್ದಾರೆ.

click me!