Dharwad KIADB Scam: ಕೆಐಎಡಿಬಿಯಲ್ಲಿ ಮತ್ತೊಂದು ವಂಚನೆ ಪ್ರಕರಣ ಬೆಳಕಿಗೆ

By Suvarna News  |  First Published Dec 30, 2022, 6:37 PM IST

ಧಾರವಾಡ ಕೆಐಎಡಿಬಿ ಕಚೇರಿಯಲ್ಲಿ ಮತ್ತೊಂದು ವಂಚನೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ಸಾಮಾಜಿಕ ಹೋರಾಟಗಾರ ಬಸವರಾಜ ಕೊರವರ ಅವರು ಗಂಭೀರವಾಗಿ ಆರೋಪ ಮಾಡಿದ್ದಾರೆ.


ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್  

ಧಾರವಾಡ (ಡಿ.30): ಧಾರವಾಡ ಕೆಐಎಡಿಬಿ ಕಚೇರಿಯಲ್ಲಿ ಮತ್ತೊಂದು ವಂಚನೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ಸಾಮಾಜಿಕ ಹೋರಾಟಗಾರ ಬಸವರಾಜ ಕೊರವರ ಅವರು ಗಂಭೀರವಾಗಿ ಆರೋಪವನ್ನ ಮಾಡುತ್ತಿದ್ದಾರೆ. ಇನ್ನು ಈ ಕುರಿತು ಪ್ರಕರಣ ವನ್ನ. ನೋಡೋದಾದ್ರೆ ಧಾರವಾಡ ತಾಲೂಕಿನ ಬೇಲೂರು ಗ್ರಾಮದ ಒಟ್ಟು 6 ಸರ್ವೆ ನಂಬರ್ ಮೇಲೆ ಮೂರುವರೆ ಕೋಟಿ ಹಣವನ್ನ ಗಿಡಗಳ ಹೇಸರಿನ ಮೆಲೆ ಬಿಲ್ ತೆಗೆಯಲಾಗಿದೆ ಎಂದು ಬಸವರಾಜ ಕೊರವರ ಮಾಹಿತಿ ಹಕ್ಕಿನಡಿ ಪ್ರಕಣವನ್ನ ಬೆಳಕಿಗೆ ತಂದಿದ್ದಾರೆ ಮರಗಿಡಗಳ ಹೇಸರಿನಲ್ಲಿ ಇಗಿನ ಕೆಐಎಡಿಬಿ ಎಸ್ ಎಲ್ ಓ ಮಮತಾ ಹೊಸಗೌಡರ ಅವರ ಅವಧಿಯಲ್ಲಿ ಬಿಲ್ ಮಾಡಲಾಗಿದೆ ಎಂದು ಕೊರವರ ಹೇಳಿದ್ದಾರೆ.

Tap to resize

Latest Videos

 2015 ರಲ್ಲಿ ರೈತರ ಭೂಮಿಗೆ ಪರಿಹಾರ ನೀಡಿದ ಕೆಐಎಡಿಬಿ ಅಧಿಕಾರಿಗಳು ಮತ್ತೆ 2022 ರಲ್ಲಿ ಅದೆ ರೈತರ ಹೆಸರಿನ ಸರ್ವೆ ನಂಬರ ಮೆಲೆ ಮರಗಿಡಗಳು ಇವೆ ಎಂದು ಹಣ ಸಂದಾಯ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ ಬೇಲೂರು ಗ್ರಾಮದ ಸರ್ವೆ ನಂಬರ್ 317,318,319 ರಲ್ಲಿ ರೈತ ಬರಮಪ್ಪ ಹುಲ್ಲಂಬಿ ಇವರ ಹೇಸರಿನಲ್ಲಿ 67 ಲಕ್ಷ  ಹಣಜುಲೈ 29, 2022 ರಲ್ಲಿ ಸಂದಾಯವಾಗಿದೆ. ಇನ್ನು ಬೇಲೂರು ಗ್ರಾಮದ ಸರ್ವೆ ನಂಬರ್  327, 357ರಲ್ಲಿ 493 ಗಿಡಗಳಿಗೆ ವಿರುಪಾಕ್ಷಪ್ಪ ಹೊಸುರು ಇವರ ಹೇಸರಿನಲ್ಲಿ ಮೂರು ಕೋಟಿ ಗಣ ಬಿಡುಗಡೆ ಯಾಗಿದೆ ಎಂದು ಕೊರವರ ಮರಗಿಡಗಳು ಇಲ್ಲದೆ ಅಧಿಕಾರ ದುರ್ಬಳಕೆ ಮಾಡಿಕ್ಕೊಂಡಿದ್ದಾರೆ ಹಣ ಸಂದಾಯ ಮಾಡಿದ್ದಾರೆ ಎಂದು ಹೇಳಿದರು.

ಮಮತಾ ಹೊಸಗೌಡರ್ ಪ್ರತಿಕ್ರಿಯೆ ನಾನು ಈ ಆರೋಪವನ್ನ ತಳ್ಳಿ ಹಾಕುತ್ತೇನೆ. ಯಾವುದೇ ಕಾರಣಕ್ಕೂ ಇಲ್ಲಿ ಅಕ್ರಮವಾಗಿಲ್ಲ ತೋಟಗಾರಿಕೆ ಇಲಾಖೆಯಿಂದ ವ್ಯಾಲ್ಯೂವೇಷನ್ ರಿಪೋರ್ಟ ಬಂದಿದೆ ಅದರ ಮುಖಾಂತರ ನಾನು ಪೇಮೆಂಟ್ ಮಾಡಿದ್ದೇನೆ ಸರ್ವೆ ನಂಬರ್ 327,357, ರ ಪರಿಹಾರವು ಅರಣ್ಯ ಇಲಾಖೆಯಿಂದ ವ್ಯಾಲ್ಯೂವೇಷನ್ ರಿಪೋರ್ಟ ಬಂದಿದೆ ಅದರ ಮೆಲೆ‌ ಪೇಮೆಂಟ್ ಮಾಡಲಾಗಿದೆ ಯಾವುದೆ ಅಕ್ರಮ ನಡೆದಿಲ್ಲ.

Dharwad KIADB Scam: ಕೋಟಿಗಟ್ಟಲೆ ನುಂಗಿದ ಕೆಐಎಡಿಬಿ ಅಧಿಕಾರಿಗಳ ವಿರುದ್ಧ ಲೋಕಾಯುಕ್ತದಲ್ಲಿ ಕೇಸ್ ದಾಖಲು

ಜೆಎಂಸಿಯ ಅಡಿಯಲ್ಲಿ ನಾವು ಮರಗಿಡಗಳಿಗೆ ಪರಿಹಾರ ಕೊಡಲಾಗಿದೆ. ಮರಗಳ ರಿಪೋರ್ಟ ಅನ್ನ ತೋಟಗಾರಿಕೆ ಮತ್ತು ಅರಣ್ಯ ಇಲಾಖೆಯಿಂದ ತರಲಾಗಿದ್ದು,  ಅದಕ್ಕೆ‌ ನಾವು ಪರಿಹಾರವನ್ನ‌ ಬಿಡುಗಡೆ ಮಾಡಿದ್ದೇವೆ. ಅವರು ನಾವು ಜಂಟಿ ಸಮೀಕ್ಷೆ ಮಾಡಿ ಪರಿಹಾರ ಮಾಡಿದ್ದೇವೆ ಇದರಲ್ಲಿ ಯಾವುದೇ ಹುರುಳಿಲ್ಲ, ಕಾನೂನು‌ ಬಿಟ್ಟು ನಾವು ಯಾವುದೇ ಕೆಲಸ ಮಾಡಿಲ್ಲ ಮೂರುವರೆ ಕೋಟಿ ಹಗರಣ ನಡೆದೆ ಇಲ್ಲ‌ ಎಂದ ಎಸ್ ಎಲ್‌ ಓ ಮಮತಾ ಹೊಸಗೌಡರ ಸ್ಪಷ್ಟಿಕರವನ್ನ ನೀಡಿದ್ದಾರೆ.

ರೈತರ ಹೆಸರಲ್ಲಿ ₹20ಕೋಟಿ ಗುಳಂ: ಧಾರವಾಡ ಕೆಐಎಡಿಬಿ ಭ್ರಷ್ಟ ಅಧಿಕಾರಿಗಳ ವಿರುದ್ಧಎಫ್‌ಐಆರ್

ಇನ್ನು ಈ ಹಿಂದೆ ಇದ್ದ ಎಸ್ ಎಲ್ ಓ ವಿಡಿ ಸಜ್ಜನ್ ಮಾಡಿರುವ 21 ಕೋಟಿ ಹಗರಣದಲ್ಲಿ ನಾನು ಪಾರದರ್ಶಕವಾಗಿ ತನಿಖೆ ನಡೆಸಿ ಇವಾಗಲೆ 14 ಜನರ ಮೆಲೆ ಪ್ರಕರಣ ದಾಖಲಿಸಿದ್ದೇನೆ ಅಂತದರಲ್ಲಿ ನಾನು ಯಾಕೆ ಇಂತಹ ಕಟ್ಡ ಕೆಲಸಕ್ಕೆ ಮುಂದಾಗಲಿ ಎಂದು ಮಮತಾ ಹೊಸಗೌಡರ್ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಯಾವುದೇ ಕಾರಣಕ್ಕೂ ನಾನು ಅವ್ಯವಹಾರ ಮಾಡಿಲ್ಲ, ಇಲಾಖೆಯ ಸೂಚನೆಯಂತೆ ನಾನು ರೈತರ ಭೂಮಿಯಲ್ಲಿಯ ಮರಗಿಡಗಳಿಗೆ ಪರಿಹಾರವನ್ನ ಕೊಟ್ಟಿದ್ದೇನೆ. ನಾನೇ ಕೊಟ್ಟ ಮಾಹಿತಿಯನ್ನಿಟ್ಟುಕ್ಕೊಂಡು ನನ್ನ ಮೆಲೆ‌ ಆರೋಪವನ್ನ ಮಾಡುತ್ತಿದ್ದಾರೆ. ಆದರೆ ನಾನು ಅವ್ಯವಹಾರ ಮಾಡಿದ್ದರೆ ದಾಖಲಾತಿಗಳನ್ನು ನಾನು ಹೈಡ್ ಮಾಡಿಕೊಳ್ಳುತ್ತಿದ್ದೆ ನಾನ್ಯಾಕೆ ಮುಚ್ಚಿಡಲಿ ನಾನು ಪಾರದರ್ಶಕವಾಗಿ ಹಣ ಸಂದಾಯ ಮಾಡಿದ್ದೇನೆ ಎಂದು ಸ್ಪಷ್ಠಿಕರಣ ಕೊಟ್ಟಿದ್ದಾರೆ‌‌.

click me!