ಚನ್ನಪಟ್ಟಣ ಮಹಿಳೆಯರಿಗೆ ಶಭಾಷ್‌ ಎಂದ ಕೇಂದ್ರ ಸಚಿವ ಫಗ್ಗನ್ ಸಿಂಗ್: ಆಟಿಕೆ ನೋಡಿ ಫುಲ್‌ ಖುಷ್

By Sathish Kumar KH  |  First Published Dec 30, 2022, 4:51 PM IST

ಚನ್ನಪಟ್ಟಣದಲ್ಲಿ ಬೊಂಬೆ ಉದ್ಯಮ ಉತ್ತಮವಾಗಿ ನಡೆಯುತ್ತಿದೆ. ಮಹಿಳೆಯರು ದಿನಕ್ಕೆ ಅಂದಾಜು 3 ಸಾವಿರ ರೂ. ಹಣ ಸಂಪಾದಿಸುತ್ತಿದ್ದಾರೆ. ಬಹಳ ಉತ್ಸುಕರಾಗಿ ಈ ಕಾರ್ಯ ಮಾಡುತ್ತಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಹ ಅಟಿಕೆಗಳ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದಾರೆ ಎಂದು ಕೇಂದ್ರ ಉಕ್ಕು ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಫಗ್ಗನ್ ಸಿಂಗ್ ಕುಲಸ್ತೆ ತಿಳಿಸಿದ್ದಾರೆ.


ರಾಮನಗರ (ಡಿ.30):  ಚನ್ನಪಟ್ಟಣದಲ್ಲಿ ಬೊಂಬೆ ಉದ್ಯಮ ಉತ್ತಮವಾಗಿ ನಡೆಯುತ್ತಿದೆ. ಮಹಿಳೆಯರು ದಿನಕ್ಕೆ ಅಂದಾಜು 3 ಸಾವಿರ ರೂ. ಹಣ ಸಂಪಾದಿಸುತ್ತಿದ್ದಾರೆ. ಬಹಳ ಉತ್ಸುಕರಾಗಿ ಈ ಕಾರ್ಯ ಮಾಡುತ್ತಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಹ ಅಟಿಕೆಗಳ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದಾರೆ ಎಂದು ಕೇಂದ್ರ ಉಕ್ಕು ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಫಗ್ಗನ್ ಸಿಂಗ್ ಕುಲಸ್ತೆ ಹೇಳಿಕೆ ನೀಡಿದ್ದಾರೆ.

ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕು ಮುನಿಯಪ್ಪನದೊಡ್ಡಿ ಗ್ರಾಮಕ್ಕೆ ಕೇಂದ್ರ ಫಗ್ಗನ್ ಸಿಂಗ್ ಕುಲಸ್ತೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ 500 ರೂ. ಹಣ ನೀಡಿ ಚನ್ನಪಟ್ಟಣದ ಅಟಿಕೆಗಳ ಖರೀದಿ ಮಾಡಿದರು. ಅಟಿಕೆ ತಯಾರಿಕ ಘಟಕಕ್ಕೆ ಭೇಟಿ ನೀಡಿದ್ದ ವೇಳೆ ಸ್ಥಳೀಯ ಕರಕುಶಲಕರ್ಮಿಗಳ ಜೊತೆಗೆ ಚರ್ಚೆ ಮಾಡಿದರು. ಅರ್ಧ ಗಂಟೆಗೂ ಅಧಿಕ ಕಾಲ ಅಟಿಕೆ ತಯಾರು ಮಾಡುವ ವಿಧಾನದ ವಿಚಾರವಾಗಿ ಮಾತುಕತೆ  ನಡೆಸಿದರು. ಮಹಿಳಾ ಕರಕುಶಲಕರ್ಮಿಗಳಿಂದ ಮಾಹಿತಿ ಪಡೆದರು. 

Tap to resize

Latest Videos

Assembly election: ಕುಮಾರಸ್ವಾಮಿಗೆ 20 ಸೀಟ್‌ ಗೆದ್ದು ಸಿಎಂ ಆಗೋದಷ್ಟೇ ಗುರಿ: ಯೋಗೇಶ್ವರ್‌ ಟೀಕೆ

ಆಟಿಕೆಗಳಿಗೆ ಮಾರುಕಟ್ಟೆ ನಿರ್ಮಾಣ: ಈ ಕುರಿತು ಮಾತನಾಡಿದ ಕೇಂದ್ರ ಸಚಿವರು, ಕೇಂದ್ರ ಸರ್ಕಾರ ಸ್ಥಳೀಯ ಕರಕುಶಲ ಉದ್ಯಮಕ್ಕೆ ಭಾರಿ ಪ್ರೋತ್ಸಾಹ ನೀಡುತ್ತಿದೆ. ಇಲ್ಲಿನ ಮಹಿಳೆಯರು ಆಟಿಕೆ ನಿರ್ಮಾಣ ಮಾಡಿ ಮಾರಾಟ ಮಾಡುವ ಮೂಲಕ ನಿತ್ಯ 3 ಸಾವಿರ ರೂ. ಹಣ ಸಂಪಾದನೆ ಮಾಡುತ್ತಿದ್ದಾರೆ. ಇನ್ನು ಆಟಿಕೆ ನಿರ್ಮಾಣ ಮತ್ತು ಮಾರಾಟ ಕಾರ್ಯದಲ್ಲಿ ಇಲ್ಲಿನ ನಿವಾಸಿಗಳು ಹೆಚ್ಚು ಉತ್ಸುಕರಾಗಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಮಹಿಳೆಯರೇ ಹೆಚ್ಚಾಗಿ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದು ಮೆಚ್ಚುಗೆ ವ್ಯಕ್ತಪಡಿಸುವಂತಿದೆ. ಇನ್ನು ಕೇಂದ್ರ ಸರ್ಕಾರದಿಂದ ಅಟಿಕೆಗಳ ಮಾರ್ಕೆಟಿಂಗ್ ವಿಚಾರವಾಗಿ ಹೆಚ್ಚಿನ ಗಮನವಹಿಸಲಿದೆ ಎಂದು ಭರವಸೆ ನೀಡಿದರು.

ಚನ್ನಪಟ್ಟಣ ಆಟಿಕೆ ಮಕ್ಕಳ ಆರೋಗ್ಯಕ್ಕೂ ಅನುಕೂಲ: ಸ್ಥಳೀಯವಾಗಿ ಕಾರ್ಯಕ್ರಮ: ಇನ್ನು ಇನ್ನು ಚನ್ನಪಟ್ಟಣದ ಆಟಿಕೆಗಳನ್ನು ತಯಾರಿಸುವ ಮನೆಗಳಿಗೆ ತೆರಳಿದ ಫಗ್ಗನ್‌ ಸಿಂಗ್‌ ಅವರು ಅಲ್ಲಿನ ಮಹಿಳೆಯರು ಮತ್ತು ಕುಟುಂಬ ಸದಸ್ಯರೊಂದಿಗೆ ಆತ್ಮೀಯವಾಗಿ ಒಡನಾಟ ನಡೆಸಿದರು. ಮನೆಯ ಒಬ್ಬ ಸದಸ್ಯರಂತೆ ನಡೆದುಕೊಂಡು ಊಟ ಮತ್ತು ತಂಪು ಪಾನೀಯಗಳನ್ನು ಸೇವಿಸಿದರು. ಮಹಿಳೆಯರು ನೀಡುವ ಸಣ್ಣಪುಟ್ಟ ಆಟಿಕೆಗಳನ್ನು ಸ್ವೀಕರಿಸಿ ಖುಷಿ ಪಟ್ಟರು. ಜೊತೆಗೆ, ಪ್ಲಾಸ್ಟಿಕ್‌ನಲ್ಲಿ ಗೊಂಬೆ ತಯಾರಿಕೆ ಮಾಡುವುದನ್ನು ನೋಡಿದ್ದೆ. ಆದರೆ, ಅಂತಹ ಆಟಿಕೆಗಳು ಮಕ್ಕಳ ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿದಿದೆ. ಹೀಗಾಗಿ, ಕಟ್ಟಿಗೆಯಿಂದ ಮಾಡುತ್ತಿರುವ ಆಟಿಕೆಗಳು ಹೆಚ್ಚಿನ ದಿನ ಬಾಳಿಕೆ ಬರುವ ಜತೆಗೆ ಮಕ್ಕಳ ಆರೋಗ್ಯಕ್ಕೂ ಅನುಕೂಲ ಆಗಿದೆ ಎಂದರು.

Assembly election: ರಾಮನಗರದಲ್ಲಿಯೂ ಶ್ರೀರಾಮ ಮಂದಿರ ನಿರ್ಮಿಸಲು ಬಜೆಟ್‌ನಲ್ಲಿ ಘೋಷಣೆ: ಆಶ್ವತ್ಥನಾರಾಯಣ

ಮನರೇಗಾ ಅಧಿಕಾರಿಗಳ ಸಾಥ್: ಇನ್ನು ಕೇಂದ್ರ ಸಚಿವ ಫಗ್ಗಾನ್‌ ಸಿಂಗ್‌ ರಾಜ್ಯಕ್ಕೆ ಆಗಮಿಸುತ್ತಿದ್ದಂತೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಗ್ಯಾರಂಟಿ ಯೋಜನೆ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಚನ್ನಪಟ್ಟಣ ಸೇರಿ ವಿವಿಧ ಭಾಗಗಳಲ್ಲಿ ಪ್ರವಾಸ ಮಾಡಲು ಸಚಿವರಿಗೆ ಸಾಥ್‌ ನೀಡಿದರು.

click me!