ಹೊಸ ವರ್ಷಕ್ಕೆ ದರ ಏರಿಕೆ ಶಾಕ್‌ ನೀಡಿದ ಬಿಎಂಟಿಸಿ: ಪ್ರಯಾಣಿಕರಿಗೆ ಹೊರೆ

By Sathish Kumar KHFirst Published Dec 30, 2022, 4:18 PM IST
Highlights

ಹೊಸವರ್ಷದ ಆರಂಭದಲ್ಲಿಯೇ ಬಿಎಂಟಿಸಿ ತನ್ನ ಪ್ರಯಾಣಿಕರಿಗೆ ನಿರಾಸೆ ಉಂಟಾಗುವಂತೆ ಮಾಡಿದೆ. ವೋಲ್ವೋ ಬಸ್ ಪಾಸ್ ದರ ಹೆಚ್ಚಿಸಿ ಆದೇಶ ಹೊರಡಿಸಲಾಗಿದೆ. ಮಾಸಿಕ ಪಾಸ್, ದಿನದ ಪಾಸ್ ಹಾಗೂ ದಿನದ ಟಿಕೆಟ್ ದರ ಹೆಚ್ಚಿಸಿ ಆದೇಶ ಹೊರಡಿಸಿದೆ.

ಬೆಂಗಳೂರು (ಡಿ.30):  ಹೊಸವರ್ಷದ ಆರಂಭದಲ್ಲಿಯೇ ಬಿಎಂಟಿಸಿ ತನ್ನ ಪ್ರಯಾಣಿಕರಿಗೆ ನಿರಾಸೆ ಉಂಟಾಗುವಂತೆ ಮಾಡಿದೆ. ವೋಲ್ವೋ ಬಸ್ ಪಾಸ್ ದರ ಹೆಚ್ಚಿಸಿ ಆದೇಶ ಹೊರಡಿಸಲಾಗಿದೆ. ಮಾಸಿಕ ಪಾಸ್, ದಿನದ ಪಾಸ್ ಹಾಗೂ ದಿನದ ಟಿಕೆಟ್ ದರ ಹೆಚ್ಚಿಸಿ ಆದೇಶ ಹೊರಡಿಸಲಾಗಿದ್ದು, ಪ್ರಯಾಣಿಕರಿಗೆ ಮತ್ತಷ್ಟು ಆರ್ಥಿಕ ಹೊರೆ ಉಂಟಾಗಲಿದೆ.

ಈ ವರ್ಷದಲ್ಲಿ ದಿನಬಳಕೆ ಮತ್ತುಗಳು ಹಾಗೂ ಅಗತ್ಯ ವಸ್ತುಗಳ ಬೆಲೆಗಳಲ್ಲಿ ಭಾರಿ ಪ್ರಮಾಣದಲ್ಲಿ ಬೆಲೆ ಏರಿಕೆ ಉಂಟಾಗಿತ್ತು. ಕಳೆದೊಂದು ವರ್ಷದಿಂದ ಇಂಧನ ಬೆಲೆ ನಿರಂತರವಾಗಿ ಹೆಚ್ಚಳ ಆಗುತ್ತಿದ್ದರೂ ಬಸ್‌ ಪ್ರಯಾಣದ ದರ ಮಾತ್ರ ಹೆಚ್ಚಳ ಮಾಡಿರಲಿಲ್ಲ. ಆದರೆ, ಈಗ ಹೊಸ ವರ್ಷದ ದಿನದಿಂದಲೇ ಜಾರಿ ಆಗುವಂತೆ ಬಸ್‌ ಪ್ರಯಾಣದ ದರವನ್ನು ಹೆಚ್ಚಳ ಮಾಡಲಾಗಿದೆ. ಜೊತೆಗೆ, ಮಾಸಿಕ ಮತ್ತು ದಿನದ ಬಸ್‌ ಪಾಸ್‌ನ ದರವನ್ನೂ ಹೆಚ್ಚಳ ಮಾಡಿದೆ. 

ಹೊಸ ವರ್ಷಾಚರಣೆ ಹಿನ್ನೆಲೆ, ಜ.1ರ ಮುಂಜಾವು 2 ಗಂಟೆವರೆಗೆ ಬಿಎಂಟಿಸಿ ಬಸ್ ಸೇವೆ

ಭಾನುವಾರ ವಜ್ರ ಬಸ್‌ ಪಾಸ್ ಮಾನ್ಯತೆಯಿಲ್ಲ: ಮಾಸಿಕ ಪಾಸ್ ತೆಗೆದುಕೊಂಡವರಿಗೆ ಮತ್ತೊಂದು ಶಾಕ್ ನೀಡಿದೆ. ಸಾಮಾನ್ಯ ಪಾಸ್ ಹಾಗೂ ಹಿರಿಯ ನಾಗರಿಕರ ಪಾಸ್ ಪಡೆದವರು ಭಾನುವಾರ ವಾಯು ವಜ್ರ ಬಸ್‌ನಲ್ಲಿ ಇನ್ನುಮುಂದೆ ಉಚಿತವಾಗಿ ಸಂಚಾರ ಮಾಡುವಂತಿಲ್ಲ. ಈ ಮೂಲಕ ಸಾಮಾನ್ಯ ಪಾಸುದಾರರು ಹಾಗೂ ಹಿರಿಯ ನಾಗರಿಕರು ಪಾಸ್ ನಲ್ಲಿ ಪ್ರಯಾಣಿಕರ ಉಚಿತ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ.  ಇನ್ನು ರಾಜ್ಯದಲ್ಲಿ ಇಂಧನ ಬೆಲೆಯ ನಿರಂತರ ಏರಿಕೆ ಹಿನ್ನಲೆಯಲ್ಲಿ ಬಿಎಂಟಿಸಿ ಸಂಸ್ಥೆಯ ಆರ್ಥಿಕ ನಷ್ಟ ಸರಿದೂಗಿಸಲು ತೀರ್ಮಾನ ಮಾಡಲಾಗಿದೆ. ಆದ್ದರಿಂದ ಪ್ರಯಾಣದರ ಮತ್ತು ಪಾಸ್ ಗಳ ದರ ಹೆಚ್ಚಿಸಲಾಗಿದೆ. ಇನ್ನು ಸಾಮಾನ್ಯ ಬಸ್‌ಗಳು ಮತ್ತು ಎಸಿ ಸಹಿತ ವಜ್ರ ಬಸ್‌ಗಳ ದರಗಳಲ್ಲಿ ವ್ಯತ್ಯಾಸ ಇದೆ.

ವಜ್ರ ( ವೋಲ್ವೋ) ಬಸ್ ಪ್ರಯಾಣದ ದರಪಟ್ಟಿ:
ದರಪಟ್ಟಿಗಳ ವಿವರ           ಪ್ರಸ್ತುತ     ಪರಿಷ್ಕೃತ
ವಜ್ರ ಮಾಸಿಕ ಪಾಸ್ ದರ    1,500       1,800
ವಜ್ರ ದೈನಿಕ ಪಾಸ್ ದರ     100           120
ಸಾಮಾನ್ಯ ಪಾಸ್ ವಜ್ರ ಬಸ್ ಪ್ರಯಾಣ 20     25
ಹಿರಿಯ ನಾಗರಿಕರು ವಜ್ರ ಬಸ್‌ ಪ್ರಯಾಣ    20 25 


 

click me!