ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ 2019 ಡಿಸೆಂಬರ್ 19ರಂದು ನಡೆದ ಘಟನೆಯ ಬಗ್ಗೆ ಮ್ಯಾಜಿಸ್ಟಿರಿಯಲ್ ವಿಚಾರಣೆ ಉಡುಪಿ ಜಿಲ್ಲಾಧಿಕಾರಿಗಳಿಂದ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಅಂದಿನ ಘಟನೆ ಬಗ್ಗೆ ಯಾವುದೇ ಸಾರ್ವಜನಿಕರು ಹಾಗೂ ಪತ್ರಿಕೆ/ವಾರ್ತಾ ಮಾಧ್ಯಮದವರ ಬಳಿ ವಿಡಿಯೋ ತುಣುಕುಗಳು ಇದ್ದಲ್ಲಿ ಫೆ.19ರಂದು ಹಾಜರುಪಡಿಸಲು ಅವಕಾಶ ನೀಡಲಾಗಿದೆ.
ಮಂಗಳೂರು(ಫೆ.17): ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ 2019 ಡಿಸೆಂಬರ್ 19ರಂದು ನಡೆದ ಘಟನೆಯ ಬಗ್ಗೆ ಮ್ಯಾಜಿಸ್ಟಿರಿಯಲ್ ವಿಚಾರಣೆ ಉಡುಪಿ ಜಿಲ್ಲಾಧಿಕಾರಿಗಳಿಂದ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಅಂದಿನ ಘಟನೆ ಬಗ್ಗೆ ಯಾವುದೇ ಸಾರ್ವಜನಿಕರು ಹಾಗೂ ಪತ್ರಿಕೆ/ವಾರ್ತಾ ಮಾಧ್ಯಮದವರ ಬಳಿ ವಿಡಿಯೋ ತುಣುಕುಗಳು ಇದ್ದಲ್ಲಿ ಫೆ.19ರಂದು ಹಾಜರುಪಡಿಸಲು ಅವಕಾಶ ನೀಡಲಾಗಿದೆ.
ಈಗಾಗಲೇ ಫೆ.13ರಂದು ಮಂಗಳೂರಿನ ಮಿನಿ ವಿಧಾನಸೌಧದಲ್ಲಿ ಸಹಾಯಕ ಕಮಿಷನರ್ ಅವರ ಕೋರ್ಟ್‌ಹಾಲ್‌ನಲ್ಲಿ ಹಾಜರುಪಡಿಸುವಂತೆ ಅವಕಾಶ ನೀಡಲಾಗಿತ್ತು. ಆದರೆ ಫೆ.13ರಂದು ಕರ್ನಾಟಕ ಬಂದ್ ಇದ್ದ ಕಾರಣ ಮತ್ತೊಮ್ಮೆ ಸಾಕ್ಷ ಸಲ್ಲಿಕೆಗೆ ಅವಕಾಶ ನೀಡಲಾಗಿದೆ.
ಕೋತಿಗೆ ದೇಗುಲ ಕಟ್ಟಿದ್ರು ಸಾರಾ, ಮುದ್ದಾದ ಪ್ರತಿಮೆ ಪ್ರತಿಷ್ಠಾಪನೆ
ಸಿಸಿಟಿವಿ ಪೂಟೇಜ್ ಮತ್ತು ವೀಡಿಯೋ ಪೂಟೇಜ್‌ಗಳನ್ನು ವಿಚಾರಣೆಗೆ ಹಾಜರುಪಡಿಸಲು ಅಡಚಣೆ ಉಂಟಾಗಿದ್ದಲ್ಲಿ ಇವುಗಳನ್ನು ಫೆಬ್ರವರಿ 19 ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಮಂಗಳೂರಿನ ಸಹಾಯಕ ಆಯುಕ್ತರ ಕೋರ್ಟ್ ಹಾಲ್ನಲ್ಲಿ ನಡೆಯುವ ವಿಚಾರಣೆಯ ಸಂದರ್ಭದಲ್ಲಿ ಹಾಜರುಪಡಿಸುವಂತೆ ಉಡುಪಿ ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
3 ಪಲ್ಟಿ ಹೊಡೆದ ಬಸ್: 50 ಜನಕ್ಕೆ ಗಾಯ, ನಾಲ್ವರ ಸ್ಥಿತಿ ಗಂಭೀರ