ಗದಗ: ಕಪ್ಪತ್ತಗುಡ್ಡ ಅರಣ್ಯದಲ್ಲಿ ಮತ್ತೆ ಬೆಂಕಿ!

Kannadaprabha News   | Asianet News
Published : Feb 17, 2020, 09:39 AM ISTUpdated : Feb 17, 2020, 09:41 AM IST
ಗದಗ: ಕಪ್ಪತ್ತಗುಡ್ಡ ಅರಣ್ಯದಲ್ಲಿ ಮತ್ತೆ ಬೆಂಕಿ!

ಸಾರಾಂಶ

ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಬೆಂಕಿ| ಗದಗ ಜಿಲ್ಲೆಯಲ್ಲಿರುವ ಕಪ್ಪತಗುಡ್ಡ ಅರಣ್ಯ ಪ್ರದೇಶ| ಬೆಂಕಿಗೆ ಆಹುತಿಯಾದ ಸುಮಾರು 15ರಿಂದ 20 ಎಕರೆ ಅರಣ್ಯ ಪ್ರದೇಶ| 

ಡಂಬಳ(ಗದಗ ಜಿಲ್ಲೆ)(ಫೆ.17): ಹಾರೂಗೇರಿ ಮತ್ತು ಹಿರೇವಡ್ಡಟ್ಟಿ ವ್ಯಾಪ್ತಿಯ ಕಪ್ಪತಗುಡ್ಡದಲ್ಲಿನ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಭಾನು​ವಾರ ಸಂಜೆ ಬೆಂಕಿ ಬಿದ್ದಿದ್ದು, ಅರಣ್ಯ ಅಧಿಕಾರಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಂದಾಜು 15ರಿಂದ 20 ಎಕರೆ ಕಪ್ಪತ್ತಗುಡ್ಡ ಬೆಂಕಿಗೆ ಆಹುತಿಯಾಗಿದೆ. ಕೆಲ ಔಷಧೀಯ ಸಸ್ಯಗಳಿಗೆ ಹಾನಿಯಾಗಿದ್ದು ಗುಡ್ಡದ ಮೇಲಿನ ಹುಲ್ಲು ಸಂಪೂರ್ಣ ಸುಟ್ಟಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ವಲಯ ಅರಣ್ಯಾಧಿಕಾರಿ ಎಸ್‌.ಎಂ. ಶಿವರಾತ್ರೀಶ್ವರಸ್ವಾಮಿ ನೇತೃತ್ವದಲ್ಲಿ 25 ಸಿಬ್ಬಂದಿ ಸತತ ನಾಲ್ಕೈದು ಗಂಟೆ ಕಾಲ ಹರಸಾಹಸ ಮಾಡಿದ್ದರಿಂದ ರಾತ್ರಿ 9.30ಕ್ಕೆ ಬೆಂಕಿ ನಂದಿಸುವ ಕಾರ್ಯ ಯಶಸ್ವಿಯಾಗಿದೆ. ಸುಜ್‌ಲಾನ್‌ ಕಂಪನಿಯ ಗಾಳಿ ವಿದ್ಯುತ್‌ ಕಂಬಗಳಲ್ಲಿ ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ಈ ಅವಘಡ ಸಂಭವಿಸಿದೆ ಎನ್ನ​ಲಾ​ಗಿ​ದೆ.
 

PREV
click me!

Recommended Stories

ಆತಂಕದ ವಿಷಯ: ಬೆಂಗಳೂರಿನಲ್ಲಿ 11 ವರ್ಷದ ಮಕ್ಕಳಿಗೂ ಡ್ರಗ್ಸ್‌ ಚಟ!
ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!