ಕೆಪಿಟಿಸಿಎಲ್‌ ಅಕ್ರಮ ನೇಮಕಾತಿ ಪ್ರಕರಣ: ಮತ್ತೋರ್ವ ಆರೋಪಿ ಬಂಧನ

By Girish Goudar  |  First Published Jan 6, 2023, 9:30 PM IST

ಕೆಪಿಟಿಸಿಎಲ್‌ನ ವಿವಿಧ ಹುದ್ದೆಗಳ ನೇಮಕಾತಿಗೆ ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನಯುಳ್ಳ ಇಲೆಕ್ಟ್ರಾನಿಕ್ ಡಿವೈಸ್ ಮತ್ತು ಮೈಕ್ರೋಚಿಪ್ ಉಪಯೋಗಿಸಿ ಪರೀಕ್ಷೆ ಬರೆದಿದ್ದ ಮತ್ತೋರ್ವ ಆರೋಪಿ ಅರೆಸ್ಟ್. 


ಬೆಳಗಾವಿ(ಜ.06): ಕೆಪಿಟಿಸಿಎಲ್‌ನ ವಿವಿಧ ಹುದ್ದೆಗಳ ನೇಮಕಾತಿಗೆ ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನಯುಳ್ಳ ಇಲೆಕ್ಟ್ರಾನಿಕ್ ಡಿವೈಸ್ ಮತ್ತು ಮೈಕ್ರೋಚಿಪ್ ಉಪಯೋಗಿಸಿ ಪರೀಕ್ಷೆ ಬರೆದಿದ್ದ ಮತ್ತೋರ್ವ ಆರೋಪಿಯನ್ನು ಜಿಲ್ಲಾ ಪೊಲೀಸರು ಇಂದು(ಶುಕ್ರವಾರ) ಬಂಧಿಸಿದ್ದಾರೆ.  

ಈ ಪ್ರಕರಣದಲ್ಲಿ ಇದುವರೆಗೆ ಬಂಧಿತರ ಸಂಖ್ಯೆ 49ಕ್ಕೆ ಏರಿಕೆಯಾಗಿದೆ. ಈ ಪ್ರಕರಣ ಬಗೆದಷ್ಟು ಆಳವಾಗಿರುವುದರಿಂದ ಪೊಲೀಸರು ತಮ್ಮ ಸಮರವನ್ನು ಮುಂದುವರೆಸಿದ್ದು, ಇನ್ನೂ ಹಲವರು ಪೊಲೀಸರ ಬಲೆಗೆ ಬೀಳುವ ಸಾಧ್ಯತೆ ಇದೆ.
ರಾಮದುರ್ಗ ತಾಲೂಕಿನ ಬಾಗೋಜಿಕೊಪ್ಪ ಗ್ರಾಮದ ಮಂಜುನಾಥ ಯಲ್ಲಪ್ಪ ತಿಗಡಿ (22) ಬಂಧಿತ ಆರೋಪಿಯಾಗಿದ್ದಾನೆ. 

Tap to resize

Latest Videos

ಕೆಪಿಟಿಸಿಎಲ್‌ ಕೇಸಲ್ಲಿ ಬೇಲ್‌ ಪಡೆದು ಹೊರಬಂದವ ಪಿಎಸ್‌ಐ ಕೇಸಲ್ಲಿ ಸೆರೆ!

ಕೆಪಿಟಿಸಿಎಲ್‌ ಅಕ್ರಮ: ಮತ್ತೆ ಮೂವರ ಬಂಧನ

ಕೆಪಿಟಿಸಿಎಲ್‌ನ ವಿವಿಧ ಹುದ್ದೆಗಳ ನೇಮಕಾತಿಗೆ ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನಯುಳ್ಳ ಇಲೆಕ್ಟ್ರಾನಿಕ್‌ ಡಿವೈಸ್‌ ಮತ್ತು ಮೈಕ್ರೋಚಿಪ್‌ ಉಪಯೋಗಿಸಿ ಪರೀಕ್ಷೆ ಬರೆದಿದ್ದ ಮತ್ತೆ ಮೂವರನ್ನು ಜಿಲ್ಲಾ ಪೊಲೀಸರು ಬುಧವಾರ ಬಂಧಿಸಿದ್ದರು. 

ಗೋಕಾಕ ತಾಲೂಕಿನ ಮಲ್ಲಾಪುರ ಪಿ.ಜಿ.ಗ್ರಾಮದ ಅಣ್ಣಪ್ಪ ಮಾರವಾಡಿ (31), ಶಿವಾಪೂರ ಗ್ರಾಮದ ಜಾನ್‌ರಾಬರ್ಚ್‌ ಬಂಗೆನ್ನವರ (26) ಹಾಗೂ ಮೂಡಲಗಿ ತಾಲೂಕಿನ ರಾಜಾಪೂರದ ಚಿದಾನಂದ ಮಾಡಲಗಿ (27) ಬಂಧಿತರು.
2022 ಆಗಸ್ಟ್‌ 7ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆದ ಕೆಪಿಟಿಸಿಎಲ್‌ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಈ ಆರೋಪಿಗಳು ಪರೀಕ್ಷಾ ಅಕ್ರಮ ಎಸಗಿದ್ದರು. ಈ ಕುರಿತು ಗೋಕಾಕ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

click me!