ಹಿಂದುತ್ವದ ಬಗ್ಗೆ ಕಮಂಗಿಗಳಿಗೆ ಏನ್ರೀ ಗೊತ್ತು: ಸಿದ್ದರಾಮಯ್ಯ ವಿರುದ್ದ ಅನಂತ ಕುಮಾರ್ ಹೆಗಡೆ ವಾಗ್ದಾಳಿ!

By Suvarna News  |  First Published Jan 12, 2023, 9:23 PM IST

ಹಿಂದುತ್ವ ಹೇಳಿಕೆ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ಸಂಸದ ಅನಂತ ಕುಮಾರ್ ಹೆಗಡೆ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ಹಿಂದೂ ಅಂತ ಹೇಳಿಸಿಕೊಳ್ಳಲು ಕೆಲವು ಯೋಗ್ಯತೆಗಳಿವೆ. ಆಡಂಬರದ ಬದುಕು ಒಪ್ಪದಿರೋದು ಮತ್ತು ಸತ್ಯದ ಬದುಕು ಹಿಂದುತ್ವ. ಈ ಹಿಂದುತ್ವದ ಬಗ್ಗೆ ಇಂಥ ಕಮಂಗಿಗಳಿಗೆ ಏನ್ರೀ ಅರ್ಥ ಆಗಬೇಕು ಎಂದಿದ್ದಾರೆ.


ವರದಿ: ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಮಂಗಳೂರು (ಜ.12): ಹಿಂದುತ್ವ ಹೇಳಿಕೆ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ಸಂಸದ ಅನಂತ ಕುಮಾರ್ ಹೆಗಡೆ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ಹಿಂದೂ ಅಂತ ಹೇಳಿಸಿಕೊಳ್ಳಲು ಕೆಲವು ಯೋಗ್ಯತೆಗಳಿವೆ. ಆಡಂಬರದ ಬದುಕು ಒಪ್ಪದಿರೋದು ಮತ್ತು ಸತ್ಯದ ಬದುಕು ಹಿಂದುತ್ವ. ಈ ಹಿಂದುತ್ವದ ಬಗ್ಗೆ ಇಂಥ ಕಮಂಗಿಗಳಿಗೆ ಏನ್ರೀ ಅರ್ಥ ಆಗಬೇಕು ಅಂತ ಸಿದ್ದರಾಮಯ್ಯ ವಿರುದ್ದ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

Tap to resize

Latest Videos

ಪುತ್ತೂರಿನ ವಿವೇಕಾನಂದ ಶಿಕ್ಷಣ ಸಂಸ್ಥೆಯಲ್ಲಿ ನಡೆದ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಸಂಸದ, ಮಾಜಿ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಮಾತನಾಡಿದರು. ನಮ್ಮ ದೇಶದಲ್ಲಿ ಕೆಲವರು ಹಿಂದುತ್ವದ ಬಗ್ಗೆ ಚರ್ಚೆ ‌ಮಾಡ್ತಾರೆ. ನಾನು ಹಿಂದೂ, ಆದರೆ ನನಗೆ ಹಿಂದುತ್ವ ಬೇಕಿಲ್ಲ ಅಂತಾರೆ. ಅಬ್ಬಬ್ಬ. ಆ ಮನುಷ್ಯನಿಗೆ ಅವನ್ ರಕ್ತಾನೇ ಗೊತ್ತಿಲ್ಲ, ಅಂಥವರಿಗೆಲ್ಲ ಹಿಂದುತ್ವ. ನಿನಗೆ ಬೇಕೋ ಬೇಡ್ವೋ, ಯಾರಿಗ್ ಬೇಕು, ನಿನಗೆ ಬೇಡ ಅಂತ ನಾವು ಪರಿಗಣನೆ ಮಾಡಿ ಆಗಿದೆ. ಅವನು ಹಿಂದೂ ಅಲ್ಲ ಅಂತ ನಾವು ತೆಗೆದಿಟ್ಟಾಗಿದೆ.

ಸಂಸದ ಅನಂತ ಕುಮಾರ್‌ ಹೆಗಡೆಗೆ ಮತ್ತೆ ಜೀವ ಬೆದರಿಕೆ ಕರೆ 

ಹಿಂದೂ ಅಂತ ಹೇಳಿಸಿಕೊಳ್ಳಲು ಕೆಲವು ಯೋಗ್ಯತೆಗಳಿವೆ. ಆಡಂಬರದ ಬದುಕು ಒಪ್ಪದಿರೋದು ಮತ್ತು ಸತ್ಯದ ಬದುಕು ಹಿಂದುತ್ವ. ಈ ಹಿಂದುತ್ವದ ಬಗ್ಗೆ ಇಂಥ ಕಮಂಗಿಗಳಿಗೆ ಏನ್ರೀ ಅರ್ಥ ಆಗಬೇಕು. ಜಾತಿಯ ಗೂಡು ಬಿಟ್ಟು ಹೊರಗೆ ಬರಲು ಸಾಧ್ಯವಿಲ್ಲದವ್ರೆಲ್ಲ ಹಿಂದುತ್ವದ ಬಗ್ಗೆ ಚರ್ಚೆ ಮಾಡ್ತಾರೆ‌. ಪುಸ್ತಕ ಓದಲು ಯೋಗ್ಯತೆ ಇಲ್ಲದವ್ರೆಲ್ಲಾ ಹಿಂದುತ್ವದ ‌ಬಗ್ಗೆ ಚರ್ಚೆ ‌ಮಾಡ್ತಾರೆ. ದೇವಸ್ಥಾನಕ್ಕೆ ಹೋಗುವಾಗ ಹೇಗೆ ಹೋಗಬೇಕು ಅಂತ ಗೊತ್ತಿಲ್ಲದವರೆಲ್ಲಾ ಹಿಂದುತ್ವದ ಬಗ್ಗೆ ಚರ್ಚೆ ಮಾಡ್ತಾರೆ. ಕುತ್ತಿಗೆಗೆ ಹಾಕುವ ಶಾಲಿನಲ್ಲಿ ಹಿಂದುತ್ವ ಕಾಣ ಬಾರದು.

ಅನಂತ ಕುಮಾರ್ ಹೆಗಡೆ MP ಸದಸ್ಯತ್ವ ಅನರ್ಹಗೊಳಿಸುವಂತೆ ಸ್ಪೀಕರ್‌ಗೆ ದೂರು

ಹಣೆಗೆ ಇಟ್ಟಿರೋ ತಿಲಕದಲ್ಲಿ ಹಿಂದುತ್ವ ಕಾಣಬಾರದು, ನಮ್ಮ ‌ಬದುಕಿನಲ್ಲಿ ಕಾಣಬೇಕು. ನನ್ನ ನಾಲಗೆ, ನನ್ನ ಬದುಕು, ನನ್ನ ವಿಚಾರದಲ್ಲಿ ಕಾಣುವುದು ನಿಜವಾದ ಹಿಂದುತ್ವ. ಒಳಗಡೆ ಒಂದು, ಹೊರಗಡೆ ಒಂದು ಇರೋದನ್ನ ಹಿಂದುತ್ವ ಎನ್ನಲು ಸಾಧ್ಯವಿಲ್ಲ. ಸುಳ್ಳು ಹೇಳುವುದು, ಅಸತ್ಯದ ಮಾತು ಹಿಂದುತ್ವ ಅಲ್ಲ ಎಂದಿದ್ದಾರೆ.

click me!