ಬಿಸಿಯೂಟದ ಅಕ್ಕಿಯಲ್ಲಿ ಪ್ಲಾಸ್ಟಿಕ್ ಮಣಿಗಳ ಮಿಶ್ರಣ, ನೀರಿಗೆ ಹಾಕಿದರೆ ತೇಲುವ, ಬೆಂಕಿ ಹಚ್ಚಿದರೆ ಉರಿಯುವ ಮಣಿಗಳು!

By Suvarna News  |  First Published Jan 12, 2023, 8:45 PM IST

ಬಡ, ಮಧ್ಯಮ ವರ್ಗದ ವಿದ್ಯಾರ್ಥಿಗಳ ಕಲಿಕೆಯನ್ನು ಪ್ರೋತ್ಸಾಹಿಸಲು ಸರ್ಕಾರ ಮಧ್ಯಾಹ್ನದ ಬಿಸಿಯೂಟವನ್ನು ನೀಡುತ್ತಿದೆ. ಆದರೆ ಬಿಸಿಯೂಟಕ್ಕೆ ಸರಬರಾಜಾದ ಅಕ್ಕಿಯಲ್ಲಿ ಪ್ಲಾಸ್ಟಿಕ್ ಮಣಿಗಳು ಬೆರೆತಿರುವುದು ವಿದ್ಯಾರ್ಥಿಗಳ ಜೀವಕ್ಕೆ ಕುತ್ತು ತರುವಂತ ಸ್ಥಿತಿ ನಿರ್ಮಿಸಿತ್ತು.


ವರದಿ: ರವಿ ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ 

ಕೊಡಗು (ಜ.12): ಬಡ, ಮಧ್ಯಮ ವರ್ಗದ ವಿದ್ಯಾರ್ಥಿಗಳ ಕಲಿಕೆಯನ್ನು ಪ್ರೋತ್ಸಾಹಿಸಲು ಸರ್ಕಾರ ಮಧ್ಯಾಹ್ನದ ಬಿಸಿಯೂಟವನ್ನು ನೀಡುತ್ತಿದೆ. ಆದರೆ ಬಿಸಿಯೂಟಕ್ಕೆ ಸರಬರಾಜಾದ ಅಕ್ಕಿಯಲ್ಲಿ ಪ್ಲಾಸ್ಟಿಕ್ ಮಣಿಗಳು ಬೆರೆತಿರುವುದು ವಿದ್ಯಾರ್ಥಿಗಳ ಜೀವಕ್ಕೆ ಕುತ್ತು ತರುವಂತ ಸ್ಥಿತಿ ನಿರ್ಮಿಸಿತ್ತು. ಹಾಗಾದರೆ ಪೂರೈಕೆಯಾದ ಬಿಸಿಯೂಟದ ಅಕ್ಕಿಯಲ್ಲಿ ಬೆರೆತ್ತಿದ್ದ ಮಣಿ ಏನವು. ಆ ಎಡವಟ್ಟು ಏನು ಎನ್ನುವುದನ್ನು ತಿಳಿದುಕೊಳ್ಳಬೇಕಾದರೆ. ಅಕ್ಕಿ ತೊಳೆಯೋಣ ಎಂದು ನೀರಿಗೆ ಹಾಕಿದರೆ ತೇಲುವ ಪ್ಲಾಸ್ಟಿಕ್ ಮಣಿಗಳು. ಬೆಂಕಿ ಕಡ್ಡಿ ಗೀಚಿ ಬೆಂಕಿ ತೋರಿಸಿದರೆ ಸಾಕು ಹೊತ್ತಿ ಉರಿಯುವ ಪ್ಲಾಸ್ಟಿಕ್. ಹೌದು ಇದು ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳ ಬಿಸಿಯೂಟದ ಅಕ್ಕಿಯಲ್ಲಿ ದೊರೆತ ಪ್ಲಾಸ್ಟಿಕ್ ಮಣಿಗಳು. ಶಾಲೆಯ ಅಕ್ಷರ ದಾಸೋಹದ ಕೊಠಡಿಯಲ್ಲಿ ಅಡುಗೆ ಸಿಬ್ಬಂದಿ ಅನ್ನ ಮಾಡುವುದಕ್ಕಾಗಿ ಅಕ್ಕಿ ತೊಳೆದಿದ್ದಾರೆ. ಈ ವೇಳೆ ಅಕ್ಕಿ ನೀರಿನಲ್ಲಿ ಮುಳುಗಿದರೆ ಅರಳಿನಂತಹ ಪ್ಲಾಸ್ಟಿಕ್ ಮಣಿಗಳು ನೀರಿನಲ್ಲಿ ತೇಲಿವೆ. ಇದರಿಂದ ಎಚ್ಚೆತ್ತುಕೊಂಡ ಅಡುಗೆ ಸಿಬ್ಬಂದಿ ಕೂಡಲೇ ಮುಖ್ಯ ಶಿಕ್ಷಕರು ಮತ್ತು ಎಸ್‍ಡಿಎಂಸಿ ಅಧ್ಯಕ್ಷರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಎಸ್‍ಡಿಎಂಸಿ ಅಧ್ಯಕ್ಷ ಚಂದ್ರಶೇಖರ್ ಅವರು ಅಕ್ಕಿಯನ್ನು ಪರಿಶೀಲಿಸಿ ಅದರಲ್ಲಿ ಪ್ಲಾಸ್ಟಿಕ್ ಮಣಿಗಳು ಇರುವುದನ್ನು ಖಚಿತಪಡಿಸಿಕೊಂಡಿದ್ದಾರೆ.

Tap to resize

Latest Videos

undefined

ಕೂಡಲೇ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿ, ನಂತರ ಅಪರ ಜಿಲ್ಲಾಧಿಕಾರಿ ಡಾ. ನಂಜುಂಡೇಗೌಡ ಅವರಿಗೂ ಈ ಕುರಿತು ದೂರು ನೀಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಚಂದ್ರಶೇಖರ್ ಅವರು ಶಾಲೆಗೆ 800 ಕೆ.ಜಿ. ಅಕ್ಕಿಯನ್ನು ಮಡಿಕೇರಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ತರಿಸಲಾಗಿತ್ತು. ಅದರಲ್ಲಿ ಪ್ಲಾಸ್ಟಿಕ್ ಮಣಿಗಳು ಇದ್ದಿದ್ದರಿಂದ ಅದನ್ನು ವಾಪಸ್ ಕಳುಹಿಸಲಾಗಿತ್ತು. ಅದಕ್ಕೆ ಬದಲಾಗಿ ಮತ್ತೆ ಐದು ಚೀಲ ಅಕ್ಕಿಯನ್ನು ಕಳುಹಿಸಿದ್ದರು. ಅದನ್ನು ಪರಿಶೀಲಿಸಿದಾಗಲೂ ಅದರಲ್ಲೂ ಪ್ಲಾಸ್ಟಿಕ್ ಮಣಿಗಳು ಇರುವುದನ್ನು ಕಂಡು ಶಾಲೆಯ ಶಿಕ್ಷಕರು ಮತ್ತು ಎಸ್‍ಡಿಎಂಎಸ್ಸಿ ಮುಖಂಡರು ಅಚ್ಚರಿಗೊಂಡು ಆ ಅಕ್ಕಿಯನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ವಾಪಸ್ ಕಳುಹಿಸಿ ಬೇರೆ ಅಕ್ಕಿಯನ್ನು ತರಿಸಿದ್ದೇವೆ ಎಂದಿದ್ದೇವೆ.

ಅಕ್ಕಿ ಸರಬರಾಜು ಮಾಡಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಿಬ್ಬಂದಿಯನ್ನು ಕೇಳಿದರೆ ಅದು ಮಕ್ಕಳಿಗೆ ಮತ್ತು ಸಾರ್ವಜನಿಕರ ಆರೋಗ್ಯಕ್ಕೆ ಅಗತ್ಯವಾಗಿ ಬೇಕಾಗಿರುವ ಪ್ರೋಟೀನ್ ಗಳನ್ನು ಒಳಗೊಂಡಂತೆ ಅಕ್ಕಿಯನ್ನು ಸರ್ಕಾರದಿಂದಲೇ ಪೂರೈಸಲಾಗುತ್ತಿದೆ. ಇದನ್ನು ಒಂದು ಕ್ವಿಂಟಾಲ್ ಗೆ ಒಂದು ಕೆ.ಜಿ ಯಷ್ಟು ಈ ರೀತಿಯ ಪ್ರೋಟಿನ್ ಯುಕ್ತ ಅಕ್ತಿಯನ್ನು ಮಿಕ್ಸ್ ಮಾಡಿ ಪೂರೈಸಲಾಗುತ್ತದೆ. ಅವು ಕೂಡ ಅಕ್ಕಿಯ ರೀತಿಯಲ್ಲೇ ಇರುತ್ತವೆ. ಆದರೆ ಶಾಲೆಗೆ ನೀಡಿರುವ ಅಕ್ಕಿಯಲ್ಲಿ ರೌಂಡ್ ಆಗಿದ್ದು, ಮಣಿಯಂತೆ ಕಾಣಿಸುತ್ತಿವೆಯಷ್ಟೇ ಎಂದು ಸಬೂಬು ಹೇಳುತ್ತಿದ್ದಾರೆ.

 

ಇನ್ಮುಂದೆ ಶಾಲೆಗಳಲ್ಲಿ ಬಿಸಿ ಊಟದ ಜತೆ ಚಿಕನ್‌

ಈ ಅಕ್ಕಿಯನ್ನು ಹರಿಯಾಣದಿಂದ ಮೈಸೂರಿಗೆ ತರಲಾಗುತ್ತದೆ. ಅಲ್ಲಿಂದ ಕುಶಾಲನಗರದ ಗೋದಾಮಿಗೆ ಬರುವ ಅಕ್ಕಿಯನ್ನು ನಾವು ಇಲ್ಲಿಂದ ವಿತರಣೆ ಮಾಡುತ್ತೇವೆ ಅಷ್ಟೇ ಎನ್ನುತ್ತಿದ್ದಾರೆ. ವಾಸ್ತವಾಗಿ ಆ ಅಕ್ಕಿಯಲ್ಲಿರುವ ಪ್ಲಾಸ್ಟಿಕ್ ಮಣಿಗಳಿಗೆ ಬೆಂಕಿ ಹಚ್ಚಿದರೆ ಅವುಗಳು ಹೊತ್ತಿಕೊಂಡು ಉರಿಯುತ್ತಿವೆ.

ಬಿಸಿಯೂಟದಲ್ಲಿ ಹಾವು: 30 ಮಕ್ಕಳು ಅಸ್ವಸ್ಥ, ಆಸ್ಪತ್ರೆಗೆ ದಾಖಲು; ಪೋಷಕರಿಂದ ತೀವ್ರ ಆಕ್ರೋಶ

ಏನೇ ಆಗಲಿ ಸರ್ಕಾರಿ ಶಾಲೆಗಳಲ್ಲಿ ಓದುವ ಬಡವಿದ್ಯಾರ್ಥಿಗಳ ಶಿಕ್ಷಣವನ್ನು ಪ್ರೋತ್ಸಾಹಿಸುವುದಕ್ಕಾಗಿ ಸರ್ಕಾರ ನೀಡುತ್ತಿರುವ ಅಕ್ಷರ ದಾಸೋಹಕ್ಕೆ ಸರ್ಕಾರವೇ ಪೂರೈಕೆ ಮಾಡುತ್ತಿರುವ ಅಕ್ಕಿಯಲ್ಲಿ ಪ್ಲಾಸ್ಟಿಕ್ ಮಣಿಗಳು ಬೆರೆತ್ತಿರುವುದು ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರನ್ನು ಆತಂಕಕ್ಕೆ ದೂಡಿದೆ. ಒಂದು ವೇಳೆ ಈ ಅಕ್ಕಿಯನ್ನು ಸರಿಯಾಗಿ ಗಮನಿಸದೆ ಪ್ಲಾಸ್ಟಿಕ್ ಮಣಿಗಳ ಜೊತೆಗೆ ಅನ್ನವಾಗಿಸಿ ವಿದ್ಯಾರ್ಥಿಗಳಿಗೆ ಬಡಿಸಿದ್ದರೆ ದೊಡ್ಡ ಸಮಸ್ಯೆಯೇ ಎದುರಾಗುತ್ತಿತ್ತೋ ಏನೋ. ಇನ್ನಾದರೂ ಸಂಬಂಧಿಸಿದ ಎಲ್ಲಾ ಅಧಿಕಾರಿಗಳು ಇಂತಹ ಅನಾಹುತಗಳು ಮರುಕಳಿಸದಂತೆ ಎಚ್ಚರವಹಿಸಬೇಕಾಗಿದೆ.

click me!