ಬೆದರಿಕೆ ಬಗ್ಗೆ ತನಿಖೆಯಿಂದ ಗೊತ್ತಾಗುತ್ತದೆ : ಪರಂ

By Kannadaprabha News  |  First Published Oct 2, 2023, 6:11 AM IST

ತಮಗೆ ಬಂದ ಬೆದರಿಕ ಕರೆಯನ್ನು ಸಾಹಿತಿಗಳು ನನ್ನ ಬಳಿ ಹೇಳಕೊಂಡಿದ್ದರಿಂದ ಆ ಪ್ರಕರಣವನ್ನು ಸಿಸಿಬಿಗೆ ವಹಿಸಿದ್ದೆವು. ಅವರು ದಾವಣಗೆರೆ ಮೂಲದವರನ್ನು ಬಂಧಿಸಿದ್ದಾರೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.


 ತುಮಕೂರು :  ತಮಗೆ ಬಂದ ಬೆದರಿಕ ಕರೆಯನ್ನು ಸಾಹಿತಿಗಳು ನನ್ನ ಬಳಿ ಹೇಳಕೊಂಡಿದ್ದರಿಂದ ಆ ಪ್ರಕರಣವನ್ನು ಸಿಸಿಬಿಗೆ ವಹಿಸಿದ್ದೆವು. ಅವರು ದಾವಣಗೆರೆ ಮೂಲದವರನ್ನು ಬಂಧಿಸಿದ್ದಾರೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಅವರು ತುಮಕೂರಿನಲ್ಲಿ ಸುದ್ದಿಗಾರೊಂದಿಗೆ ಮಾತನಾಡಿ, ಸಾಹಿತಿಗಳ ಅಹವಾಲು ನಾನು ಕೇಳಿದ್ದೆ. ಸಿಎಂಗೂ ಭೇಟಿ ಮಾಡಿ‌ ಸಾಹಿತಿಗಳು ಬೆದರಿಕೆ ಕರೆ ಬಗ್ಗೆ ಹೇಳಿದ್ದರು. ಅಧಿಕಾರಿಗಳು ಆ ಪತ್ರ ನೋಡಿ ಅರೆಸ್ಟ್ ಮಾಡಿದ್ದಾರೆ ಎಂದರು.

Latest Videos

undefined

ಅವರ ಹಿಂದೆ ಯಾರಿದ್ದಾರೆ ಎನ್ನುವುದು ತನಿಖೆಯಿಂದ ಗೊತ್ತಾಗುತ್ತದೆ. ಯಾವ ಸರ್ಕಾರ ಇದ್ದರೂ ಅವರು ಬೆದರಿಕೆ ಹಾಕುತ್ತಾರೆ ಎಂದರು.

ಕಾಂಗ್ರೆಸ್ ಸರ್ಕಾರ ಇನ್ನು ಆರೇ ತಿಂಗಳಲ್ಲಿ ಪತನವಾಗುತ್ತದೆ ಎಂಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹೇಳಿಕೆಗೆ ತೀಕ್ಷ್ಮಣವಾಗಿ ಪ್ರತಿಕ್ರಿಯಿಸಿ ಅವರು ಕುಮಾರಸ್ವಾಮಿ ಯಾವಾಗ ಜ್ಯೋತಿಷ್ಯ ಹೇಳೋಕೆ ಶುರು ಮಾಡಿದ್ದಾರೋ ನನಗೆ ಗೊತ್ತಿಲ್ಲ ಎಂದರು.

ಲಿಂಗಾಯತರಿಗೆ ಕಾಂಗ್ರೆಸ್ ಸರ್ಕಾರದಲ್ಲಿ ಬೆಲೆ ಸಿಗುತ್ತಿಲ್ಲ ಎನ್ನುವ ಶಾಮನೂರು ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ ಅದನ್ನೆಲ್ಲ ಮುಖ್ಯಮಂತ್ರಿಗಳು ಗಮನಿಸುತ್ತಾರೆ ಎಂದ ಅವರು ಜಾತಿ ಆಧಾರದ ಮೇಲೆ ಅಧಿಕಾರಿಗಳನ್ನು ನೇಮಿಸುವುದನ್ನು ಸರ್ಕಾರ ಮಾಡುವುದಿಲ್ಲ ಎಂದರು.

ಜಾತಿ ಆಧಾರದ ಮೇಲೆ ನೇಮಕಾತಿ ಪ್ರಕ್ರಿಯೆ ನಡೆಯುತ್ತದೆ. ಆದರೆ, ಕೆಲಸ ಕೊಡುವಾಗ ಜಾತಿ ಆಧಾರದ ಮೇಲೆ ಪೋಸ್ಟಿಂಗ್ ಕೊಡುವುದಿಲ್ಲ ಎಂದರು.

ಸಚಿವ ರಾಜಣ್ಣ ಅವರ ಕಾಲಿಗೆ ಪೆಟ್ಟಾಗಿದೆ. ಸಣ್ಣ ಆಪರೇಷನ್ ಕೂಡ ಆಗಿತ್ತು. ಅದಕ್ಕೆ ನೋಡಿಕೊಂಡು ಬಂದೆ ಎಂದರು.

ಪರಂ ಸಿಎಂ ಆಗಲಿ

ತುಮಕೂರು (ಆ.21) :  ರಾಜ್ಯದಲ್ಲಿ ಎರಡೂವರೆ ವರ್ಷಗಳ ಬಳಿಕ ಮುಖ್ಯಮಂತ್ರಿ ಬದಲಾವಣೆ ಕುರಿತು ಕಾಂಗ್ರೆಸ್ಸಿಗರಲ್ಲೇ ಗುಸುಗುಸು ಕೇಳಿಬರುತ್ತಿರುವ ನಡುವೆಯೇ, ‘ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು ಈ ಅವಧಿಯಲ್ಲೇ ಮುಖ್ಯಮಂತ್ರಿ ಆಗಬೇಕು ಎಂಬುದು ನಮ್ಮ ಬಯಕೆ’ ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ‘ಪರಮೇಶ್ವರ್‌ ಅವರಿಗೆ ಮುಖ್ಯಮಂತ್ರಿ ಆಗುವ ಅರ್ಹತೆ ಇಲ್ವಾ? ಅವರು ಮುಖ್ಯಮಂತ್ರಿಯಾಗಬೇಕೆಂಬುದು ಆಂತರಿಕವಾಗಿಯಷ್ಟೇ ಅಲ್ಲ, ಬಹಿರಂಗವಾಗಿಯೂ ಸಾಕಷ್ಟುಬಾರಿ ಚರ್ಚೆ ಆಗಿದೆ. ಈ ಅವಧಿಯಲ್ಲೇ ಅವರು ಮುಖ್ಯಮಂತ್ರಿ ಆಗಬೇಕು ಎಂಬುದು ನಮ್ಮ ಬಯಕೆ. ಈ ಅವಧಿಯಲ್ಲಿ ಆಗದಿದ್ದರೆ ಇನ್ನೊಂದು ಅವಧಿಯಲ್ಲಾದರೂ ಆಗಲಿ ಎಂದು ಆಶಿಸುತ್ತೇನೆ ಎಂದು ಹೇಳಿದರು.

ಬೇರೆ ಅರ್ಥ ಕಲ್ಪಿಸುವುದು ಬೇಡ-ಪರಂ:

ಆದರೆ ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಡಾ.ಜಿ.ಪರಮೇಶ್ವರ್‌, ನಾನು ಮುಖ್ಯಮಂತ್ರಿಯಾಗಬೇಕೆಂದು ಕೆ.ಎನ್‌.ರಾಜಣ್ಣ ಸಂತೋಷದ ಸಂದರ್ಭದಲ್ಲಿ ಹಂಚಿಕೊಂಡ ಮಾತು. ಅವರ ಹೇಳಿಕೆಗೆ ಅವರ ಬಳಿಯೇ ಪ್ರತಿಕ್ರಿಯೆ ಕೇಳಬೇಕು. ಅದಕ್ಕೆ ಬೇರೆ ಅರ್ಥ ಕಲ್ಪಿಸಲು ಹೋಗುವುದು ಬೇಡ ಎಂದು ಹೇಳಿದರು.

 ಸಾರ್ವಜನಿಕರ ಅಹವಾಲು ಸ್ವೀಕರಿಸಿ, ಸ್ಥಳದಲ್ಲೇ ಪರಿಹಾರ ನೀಡಿ : ರಾಜಣ್ಣ

click me!