ಕಲಬುರಗಿಯ ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದರ ಫೋಟೊಗೆ ವಿದ್ಯಾರ್ಥಿಯೋರ್ವ ಅವಮಾನ ಮಾಡಿದ ಹಿನ್ನಲೆ ಎರಡು ವಿದ್ಯಾರ್ಥಿ ಸಂಘಟನೆಗಳು ಪರಸ್ಪರ ಪ್ರತಿಭಟನೆಗಿಳಿದ ಪರಿಣಾಮ ವಿವಿ ಆವರಣ ಗೊಂದಲದ ಗೂಡಾದ ಘಟನೆ ಇಂದು ನಡೆಯಿತು.
ಕಲಬುರಗಿ (ಸೆ.15): ಕಲಬುರಗಿಯ ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದರ ಫೋಟೊಗೆ ವಿದ್ಯಾರ್ಥಿಯೋರ್ವ ಅವಮಾನ ಮಾಡಿದ ಹಿನ್ನಲೆ ಎರಡು ವಿದ್ಯಾರ್ಥಿ ಸಂಘಟನೆಗಳು ಪರಸ್ಪರ ಪ್ರತಿಭಟನೆಗಿಳಿದ ಪರಿಣಾಮ ವಿವಿ ಆವರಣ ಗೊಂದಲದ ಗೂಡಾದ ಘಟನೆ ಇಂದು ನಡೆಯಿತು. ಕಲಬುರಗಿಯ ಕೇಂದ್ರೀಯ ವಿವಿ ಆವರಣ ಇಂದು ಗೊಂದಲದ ಗೂಡಾಯಿತು. ಒಂದೆಡೆ ಸ್ವಾಮಿ ವಿವೇಕಾನಂದರ ಫೋಟೊ ಹಿಡಿದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರೆ, ಮತ್ತೊಂದೆಡೆ ಘೋಷಣೆ ಕೂಗುತ್ತಾ ಪರ್ಯಾಯವಾಗಿ ಪ್ರತಿಭಟನೆಗಿಳಿದ ವಿದ್ಯಾರ್ಥಿಗಳ ಇನ್ನೊಂದು ಟೀಂ. ಮತ್ತೊಂದೆಡೆ ವಿಸಿ ಕಾರಿಗೆ ಅಡ್ಡಗಟ್ಟಿ ಆಕ್ರೋಶ ಹೊರಹಾಕಿದ ವಿದ್ಯಾರ್ಥಿ ಸಮೂಹ. ಈ ಎಲ್ಲಾ ಘಟನೆಗಳಿಗೆ ಕಲಬುರಗಿಯ ಕೇಂದ್ರೀಯ ವಿವಿ ಇಂದು ಸಾಕ್ಷಿಯಾಯಿತು.
ಗೊಂದಲಕ್ಕೆ ಕಾರಣ ಏನು?: ಜಾಯಿನ್ ಎಬಿವಿಪಿ ಅನ್ನೋ ಟ್ಯಾಗಲೈನ್ ಜೊತೆಗೆ ವಿವೇಕಾನಂದ ಭಾವಚಿತ್ರ ಇರುವ ಫೋಸ್ಟರ್ ಗಳನ್ನು ಎಬಿವಿಪಿ ಕಾರ್ಯಕರ್ತರು ಬಿವಿಯ ಹಲವೆಡೆ ಅಂಟಿಸಿದ್ದರು. ಇದೇ ವಿವಿಯಲ್ಲಿ MSC Geography 3 ನೇ ಸೆಮ್ ನಲ್ಲಿ ಓದುತ್ತಿರುವ ವಿದ್ಯಾರ್ಥಿ ಆದರ್ಶ ಎನ್ನುವಾತ ಹಾಸ್ಟೆಲ್ ನ ತನ್ನ ಕೋಣೆಯಲ್ಲಿನ ಕಸದ ಬುಟ್ಟಿ (dust bin) ಗೆ ಸ್ವಾಮಿ ವಿವೇಕಾನಂದರ ಭಾವ ಚಿತ್ರ ಇರುವ ಎಬಿವಿಪಿಯ ಈ ಸ್ಟಿಕ್ಕರ್ ಅಂಟಿಸಿದ್ದ. ಅಷ್ಟೇ ಅಲ್ಲದೇ ಆ ಡಸ್ಟ್ ಬಿನ್ ಫೋಟೋ ತೆಗದು ಇನ್ಸಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿ know your place ಅಂತ ಬರೆದುಕೊಂಡಿದ್ದ. ಇದು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಇದು ಎಬಿವಿಪಿ ಕಾರ್ಯಕರ್ತರು ಹಾಗೂ ಎಬಿವಿಪಿ ಬೆಂಬಲಿತ ವಿದ್ಯಾರ್ಥಿಗಳನ್ನು ಕೆರಳಿಸಿತ್ತು.
undefined
ಚೈತ್ರಾ ಕುಂದಾಪುರ ಡೀಲ್ ಪ್ರಕರಣಕ್ಕೆ ಟ್ವಿಸ್ಟ್: ಸಲೂನ್ ಮಾಲೀಕನಿಗೆ ಬೆದರಿಕೆ ಕರೆ
ಎರಡು ತಿಂಗಳು ಸಸ್ಪೆಂಡ್: ಕೇರಳ ಮೂಲದ ವಿದ್ಯಾರ್ಥಿ ಆದರ್ಶ ಡಸ್ಟ್ ಬಿನ್ ಗೆ ಸ್ವಾಮಿ ವಿವೇಕಾನಂದರ ಫೋಟೋ ಅಂಟಿಸಿ ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಟ್ಟ ವಿಚಾರ ವಿವಿ ಆಡಳಿತ ಮಂಡಳಿ ಗಮನಕ್ಕೂ ಬಂದಿದೆ. ಇದಾದ ನಂತರ ಸ್ವಾಮಿ ವಿವೇಕಾನಂದರಿಗೆ ಅಪಮಾನ ಮಾಡಿರೋ ಹಿನ್ನೆಲೆ ವಿದ್ಯಾರ್ಥಿ ಆದರ್ಶಗೆ ಎರಡು ತಿಂಗಳವರೆಗೆ ಸಸ್ಪೆಂಡ್ ಮಾಡಲಾಗಿದೆ.
ಸಸ್ಪೆಂಡ್ ವಿರುದ್ದ ಹೋರಾಟ: ವಿವಿ ಆಡಳಿತ ಮಂಡಳಿಯವರು ವಿದ್ಯಾರ್ಥಿ ಆದರ್ಶನನ್ನ ಸಸ್ಪೆಂಡ್ ಮಾಡಿರುವುದನ್ನು ಖಂಡಿಸಿ ಕೇರಳ ಮೂಲದ ವಿದ್ಯಾರ್ಥಿಗಳು ವಿವಿಯ ಕಾರ್ಯಸೌಧ ಎದುರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ವಿದ್ಯಾರ್ಥಿ ಆದರ್ಶ ವಿರುದ್ಧ ಸಸ್ಪೆಂಡ್ ಕ್ರಮ ಹಿಂತೆಗೆದುಕೊಳ್ಳಬೇಕು ಎಂದು ಕೇರಳ ಮೂಲದ ವಿದ್ಯಾರ್ಥಿಗಳು ಆಗ್ರಹಿಸಿದರು.
ಇನ್ನೊಂದಡೆ ಎಬಿವಿಪಿ ಪ್ರತಿಭಟನೆ: ಒಂದೆಡೆ ವಿದ್ಯಾರ್ಥಿ ಆದರ್ಶ ಪರವಾಗಿ ಕೇರಳ ಮೂಲದ ವಿದ್ಯಾರ್ಥಿಗಳು ಪ್ರತಿಭಟನೆಗಳಿದರೆ, ಇನ್ನೊಂದೆಡೆ ವಿದ್ಯಾರ್ಥಿ ಆದರ್ಶನನ್ನ ಪರಮನೆಂಟಾಗಿ ವಿವಿಯಿಂದ ಕಿತ್ತುಗೆಯಬೇಕು ಎಂದು ಆಗ್ರಹಿಸಿ ಎಬಿವಿಪಿ ಬೆಂಬಲಿತ ವಿದ್ಯಾರ್ಥಿಗಳು ಮತ್ತೊಂದೆಡೆ ಘಟನೆಗಳಿದರು. ಪರ ಮತ್ತು ವಿರೋಧದ ಪ್ರತಿಭಟನೆಯಿಂದಾಗಿ ವಿವಿ ಕಾರ್ಯಸೌಧದ ಮುಂದೆ ತೀವ್ರ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.
ವಿಸಿಗೆ ಮುತ್ತಿಗೆ, ರಣರಂಗವಾದ ವಿವಿ ಕ್ಯಾಂಪಸ್: ಒಂದೆಡೆ ವಿದ್ಯಾರ್ಥಿಗಳ ಎರಡು ಗುಂಪು ಪರ ಮತ್ತು ವಿರೋಧವಾಗಿ ಪ್ರತಿಭಟನೆ ನಡೆಸುತ್ತಿದ್ದರೆ, ಇದೇ ವೇಳೆ ಕಾರ್ಯಸೌಧದಿಂದ ವಿವಿ ಆವರಣದ ನಿವಾಸಕ್ಕೆ ತೆರಳಲು ವಿಸಿ ಬಟ್ಟು ಸತ್ಯನಾರಾಯಣ ಅವರು ಹೊರಗಡೆ ಬಂದರು. ವಿಸಿ ಹೊರ ಬರುತ್ತಿದ್ದಂತೆ ಆದರ್ಶ ಪರ ವಿದ್ಯಾರ್ಥಿಗಳು ವಿಸಿ ಅವರಿಗೆ ಮುತ್ತಿಗೆ ಹಾಕಿದರು. ಕಾರು ಅಡ್ಡಗಟ್ಟಿ, ಕಾರಿನ ಮುಂದೆ ಮಲಗಿ ಕಾರು ಮುಂದೆ ಬಿಡದೆ ಪ್ರತಿಭಟನೆ ನಡೆಸಿದ್ದರು. ಹೀಗಾಗಿ ವಿಸಿ ಬಟ್ಟು ಸತ್ಯನಾರಾಯಣ ಅವರು ಸುಮಾರು ಒಂದೂವರೇ ಕಿಲೋ ಮೀಟರ್ ವರೆಗೆ ನಡೆದುಕೊಂಡೇ ತಮ್ಮ ನಿವಾಸಕ್ಕೆ ತೆರಳಬೇಕಾಯಿತು. ಆದರೂ ಸಹ ವಿಸಿ ಅವರು ಮನೆಗೆ ಹೋಗುವವರೆಗೂ ಆದರ್ಶ ಪರ ವಿದ್ಯಾರ್ಥಿಗಳು ವಿಸಿಯನ್ನ ಹಿಂಬಾಲಿಸಿಕೊಂಡು ಘೋಷಣೆ ಕೂಗಲಾರಂಭಿಸಿದರು. ಪೊಲೀಸರು ಇದ್ದರೂ ಕೂಡ ಕ್ಯಾರೇ ಎನ್ನದೆ ಕೇರಳ ಮೂಲದ ವಿದ್ಯಾರ್ಥಿಗಳು ತೀವ್ರ ಹೋರಾಟ ಮಾಡಿ ಉದ್ದಟತನ ಮೆರೆದರು.
ಹಿಂದುತ್ವಕ್ಕಾಗಿ ರಾಜಕೀಯಕ್ಕೆ ಬಂದ ನನ್ನ ಹೋರಾಟಕ್ಕೆ ಸೋಲಿಲ್ಲ: ಸಿ.ಟಿ.ರವಿ
FIR ದಾಖಲು: ಇನ್ನು ಸ್ವಾಮಿ ವಿವೇಕಾನಂದರಿಗೆ ವಿದ್ಯಾರ್ಥಿ ಆದರ್ಶ ಅಪಮಾನ ಮಾಡಿರೋ ಹಿನ್ನೆಲೆ ಎರಡು ತಿಂಗಳ ಸಸ್ಪೆಂಡ್ ಮಾಡಿರೋ ವಿಸಿ ಬಟ್ಟು ಸತ್ಯನಾರಾಯಣ, ನರೋಣಾ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿ ಆದರ್ಶ ವಿರುದ್ದ FIR ದಾಖಲು ಮಾಡಿದ್ದಾರೆ. ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಅಪಮಾನ ಮಾಡಿರುವ ವಿದ್ಯಾರ್ಥಿಯ ಪರವಾಗಿಯೇ ಕೇರಳ ಮೂಲದ ವಿದ್ಯಾರ್ಥಿಗಳು ಹೋರಾಟ ನಡೆಸಿದ್ದು ತೀವ್ರ ಟೀಕೆಗೆ ಗುರಿಯಾಯಿತು.