Ramanagara: ರೇಷ್ಮೆಗೆ ಜಾಗ​ತಿಕ ಮಾರು​ಕಟ್ಟೆ ಸೃಷ್ಟಿ​ಸುವ ಪ್ರಯತ್ನ: ಕೇಂದ್ರ ಸಚಿವೆ ದರ್ಶನ ಜರ್ದೋಶ್‌

By Govindaraj SFirst Published Sep 24, 2022, 12:32 AM IST
Highlights

ದೇಶ​ದಲ್ಲಿ ಬೇಡಿ​ಕೆಗೆ ಅನು​ಗು​ಣ​ವಾಗಿ ರೇಷ್ಮೆ ಉತ್ಪಾ​ದನೆಯಾಗದ ಕಾರಣ ಆತ್ಮ​ನಿ​ರ್ಭರ್‌ ಭಾರತ್‌ ಅಭಿ​ಯಾ​ನದಲ್ಲಿ ರೇಷ್ಮೆ ಉತ್ಪಾ​ದನೆ ಹೆಚ್ಚಿಸಿ ನೇಕಾ​ರಿಕೆ ಮಾರು​ಕಟ್ಟೆವಲಯ ಬಲಿಷ್ಠಗೊಳಿ​ಸುವು​ದರ ಜತೆಗೆ ರೇಷ್ಮೆ ರಫ್ತು ವಲಯವನ್ನು ಮತ್ತಷ್ಟುಸ್ಪರ್ಧಾ​ತ್ಮ​ಕ​ಗೊ​ಳಿ​ಸಿ ಜಾಗ​ತಿಕ ಮಾರು​ಕಟ್ಟೆ ಸೃಷ್ಟಿ​ಸುವ ಕಾರ್ಯ ನಡೆ​ಯು​ತ್ತಿದೆ ಎಂದು ಕೇಂದ್ರ ರೈಲ್ವೆ ಮತ್ತು ಜವಳಿ ಖಾತೆ ರಾಜ್ಯ ಸಚಿವೆ ದರ್ಶನ ಜರ್ದೋಶ್‌ ಹೇಳಿ​ದರು.

ರಾಮ​ನ​ಗರ (ಸೆ.24): ದೇಶ​ದಲ್ಲಿ ಬೇಡಿ​ಕೆಗೆ ಅನು​ಗು​ಣ​ವಾಗಿ ರೇಷ್ಮೆ ಉತ್ಪಾ​ದನೆಯಾಗದ ಕಾರಣ ಆತ್ಮ​ನಿ​ರ್ಭರ್‌ ಭಾರತ್‌ ಅಭಿ​ಯಾ​ನದಲ್ಲಿ ರೇಷ್ಮೆ ಉತ್ಪಾ​ದನೆ ಹೆಚ್ಚಿಸಿ ನೇಕಾ​ರಿಕೆ ಮಾರು​ಕಟ್ಟೆವಲಯ ಬಲಿಷ್ಠಗೊಳಿ​ಸುವು​ದರ ಜತೆಗೆ ರೇಷ್ಮೆ ರಫ್ತು ವಲಯವನ್ನು ಮತ್ತಷ್ಟುಸ್ಪರ್ಧಾ​ತ್ಮ​ಕ​ಗೊ​ಳಿ​ಸಿ ಜಾಗ​ತಿಕ ಮಾರು​ಕಟ್ಟೆ ಸೃಷ್ಟಿ​ಸುವ ಕಾರ್ಯ ನಡೆ​ಯು​ತ್ತಿದೆ ಎಂದು ಕೇಂದ್ರ ರೈಲ್ವೆ ಮತ್ತು ಜವಳಿ ಖಾತೆ ರಾಜ್ಯ ಸಚಿವೆ ದರ್ಶನ ಜರ್ದೋಶ್‌ ಹೇಳಿ​ದರು. ನಗ​ರದ ರೇಷ್ಮೆಗೂಡು ಮಾರು​ಕ​ಟ್ಟೆಗೆ ಭೇಟಿ ನೀಡಿ ರೇಷ್ಮೆ ಗೂಡು ಪೂರೈಕೆ, ಬೆಳೆ​ಗಾ​ರ​ರಿಗೆ ಹಣ ಪಾವ​ತಿ ವಿಧಾನ ಹಾಗೂ ಗೂಡಿನ ಗುಣ​ಮಟ್ಟಪರಿ​ಶೀ​ಲನೆ ವೀಕ್ಷಿ​ಸಿದ ಬಳಿಕ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ದೇಶೀಯ ರೇಷ್ಮೆ ನೇಕಾರಿಕೆ ಮಾರುಕಟ್ಟೆವಲಯವನ್ನು ಮತ್ತಷ್ಟುಬಲಿಷ್ಠಗೊಳಿಸಿ, ರೇಷ್ಮೆ ರಫ್ತು ವಲಯ ಹೆಚ್ಚು ಸ್ಪರ್ಧಾತ್ಮಕಗೊಳ್ಳು​ವಂತೆ ಮಾಡ​ಲಾ​ಗು​ತ್ತಿದೆ ಎಂದ​ರು.

ಇಡೀ ಪ್ರಪಂಚ​ದಲ್ಲಿ ರೇಷ್ಮೆಗೆ ತುಂಬಾ ಬೇಡಿಕೆ ಇದೆ. ದೇಶ​ದ​ಲ್ಲಿಯೇ ಕರ್ನಾ​ಟಕ ರಾಜ್ಯ ರೇಷ್ಮೆ ಉತ್ಪಾ​ದ​ನೆ​ಯಲ್ಲಿ ಮೊದಲ ಸ್ಥಾನ​ದ​ಲ್ಲಿದೆ. ಆದರೆ, ಒಟ್ಟಾರೆ ಕೃಷಿ​ ಉತ್ಪಾ​ದ​ನೆ​ಯೊಂದಿಗೆ ತುಲನೆ ಮಾಡಿದರೆ ಶೇ.1ರಷ್ಟು ಮಾತ್ರ ಇದೆ. ಪ್ರಪಂಚ​ದ​ಲ್ಲಿಯೇ ಭಾರತ ರೇಷ್ಮೆ ಉತ್ಪಾ​ದ​ನೆ​ಯಲ್ಲಿ ಮುಂಚೂ​ಣಿ​ಯಲ್ಲಿ ಇರ​ಬೇ​ಕೆಂಬುದು ಬಯಕೆ. ಆದ್ದ​ರಿಂದ ಆತ್ಮ​ನಿ​ರ್ಭರ್‌ ಭಾರತ್‌ ಅಭಿ​ಯಾ​ನ​ದಡಿ ಜಮ್ಮು​ಕಾ​ಶ್ಮೀರ, ಉತ್ತ​ರಾಖಂಡದಂತಹ ರಾಜ್ಯ​ಗ​ಳಲ್ಲಿಯೂ ರೇಷ್ಮೆ ಬೆಳೆಗೆ ಉತ್ತೇ​ಜನ ನೀಡುವ ಕೆಲ​ಸ​ ನಿರಂತ​ರ​ವಾಗಿ ನಡೆ​ಯು​ತ್ತಿದೆ ಎಂದು ಹೇಳಿ​ದರು. ಕರ್ನಾ​ಟ​ಕ​ ರೇಷ್ಮೆ​ಯಲ್ಲಿ 9 ಬೆಳೆ ತೆಗೆ​ಯು​ತ್ತಿದೆ. ಉತ್ಪಾ​ದನೆ ಚೆನ್ನಾಗಿದೆ. 

ಕುಟುಂಬ ರಾಜ​ಕಾ​ರಣ, ಗುಂಪು​ಗಾ​ರಿಕೆಯಿಂದ ಬೇಸತ್ತು ಜೆಡಿ​ಎಸ್‌ ತೊರೆ​ದೆ: ಸಿಂಗ​ರಾಜ​ಪುರ ರಾಜಣ್ಣ

ಆದರೆ, ಜಮ್ಮು​ಕಾ​ಶ್ಮೀ​ರ​ದಲ್ಲಿ ಚಳಿಯ ಕಾರಣ ಕೇವಲ 1 ಬೆಳೆ ಮಾತ್ರ ತೆಗೆ​ಯ​ಲಾ​ಗು​ತ್ತಿದೆ. ಅಲ್ಲಿಯೂ ಒಂದ​ಕ್ಕಿಂತ ಹೆಚ್ಚಿನ ಬೆಳೆ ತೆಗೆಯಲು ಬೇಕಾದ ವಿಧಾನ ಅನು​ಸ​ರಿ​ಸುವ ಪ್ರಯ​ತ್ನ​ಗ​ಳಿಗೆ ಸಂಶೋ​ಧ​ನೆ​ಗಳು ನಡೆ​ಯು​ತ್ತಿ​ವೆ. ಮನರೇಗಾ ಬಳ​ಸಿ​ಕೊಂಡು ರೇಷ್ಮೆ ಬೆಳೆ​ಯಲ್ಲಿ ಪ್ರಗತಿ ಸಾಧಿ​ಸುವ ಪ್ರಯ​ತ್ನ​ಗಳು ನಡೆ​ಯು​ತ್ತಿವೆ. ಅಸ್ಸಾಂನಲ್ಲಿ ಆದಿ​ವಾ​ಸಿ​ ರೈತ​ರಿಂದ ರೇಷ್ಮೆ ಉತ್ಪಾ​ದನೆ ಮಾಡಿಸಿ ಸರ್ಕಾ​ರವೇ ನೇರ​ವಾಗಿ ಖರೀದಿ ಮಾಡುತ್ತಿದೆ. ಜಪಾನ್‌ನಂತಹ ದೇಶ​ಗ​ಳಲ್ಲಿ ಸಿಲ್ಕ್‌ ಮೆಟಿ​ರಿ​ಯಲ್‌ಗೆ ಹೆಚ್ಚಿನ ಬೇಡಿಕೆ ಇದೆ. ಹೀಗಾಗಿ ಸೀರೆ ಮಾತ್ರ​ವ​ಲ್ಲದೆ ಫ್ಯಾಬ್ರಿಕ್‌ ಮೇಲೂ ಹೆಚ್ಚಿನ ಗಮನ ಹರಿ​ಸ​ಲಾ​ಗು​ತ್ತಿದೆ ಎಂದು ತಿಳಿಸಿ​ದ​ರು.

ರೇಷ್ಮೆ ಪ್ರಗತಿಗೆ ಕ್ರಮ: ಕೇಂದ್ರ ಮತ್ತು ರಾಜ್ಯ ಸರ್ಕಾ​ರದ ರೇಷ್ಮೆ ಮಂಡ​ಳಿ​ಗಳು ಸೇರಿ ರೇಷ್ಮೆ ಪ್ರಗ​ತಿಗೆ ಪೂರ​ಕ​ವಾದ ಕಾರ್ಯ​ಕ್ರಮಗಳನ್ನು ರೂಪಿ​ಸು​ತ್ತಿ​ದ್ದು, ಪ್ರಧಾನಿರವರು ಆಲೋ​ಚನೆಯಂತೆಯೇ 5 ಎಫ್‌ (ಫಾಮ್‌ರ್‍ ಟೂ ಫೈಬರ್‌ ಟೂ, ಫ್ಯಾಕ್ಟರಿ ಟೂ ಫ್ರೆಶನ್‌ ಟೂ ಫಾರಿನ್‌ )​ಗಳ ಅಡಿ​ಯಲ್ಲಿ ವ್ಯವಸ್ಥೆ ಉತ್ತ​ಮ​ವಾಗಿ ನಡೆ​ಯು​ತ್ತಿದೆ. ರೇಷ್ಮೆ ಬೆಳೆಗಾರರ ಹಿತವನ್ನು ಕಾಯುವ ಸಲುವಾಗಿ ಜವಳಿ ಸಚಿವಾಲಯ ಕೇಂದ್ರೀಯ ರೇಷ್ಮೆ ಮಂಡಳಿ(ಸಿಎಸ್‌ ಬಿ) ಮೂಲಕ ಹಲವು ಕ್ರಮಗಳನ್ನು ಕೈಗೊಂಡಿದೆ. ಇದ​ರಲ್ಲಿ ರೇಷ್ಮೆ ಬೆಳೆ​ಗಾ​ರ​ರನ್ನು ಪ್ರೋತ್ಸಾ​ಹಿ​ಸಲು ‘ಸಿಲ್ಕ್‌ ಸಮಗ್ರ’ ಯೋಜನೆ ಉಪಯು​ಕ್ತ​ವಾ​ಗಿದೆ.

ಈ ಯೋಜ​ನೆ​ ಸಾಮಾನ್ಯ ವರ್ಗ​ದಡಿ ಕೇಂದ್ರದ ಪಾಲು ಶೇ.50ರಷ್ಟು, ರಾಜ್ಯದ ಪಾಲು ಶೇ.25ರಷ್ಟುಮತ್ತು ಫಲಾ​ನು​ಭವಿ ಪಾಲು ಶೇ.25ರ ಅನು​ಪಾ​ದಂತೆ ಹಾಗೂ ವಿಶೇಷ ಘಟ​ಕ/​ಗಿ​ರಿ​ಜನ ಉಪ​ಯೋ​ಜ​ನೆ​ಯಡಿ ಕೇಂದ್ರದ ಪಾಲು ಶೇ.65ರಷ್ಟು, ರಾಜ್ಯದ ಪಾಲು ಶೇ.25 ರಷ್ಟುಮತ್ತು ಫಲಾ​ನು​ಭವಿ ಪಾಲು ಶೇ.10ರ ಅನು​ಪಾ​ತದ​ಂತೆ ಕಾರ್ಯ​ಕ್ರ​ಮ​ಗ​ಳನ್ನು ಅನು​ಷ್ಠಾ​ನ​ಗೊ​ಳಿ​ಸ​ಲಾ​ಗು​ತ್ತಿದೆ. ಈ ಯೋಜನೆ ಅಡಿ​ಯಲ್ಲಿ ರೈತರಿಗೆ ಕಿಸಾನ್‌ ನರ್ಸರಿ, ಪ್ಲಾಂಟೇಷನ್‌ ಮತ್ತು ಹಿಪ್ಪುನೇರಳೆಯ ವಿವಿಧ ತಳಿಗಳು, ನೀರಾವರಿ, ಸಂಪೋಷಣಾ ಸೌಕರ್ಯಗಳಿರುವ ಚೌಕಿ ಸಾಕಾಣಿಕೆ ಕೇಂದ್ರಗಳು, ಉಗ್ರಾಣಗಳ ನಿರ್ಮಾಣ, ರೇಷ್ಮೆ ಸಾಕಾಣಿಕೆ ಸಲಕರಣೆಗಳು ಮತ್ತು ಅವುಗಳಿಗೆ ರೋಗಗಳು ಹರಡದಂತೆ ಏಜೆಂಚ್‌ಗಳ ಮೂಲಕ ಮನೆ ಬಾಗಿಲಿಗೆ ಸೇವೆ ಒದಗಿಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿ​ಸಿ​ದ​ರು.

ಉದ್ಯೋಗ ಸೃಷ್ಟಿ: ಅಲ್ಲದೆ ಇದರಿಂದ ಬುಡಕಟ್ಟು ಸಮುದಾಯದವರಿಗೆ ಉದ್ಯೋಗ ಸೃಷ್ಟಿಯಾಗಿರುವುದಲ್ಲದೆ, ಅವರಿಗೆ ಸುಸ್ಥಿರ ಜೀವನೋಪಾಯ ದೊರೆತಿದೆ. ಮತ್ತೊಂದು ಸಕಾರಾತ್ಮಕ ಪರಿಣಾಮದಿಂದ ಪ್ರತಿಫಲನಗೊಂಡಿರುವ ಮಹತ್ವದ ಅಂಶವೆಂದರೆ ಕಾಯಿಲೆ ರಹಿತ ಲೈಯಿಂಗ್ಸ್‌ (ಡಿಎಫ್‌ಎಲ್‌ಎಸ್‌) ಬಳಕೆ, ಕೊಕೋನ್‌ ಉತ್ಪಾದನೆ, ಕಚ್ಚಾ ರೇಷ್ಮೆ ಉತ್ಪಾದನೆಯಿಂದ ರೇಷ್ಮೆಯಲ್ಲಿ ಆದಾಯ ವೃದ್ಧಿಯಾಗಿರುವುದಲ್ಲದೆ, ಒಟ್ಟಾರೆ ಕುಟುಂಬದ ವಾರ್ಷಿಕ ಆದಾಯದ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ಸಚಿವೆ ದರ್ಶನ ಜರ್ದೋಶ್‌ ಹೇಳಿ​ದ​ರು.

ಸಮಸ್ಯೆ ಬಗೆಹರಿಸದಿದ್ದರೆ ಪುರಸಭೆಗೆ ಬೀಗ: ಮಾಜಿ ಶಾಸಕ ಬಾಲಕೃಷ್ಣ ಎಚ್ಚರಿಕೆ

ಈ ಸಂದರ್ಭದಲ್ಲಿ ವಿಧಾನ ಪರಿ​ಷತ್‌ ಸದಸ್ಯ ಸಿ.ಪಿ.​ಯೋ​ಗೇ​ಶ್ವರ್‌, ರಾಜ್ಯ ರೇಷ್ಮೆ ಉದ್ಯಮಗಳ ನಿಗಮ ಅಧ್ಯಕ್ಷ ಗೌತಮ್‌ಗೌಡ, ವ್ಯವ​ಸ್ಥಾ​ಪಕ ನಿರ್ದೇ​ಶಕಿ ವಶಿ​ರೆಡ್ಡಿ ವಿಜಯ ಜ್ಯೋತ್ಸಾ$್ನ, ತಹ​ಸೀ​ಲ್ದಾರ್‌ ವಿಜಯ್‌ಕುಮಾರ್‌, ರಾಮ​ನ​ಗರ ನಗ​ರಾ​ಭಿ​ವೃದ್ಧಿ ಪ್ರಾಧಿ​ಕಾರ ಅಧ್ಯಕ್ಷ ಶಿವ​ಮಾದು ಇತರರಿದ್ದ​ರು.

click me!