ಕೆಂಪೇಗೌಡರ ಕಂಚಿನ ಪ್ರತಿಮೆಗಾಗಿ ಮುಡುಕುತೊರೆಯಲ್ಲಿ ಮೃತ್ತಿಕೆ ಸಂಗ್ರಹ

By Suvarna News  |  First Published Nov 1, 2022, 6:11 PM IST

ಸಿಲಿಕಾನ್ ಸಿಟಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಕೆಂಪೇಗೌಡರ ಕಂಚಿನ ಪ್ರತಿಮೆಗಾಗಿ ರಾಜ್ಯವ್ಯಾಪಿ ಮಣ್ಣು ಸಂಗ್ರಹ ಕಾರ್ಯ ಜೋರಾಗಿ ಸಾಗಿದ್ದು, ಇಂದು ಮೈಸೂರಿನ ಮುಡುಕುತೊರೆಯಲ್ಲಿ ನಡೆಯಿತು.


ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಕೆಂಪೇಗೌಡರ ಕಂಚಿನ ಪ್ರತಿಮೆಗಾಗಿ ರಾಜ್ಯವ್ಯಾಪಿ ಮಣ್ಣು ಸಂಗ್ರಹ ಕಾರ್ಯ ಜೋರಾಗಿ ಸಾಗಿದ್ದು, ಇಂದು ಮೈಸೂರಿನ ಮುಡುಕುತೊರೆಯಲ್ಲಿ ನಡೆಯಿತು. ಸಚಿವ ಅಶ್ವಥ್ ನಾರಾಯಣ್ ನೇತೃತ್ವದಲ್ಲಿ ಮುಡುಕುತೊರೆಯ ಶ್ರೀ ಪುರುಷಾ ಸಮಾಧಿಯಲ್ಲಿ ಮೃತ್ತಿಕೆ ಸಂಗ್ರಹ ಮಾಡಲಾಯಿತು. ಈ ವೇಳೆ  ಸಂಸದ ಪ್ರತಾಪ್ ಸಿಂಹ, ಸಚಿವರನ್ನ ಹಾಡಿ ಹೊಗಳಿದರು.

ಕೆಂಪೇಗೌಡ ಪ್ರತಿಮೆಗೆ (Kempegowda statue) ಮೃತಿಕೆ ಸಂಗ್ರಹ ವೇಳೆ ಮಾತನಾಡಿದ ಸಚಿವ ಅಶ್ವಥ್ ನಾರಾಯಣ್  (Ashwath Narayana) ಶ್ರೀಪುರುಷ ಗಂಗ ವಂಶದ ರಾಜನಾಗಿದ್ದ. ಶ್ರೀಪುರುಷ ವೀರಸಮಾಧಿಯಲ್ಲಿ ನಾವು ಆಶಿರ್ವಾದ ಪಡೆದಿದ್ದು, ಶ್ರೀಪುರುಷನ ಆಶಿರ್ವಾದ ಪಡೆದು ನಾಡನ್ನು ಉತ್ತಮವಾಗಿ ಕಟ್ಟುತ್ತೇವೆ ಎಂದರು. ಇದೇ ವೇಳೆ ಪ್ರತಿಮೆಗಾಗಿ ರಾಜ್ಯದ ಪುಣ್ಯಕ್ಷೇತ್ರದಲ್ಲಿ ಮೃತ್ತಿಕೆ ಸಂಗ್ರಹ ಮಾಡುತ್ತಿದ್ದು, ರಾಜ್ಯೋತ್ಸವದಿನದಂದು ಇಲ್ಲಿ ಮೃತಿಕೆ ಸಂಗ್ರಹಿಸಿರೋದು ವಿಶೇಷ ಎಂದರು.

Tap to resize

Latest Videos

ಶ್ರೀಪುರುಷನ ಸಮಾಧಿ ಸ್ಥಳದಲ್ಲಿ ಮಂಗಳವಾರ ಪವಿತ್ರ ಮೃತ್ತಿಕಾ ಅಭಿಯಾನ: ಸಚಿವ ಅಶ್ವತ್ಥ್‌

ಇದೇ ವೇಳೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ (Pratap simha) , ಸಚಿವ ಅಶ್ವಥ್ ನಾರಾಯಣ್‌ರನ್ನ ಹಾಡಿ ಹೊಗಳಿದರು. ಜಗತ್ತಿನ ಎಲ್ಲಾ ವಿಮಾನ ನಿಲ್ದಾಣಗಳಿಗೆ ಕೇವಲ ಹೆಸರಿಡುತ್ತಾರೆ. ಆದರೆ ಬೆಂಗಳೂರಿನ ವಿಮಾನ ನಿಲ್ದಾಣದ ಪಕ್ಕದಲ್ಲಿ ಕೆಂಪೇಗೌಡರ ಬೃಹತ್ ಪ್ರತಿಮೆ‌ ನಿರ್ಮಾಣವಾಗಿದೆ. ಇದರ ಕಲ್ಪನೆ ಕೊಟ್ಟಿದ್ದು ಸಚಿವರಾದ ಡಾ.ಅಶ್ವಥ್ ನಾರಾಯಣ್ ಅವರು ಪ್ರತಿಮೆ ನಿರ್ಮಾಣದ ಜವಾಬ್ದಾರಿಯನ್ನ ಸಚಿವ ಅಶ್ವಥ್ ನಾರಾಯಣ್ ಗೌಡ ಹೊತ್ತಿದ್ದಾರೆ‌. ಪ್ರತಿಮೆ ನಿರ್ಮಾಣದ ಹಿಂದೆ ಅಶ್ವಥ್ ನಾರಾಯಣ್ ಹಾಗೂ ಯಡಿಯೂರಪ್ಪರ (Yadiyurappa) ಹೆಸರು ಶಾಶ್ವತವಾಗಿ ಇರಲಿದೆ‌ ಎಂದರು.

Mandya: ಕೆಂಪೇಗೌಡ್ರ ಹೆಸರು ಅಜರಾಮರ: ಸಚಿವ ನಾರಾಯಣಗೌಡ

ಕಾರ್ಯಕ್ರಮದಲ್ಲಿ ಇತಿಹಾಸ ತಜ್ಞ (Historian) ತಲಕಾಡು ಚಿಕ್ಕರಂಗೆಗೌಡ (Talakaadu chikkarangegowda) ಸೇರಿ ಬಿಜೆಪಿಯ ನೂರಾರು ಕಾರ್ಯಕರ್ತರು ಹಾಗೂ ಸ್ಥಳೀಯರು ಭಾಗವಹಿಸಿದ್ದರು.
 

click me!