Karwar Accident: ಚಾಲಕನ ನಿಯಂತ್ರಣ ತಪ್ಪಿ ಕಂಟೇನರ್‌ಗೆ ಆ್ಯಂಬ್ಯುಲೆನ್ಸ್ ಡಿಕ್ಕಿ!

By Suvarna NewsFirst Published Jan 22, 2022, 2:25 PM IST
Highlights

*ಚಾಲಕನ ನಿಯಂತ್ರಣ ತಪ್ಪಿ ಕಂಟೇನರ್‌ಗೆ ಢಿಕ್ಕಿ ಹೊಡೆದ ಆ್ಯಂಬ್ಯುಲೆನ್ಸ್
*ಭಟ್ಕಳದ ರಾಷ್ಟ್ರೀಯ ಹೆದ್ದಾರಿ 66ರ ಜಾಲಿ ಕ್ರಾಸ್ ಬಳಿ ಘಟನೆ
*ಹೃದಯಾಘಾತಕ್ಕೊಳಗಾಗಿದ್ದ ವ್ಯಕ್ತಿಯನ್ನು ಕರೆದೊಯ್ಯುತ್ತಿದ್ದ ಆ್ಯಂಬ್ಯುಲೆನ್ಸ್

ಕಾರವಾರ(ಜ. 22): ಚಾಲಕನ ನಿಯಂತ್ರಣ ತಪ್ಪಿ ಕಂಟೇನರ್‌ಗೆ ಆ್ಯಂಬ್ಯುಲೆನ್ಸ್ ಡಿಕ್ಕಿ ಹೊಡೆದ ಘಟನೆ ಉತ್ತರಕನ್ನಡ (Uttar Kannada) ಜಿಲ್ಲೆಯ ಭಟ್ಕಳದ ರಾಷ್ಟ್ರೀಯ ಹೆದ್ದಾರಿ 66ರ ಜಾಲಿ ಕ್ರಾಸ್ ಬಳಿ ನಡೆದಿದೆ. ಹೃದಯಾಘಾತಕ್ಕೊಳಗಾಗಿದ್ದ ವ್ಯಕ್ತಿಯನ್ನು ಹೊನ್ನಾವರದ ವ್ಯಕ್ತಿಯನ್ನು ಆ್ಯಂಬ್ಯುಲೆನ್ಸ್ (Ambulance)  ಮೂಲಕ ಮಣಿಪಾಲಕ್ಕೆ ಕರೆದೊಯ್ಯಲಾಗುತ್ತಿತ್ತು. ಕಂಟೇನರ್ ಎದುರಿನ ಕಾರು (Car) ಏಕಾಏಕಿ ಬ್ರೇಕ್ ಹಾಕಿದ್ದರಿಂದ ಚಾಲಕ ಲಾರಿ ನಿಲ್ಲಿಸಿದ್ದಾನೆ. ಇದರಿಂದ ವೇಗವಾಗಿ ಹೊರಟಿದ್ದ ಆ್ಯಂಬ್ಯುಲೆನ್ಸ್ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದೆ. 

 ಆ್ಯಂಬ್ಯುಲೆನ್ಸ್ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದ್ದು  ಅದೃಷ್ಟವಶಾತ್ ಅಂಬ್ಯುಲೆನ್ಸ್‌ನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಅಪಘಾತದಿಂದ ಹೆದ್ದಾರಿಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸ್ಥಳಕ್ಕೆ ಪೋಲೀಸ್ ಭೇಟಿ ನೀಡಿದ್ದು ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಭಟ್ಕಳ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿDavanagere Road Accident: ಜಗಳೂರು ಬಳಿ ಭೀಕರ ಅಪಘಾತ: 7 ಮಂದಿ ಸಾವು

ಹುಟ್ಟುಹಬ್ಬದ ದಿನದಂದೇ ಅಪಘಾತ: ಹುಟ್ಟುಹಬ್ಬದ(Birthday) ದಿನವೇ ಬೈಕ್‌ಗೆ ಗೂಡ್ಸ್‌ ವಾಹನ ಡಿಕ್ಕಿಯಾಗಿ(Collision) ಯುವತಿಯೊಬ್ಬಳು ಸ್ಥಳದಲ್ಲೇ ಮೃತಪಟ್ಟಿರುವ(Death) ಮನಕಲಕುವ ಘಟನೆಯೊಂದು ಶುಕ್ರವಾರ ಹೆಬ್ಬಾಳ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ವಿದ್ಯಾರಣ್ಯಪುರದ ತಿಂಡ್ಲು ನಿವಾಸಿ ಮಹಶ್ರೀ(19) ಮೃತ ದುರ್ದೈವಿ. ನಗರದ ರಿಂಗ್‌ ರಸ್ತೆಯಲ್ಲಿ ಬಿಇಎಲ್‌ ಕಡೆಯಿಂದ ನಾಗವಾರದ ಕಡೆಗೆ ಸ್ನೇಹಿತ ನರಸಿಂಗ ಪೆರುಮಾಳ್‌ ಎಂಬಾತನ ಜತೆಗೆ ಬೈಕ್‌ನಲ್ಲಿ ಹೋಗುತ್ತಿದ್ದಳು. ಮಾರ್ಗದ ಭದ್ರಪ್ಪ ಲೇಔಟ್‌ ಮೇಲ್ಸೇತುವೆ ಮೇಲೆ ಬೆಳಗ್ಗೆ 10.30ರ ಸುಮಾರಿಗೆ ಹಿಂದಿನಿಂದ ಬಂದ ಗೂಡ್ಸ್‌ ವಾಹನವೊಂದು ಬೈಕ್‌ಗೆ ಡಿಕ್ಕಿಯಾಗಿದೆ. ಈ ವೇಳೆ ಬೈಕ್‌ ಚಲಾಯಿಸುತ್ತಿದ್ದ ನರಸಿಂಗ ಪೆರುಮಾಳ್‌ ಹಾಗೂ ಹಿಂಬದಿ ಕುಳಿತ್ತಿದ್ದ ಮಹಶ್ರೀ ಬೈಕ್‌ ಸಹಿತ ನೆಲಕ್ಕೆ ಬಿದ್ದಿದ್ದಾರೆ. 

ಇದನ್ನೂ ಓದಿ: Bengaluru Road Accidents: ಬೆಂಗ್ಳೂರಲ್ಲಿ ಅಪಘಾತ ಇಳಿಕೆ: ಸಾವು ಏರಿಕೆ

ಗೂಡ್ಸ್‌ ವಾಹನದ ಹಿಂಬದಿ ಚಕ್ರ ಯುವತಿಯ ತಲೆ ಮೇಲೆ ಹರಿದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಬೈಕ್‌ ಸವಾರ ನರಸಿಂಗ ಪೆರಮಾಳ್‌ಗೆ ತರಚಿದ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಿಯಾಗಿದ್ದಾನೆ ಎಂದು ಪೊಲೀಸರು(Police) ತಿಳಿಸಿದ್ದಾರೆ.

ತಿಂಡ್ಲು ನಿವಾಸಿಯಾದ ಮಹಶ್ರೀ ನಗರದ ಖಾಸಗಿ ಕಾಲೇಜೊಂದರಲ್ಲಿ ಎರಡನೇ ವರ್ಷದ ಬಿಬಿಎ ವ್ಯಾಸಂಗ ಮಾಡುತ್ತಿದ್ದಳು. ಟೆಕ್ಸ್‌ಟೈಲ್‌ ಅಂಗಡಿಯಲ್ಲಿ ಪಾರ್ಟ್‌ ಟೈಂ ಕೆಲಸ ಮಾಡುತ್ತಿದ್ದಳು. ಶುಕ್ರವಾರ ಮಹಶ್ರೀ ಹುಟ್ಟುಹಬ್ಬವಿತ್ತು. ಹೀಗಾಗಿ ಸ್ನೇಹಿತ ನರಸಿಂಗ ಪೆರುಮಾಳ್‌ ಜತೆಗೆ ಬೈಕ್‌ನಲ್ಲಿ ಸ್ನೇಹಿತರನ್ನು ಭೇಟಿಯಾಗಲು ಮಹಶ್ರೀ ನಾಗವಾರದ ಕಡೆಗೆ ಹೋಗುವಾಗ ಈ ದುರ್ಘಟನೆ ಜರುಗಿದೆ ಎಂದು ಪೊಲೀಸರು ಹೇಳಿದ್ದಾರೆ.ಮೃತದೇಹವನ್ನು(Deadbody) ಮರಣೋತ್ತರ(Postmortem) ಪರೀಕ್ಷೆ ನಡೆಸಿ ವರಾಸುದಾರರಿಗೆ ಒಪ್ಪಿಸಲಾಗಿದೆ. ಘಟನೆ ಬಳಿಕ ಗೂಡ್ಸ್‌ ವಾಹನ ಚಾಲಕ ವಾಹನ ಬಿಟ್ಟು ಪರಿಯಾಗಿದ್ದಾನೆ. ಆತನ ಬಗ್ಗೆ ಮಾಹಿತಿ ಸಂಗ್ರಹಿಸಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಹೆಬ್ಬಾಳ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ(Case) ದಾಖಲಾಗಿದೆ.

ಇದನ್ನೂ ಓದಿ: Safety Car 120ರ ವೇಗದಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದು 4 ಪಲ್ಟಿಯಾದ ಟಾಟಾ ಪಂಚ್, ಐವರು ಪ್ರಯಾಣಿಕರು ಸೇಫ್!

ನಿಂತಿದ್ದ ಕಾರಿಗೆ ಕ್ಯಾಂಟರ್ ಡಿಕ್ಕಿ: ಶಮರಿಮಲೆಗೆ ಹೋಗಿ ವಾಪಸ್ ಬರುತ್ತಿದ್ದ ಇಬ್ಬರು ಸಾವು: : ಕಾರಿಗೆ ಹಿಂಬದಿಯಿಂದ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಅಯ್ಯಪ್ಪಸ್ವಾಮಿ ಭಕ್ತರು ಸ್ಥಳದಲ್ಲಿಯೆ ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರ(ಛhikkaballapur) ತಾಲೂಕಿನ ಪೆರೇಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ. ಮೃತರನ್ನು ನೆರೆಯ ಆಂಧ್ರಪ್ರದೇಶ ಮೂಲದ ಧರಣೀಶ್(22), ನಿರಂಜನ್ ಸಿಂಗ್(54) ಎಂದು ಗುರುತಿಸಲಾಗಿದೆ. ಅನಂತಪುರ ಜಿಲ್ಲೆ ಗುಂತಕಲ್‌ನ ನರಸಿಂಗರಾಜು, ಮಾಮಿಡಿ ನಾಗೇಶ್ಗೌಡ, ಸಿ.ನಾರಾಯಣಪ್ಪ, ಧರಣೀಶ್, ಗಣೇಶ್, ನಿರಂಜನ್ ಸಿಂಗ್ ಅವರು  ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಶಬರಿಮಲೆ ಅಯ್ಯಪ್ಪಸ್ವಾಮಿ ದರ್ಶನ ಪಡೆದು, ಕನ್ಯಾಕುಮಾರಿ ಮತ್ತಿತರ ಸ್ಥಳಕ್ಕೆ ಭೇಟಿ ನೀಡಿ ಪೆರೇಸಂದ್ರದ ಮೂಲಕ ಸ್ವಗ್ರಾಮಕ್ಕೆ ಪ್ರಯಾಣ ಬೆಳೆಸಿದ್ದರು. 

ಶನಿವಾರ ಬೆಳಗ್ಗೆ 5.15ರ ವೇಳೆಗೆ ಬೆಂಗಳೂರು-ಹೈದರಾಬಾದ್ ರಾಷ್ಟ್ರೀಯ  ಹೆದ್ದಾರಿ 44ರಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕು ರೆಡ್ಡಿಗೊಲ್ಲಾರಹಳ್ಳಿ ಮತ್ತು ದೊಡ್ಡಪೈಯಲಗುರ್ಕಿ ಕ್ರಾಸ್ ಮಧ್ಯೆ ಕಾರಿನ ಹಿಂಭಾಗದ ಚಕ್ರ ಪಂಕ್ಚರ್ ಆಗಿತ್ತು. ರಸ್ತೆಯ ಎಡಕ್ಕೆ ನಿಲ್ಲಿಸಿ ಪಾರ್ಕಿಂಗ್ ಲೈಟನ್ನು ಹಾಕಿ 4 ಜನರು ಕೆಳಕ್ಕೆ ಇಳಿದಿದ್ದರು. ನಿರಂಜನ್ ಸಿಂಗ್ ಮಾತ್ರ ಕಾರಿನಲ್ಲಿ ಮಲಗಿದ್ದರು. ಡಿಕ್ಕಿಯಿಂದ ಸ್ಟೆಪ್ನಿ ತೆಗೆಯುತ್ತಿದ್ದಾಗ ಹಿಂಬದಿಯಿಂದ ಬಂದ ಐಚರ್ ಕ್ಯಾಂಟರ್ ಡಿಕ್ಕಿ ಹೊಡೆದಿದೆ.

click me!