Belagavi: ಎಂಇಎಸ್‌ ಪುಂಡರಿಗೆ ಬೇಲ್‌ ಸಿಕ್ರೂ ಬಿಡುಗಡೆ ಭಾಗ್ಯ ಇಲ್ಲ..!

By Kannadaprabha News  |  First Published Jan 22, 2022, 12:48 PM IST

*  ಎಂಇಎಸ್‌ ಪುಂಡರಿಗೆ ಜಾಮೀನು ನೀಡಿದ ನ್ಯಾಯಾಲಯ
*  ದೇಶದ್ರೋಹ ಪ್ರಕರಣದಲ್ಲಿ ಜೈಲು ಸೇರಿದ್ದ ಎಂಇಎಸ್‌ ಪುಂಡರು
*  ಶಿವಸೇನೆ ದಿಂಡಿಯಾತ್ರೆ ರದ್ದು
 


ಬೆಳಗಾವಿ(ಜ.22):  ಬೆಳಗಾವಿ(Belagavi) ನಗರದಲ್ಲಿ ನಡೆದ ಅಧಿವೇಶನ ಸಂದರ್ಭದಲ್ಲಿ ಎಂಇಎಸ್‌(MES) ನಡೆಸಿದ ಪುಂಡಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು(Jail) ಸೇರಿರುವ ಎಂಇಎಸ್‌ ಪುಂಡರಿಗೆ ನ್ಯಾಯಾಲಯ(Court) ಜಾಮೀನು(Bail) ನೀಡಿದೆಯಾದರೂ ಅವರಿಗೆ ಇನ್ನೂ ಬಿಡುಗಡೆಯ ಭಾಗ್ಯ ಇಲ್ಲವಾಗಿದೆ.

ಎಂಇಎಸ್‌ ಪುಂಡರಿಗೆ ಜಾಮೀನು ಮಂಜೂರಾದರೂ ಎಂಇಎಸ್‌ ಪುಂಡರನ್ನು ಬಿಡುಗಡೆ ಮಾಡಿಲ್ಲ. ಬೆಳಗಾವಿಯ ಖಡೇಬಜಾರ್‌ ಠಾಣೆಯಲ್ಲಿ ದಾಖಲಾಗಿದ್ದ ದೇಶದ್ರೋಹ(Treason) ಪ್ರಕರಣದಲ್ಲಿ ಮಾತ್ರ ಬೆಳಗಾವಿ ಜಿಲ್ಲಾ 8ನೇ ಸತ್ರ ನ್ಯಾಯಾಲಯ ಜಾಮೀನು ನೀಡಿದೆ. ಹೀಗಾಗಿ ಬಂಧಿತ 38 ಎಂಇಎಸ್‌ ಪುಂಡರಿಗೆ ಜಾಮೀನು ಸಿಕ್ಕರೂ ಬಿಡುಗಡೆ ಭಾಗ್ಯ ಇಲ್ಲ. ಮಾರ್ಕೆಟ್‌, ಕ್ಯಾಂಪ್‌ ಪೊಲೀಸ್‌ ಠಾಣೆಯಲ್ಲಿಯೂ ಪ್ರಕರಣ ದಾಖಲಾಗಿರುವುದರಿಂದ ಈ ಪ್ರಕರಣಗಳಿಗೆ ಅವರಿಗೆ ಇನ್ನೂ ಜಾಮೀನು ಸಿಕ್ಕಿಲ್ಲ.

Tap to resize

Latest Videos

Belagavi:MES ಸಂಘಟನೆ ಬ್ಯಾನ್ ಮಾಡುವಂತೆ ಕರ್ನಾಟಕ ಗಡಿ ಹೋರಾಟ ಸಮಿತಿ ಆಗ್ರಹ

ಬೆಳಗಾವಿಯ ಮಾರ್ಕೆಟ್‌ ಠಾಣೆಯಲ್ಲಿ ದಾಖಲಾದ ದೇಶದ್ರೋಹ ಕೇಸ್‌ನಲ್ಲಿ ಇಬ್ಬರಿಗೆ ಧಾರವಾಡ ಹೈಕೋರ್ಟ್‌(Dharwad High Court) ಪೀಠದಲ್ಲಿ ಜಾಮೀನು ಮಂಜೂರಾಗಿದೆ. ಇನ್ನುಳಿದ 36 ಆರೋಪಿಗಳ(Accused) ಜಾಮೀನು ಅರ್ಜಿ ಸೋಮವಾರ ವಿಚಾರಣೆಗೆ ಬರಲಿದೆ.

ಬೆಂಗಳೂರಲ್ಲೆ(Bengaluru) ಶಿವಾಜಿ ಪ್ರತಿಮೆಗೆ(Statue of Shivaji) ಅಪಮಾನ ಖಂಡಿಸಿ ಪ್ರತಿಭಟನೆ ನಡೆಸಲಾಗಿತ್ತು. ಅಧಿವೇಶನದ(Belagavi Assembly Session) ಸಂದರ್ಭದಲ್ಲಿಯೇ ಡಿ.17ರ ರಾತ್ರಿ ಬೆಳಗಾವಿಯಲ್ಲಿ ಪ್ರತಿಭಟನೆ(Protest) ಬಳಿಕ ಕಲ್ಲು ತೂರಾಟ ನಡೆದಿತ್ತು. ಈ ವೇಳೆ ಸರ್ಕಾರಿ ವಾಹನ ಸೇರಿ ಹಲವು ವಾಹನಗಳ ಮೇಲೆ ಕಲ್ಲು ತೂರಾಟ ನಡೆದಿತ್ತು.

Belagavi: ಮಿತಿ ಮೀರಿದ ಉದ್ಧಟತನ: ತಾಕತ್ತಿದ್ರೆ MES ನಿಷೇಧಿಸಿ, ಬೊಮ್ಮಾಯಿ ಸರ್ಕಾರಕ್ಕೆ ಮರಾಠಿಗರ ಸವಾಲ್

ದಿಂಡಿಯಾತ್ರೆ ರದ್ದು

ಮಹಾರಾಷ್ಟ್ರ(Maharashtra) ಶಿವಸೇನೆ(Shiv Sena) ಶನಿವಾರ ಹಮ್ಮಿಕೊಂಡಿದ್ದ ಬೆಳಗಾವಿ ದಿಂಡಿಯಾತ್ರೆ ರದ್ದು ಮಾಡಿದೆ. ಎಂಇಎಸ್‌ ಪುಂಡರ ವಿರುದ್ಧ ದೇಶದ್ರೋಹ ಕೇಸ್‌ ವಾಪಸ್‌ಗೆ ಆಗ್ರಹಿಸಿ ಈ ದಿಂಡಿಯಾತ್ರೆಯನ್ನು ಶಿವಸೇನೆ ಕೊಲ್ಲಾಪುರ ವಿಜಯ ದೇವಣೆ ಹಮ್ಮಿಕೊಂಡಿದ್ದರು. ಆಧರೆ, ಎಂಇಎಸ್‌ ಪುಂಡರ ವಿರುದ್ಧ ದಾಖಲಾದ ದೇಶದ್ರೋಹ ಪ್ರಕರಣದಲ್ಲಿ ಜಾಮೀನು ದೊರೆತ ಹಿನ್ನೆಲೆಯಲ್ಲಿ ಶನಿವಾರ ಪ್ರತಿಭಟನೆ ರದ್ದುಗೊಳಿಸಿದ ಮಹಾರಾಷ್ಟ್ರ ಶಿವಸೇನೆ ನಿರ್ಧರಿಸಿದೆ.

ಎಂಇಎಸ್‌ ನಿಷೇಧ ಕಾಯ್ದೆ ಮಂಡಿಸುವವರಿಗೆ 1 ಕೋಟಿ

ಬೆಳಗಾವಿ: ಮತಾಂತರ ನಿಷೇಧ ಕಾಯ್ದೆ(Conversion Prohibition Act) ಮಂಡನೆ ಮಾಡಿದಂತೆ, ಬೆಳಗಾವಿಯಲ್ಲಿ ಎಂಇಎಸ್‌ ಹಾಗೂ ಶಿವಸೇನೆ ನಿಷೇಧ ಕಾಯ್ದೆ ಮಂಡಿಸುವವರಿಗೆ 1 ಕೋಟಿ ನಗದು ಹಾಗೂ ಕನ್ನಡದ ಭೀಷ್ಮ ಎಂದು ಬಿರುದು ನೀಡಿ ಸತ್ಕರಿಸಲಾಗುವುದು ಎಂದು ಕರ್ನಾಟಕ ನವನಿರ್ಮಾಣ ಸೇನೆಯ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ(Bheemashankar Patil) ಘೋಷಣೆ ಮಾಡಿದ್ದರು.

Belagavi Violence : ಮಹಾ ವಿಧಾನಸಭೆಯಲ್ಲಿ ಗದ್ದಲ ಎಬ್ಬಿಸಿದ ಬೊಮ್ಮಾಯಿ ಹೇಳಿಕೆ,, ಪುಂಡರು ಮುಂಬೈಗೆ!

ಬೆಳಗಾವಿ ಚಳಿಗಾಲದ ಅಧಿವೇಶನ ನಡೆಸುವ ವೇಳೆ ಪುಂಡಾಟಿಕೆ ಮೆರೆದು ಸರ್ಕಾರದ ವಿರುದ್ಧ ಮಹಾಮೇಳಾವ ನಡೆಸುತ್ತಿದ್ದ ಪುಂಡ ಎಂಇಎಸ್‌ ಮುಖಂಡ ದೀಪಕ ದಳವಿಗೆ ಮುಖಕ್ಕೆ ಮಸಿ ಬಳೆದು ಹಿಂಡಲಗಾ ಕಾರಾಗೃಹದಲ್ಲಿದ್ದ ಕರ್ನಾಟಕ ನವ ನಿರ್ಮಾಣ ಸೇನೆಯ ಯುವ ಘಟಕದ ಮುಖಂಡರಿಗೆ ನ್ಯಾಯಾಲಯ ಜಾಮೀನು ನೀಡಿದ ಹಿನ್ನೆಲೆಯಲ್ಲಿ ಮಂಗಳವಾರ ಬಿಡುಗಡೆಗೊಂಡ ತಮ್ಮ ಕಾರ್ಯಕರ್ತರಿಗೆ ಹೊಸ ಬಟ್ಟೆ ನೀಡಿ, ಮೈಸೂರು ಪೇಟ ಧರಿಸಿ ಸತ್ಕರಿಸಿದ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ಕರ್ನಾಟಕ ನವ ನಿರ್ಮಾಣ ಸೇನೆಯ ಯುವ ಮುಖಂಡರಾದ ಸಂಪನ್ನ ಕುಮಾರ ದೇಸಾಯಿ, ಅನಿಲ ದಡ್ಡಿಮಿ, ಸಚಿನ ಮಠದ, ರಾಹುಲ್‌ ಕಲಕಾಮಕರ ಮೇಲೆ ಹಾಕಿರುವ ಕೊಲೆ ಪ್ರಕರಣ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದರು. 
 

click me!