ಜಿಲ್ಲೆಯ ಜೋಯಿಡಾ ತಾಲೂಕಿನ ರಾಮನಗರ ಪೊಲೀಸ್ ಠಾಣೆಯ ಪೊಲೀಸರು ಮಾನಸಿಕ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಠಾಣೆ ಮುಂಭಾಗ ಪೆಟ್ರೋಲ್ ಸುರಿದುಕೊಂಡು ಯುವಕನೋರ್ವ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಉತ್ತರ ಕನ್ನಡ (ಜೂ.14): ಜಿಲ್ಲೆಯ ಜೋಯಿಡಾ ತಾಲೂಕಿನ ರಾಮನಗರ ಪೊಲೀಸ್ ಠಾಣೆಯ ಪೊಲೀಸರು ಮಾನಸಿಕ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಠಾಣೆ ಮುಂಭಾಗ ಪೆಟ್ರೋಲ್ ಸುರಿದುಕೊಂಡು ಯುವಕನೋರ್ವ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ರಾಮನಗರದ ಹನುಮಾನ್ ಗಲ್ಲಿಯ ನಿವಾಸಿ ಭಾಸ್ಕರ್ ಬೋಂಡೆಲ್ಕರ್ (36) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯಾಗಿದ್ದು, ಪೊಲೀಸರ ಕಿರುಕುಳವೇ ತನ್ನ ಆತ್ಮಹತ್ಯೆಯ ಯತ್ನಕ್ಕೆ ಕಾರಣ ಎಂದು ಚಿಕಿತ್ಸೆಗೆ ದಾಖಲಾಗುವ ಮುನ್ನ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾನೆ.
undefined
ರೇಣುಕಾಸ್ವಾಮಿ ಕೊಲೆ ಪ್ರಕರಣ; ಎ7 ಆರೋಪಿ ಅನುಕುಮಾರ ಬಂಧನ ಸುದ್ದಿ ಕೇಳಿ ತಂದೆ ಸಾವು!
ಯುವಕ ಹೇಳುವ ಪ್ರಕಾರ, ನಾವು ಐದು ತಿಂಗಳ ಹಿಂದೆ ಜೂಜಾಟ ಮಾಡುವಾಗ ಪಿಎಸ್ ಐ ದಾಳಿ ಮಾಡಿದ್ರು. ಆ ಸಂದರ್ಭದಲ್ಲಿ 3,60,000 ರೂಪಾಯಿ ನಮ್ಮ ಕಡೆ ಇದ್ವು. ನಮ್ಮ ಕಡೆ ಇದ್ದ ಹಣವನ್ನು ಪಿಎಸ್ಐ ಬಸವರಾಜ್ ವಶಪಡಿಸಿಕೊಂಡ್ರು. ಆದ್ರೆ, ಎಫ್ ಐ ಆರ್ ನಲ್ಲಿ ಕೇವಲ 36,000 ರೂಪಾಯಿ ವಶಪಡಿಸಿಕೊಂಡಿರುವುದಾಗಿ ಹೇಳಿದ್ದಾರೆ. ಉಳಿದ ನಮ್ಮ ಹಣ ಎಲ್ಲಿ ಹೊಯ್ತು ಅಂತಾ ನಾನು ಹೋಗಿ ಕೇಳಿದ್ರೆ ಸರಿಯಾಗಿ ಪ್ರತಿಕ್ರಿಯೆ ಕೊಟ್ಟಿರಲಿಲ್ಲ. ಬಳಿಕ ಎಸ್ ಪಿ ಮತ್ತು ಎಎಸ್ ಪಿ ಯವರಿಗೂ ಈ ಬಗ್ಗೆ ಮನವಿ ಕೊಟ್ಟೆ. ಡಿಎವೈ ಎಸ್ ಪಿ ನನ್ನ ಕಡೆಯಿಂದ ಮನವಿಯನ್ನು ಪಡೆದುಕೊಂಡ್ರು. ಆದ್ರೆ, ಸ್ವಿಕೃತ ಕಾಫಿಯನ್ನ ಕೊಡಿ ಅಂತಾ ಕೇಳಿದ್ರೆ ಕೊಟ್ಟಿರಲಿಲ್ಲ. ಎಷ್ಟೇ ಪ್ರಯತ್ನ ಮಾಡಿದ್ರು ಆ ಹಣದ ಬಗ್ಗೆ ಮಾಹಿತಿಯೇ ಸಿಗಲಿಲ್ಲ. ಬಳಿಕ ನಾನು ಹೋಗುವ ಕೆಲಸದ ಸ್ಥಳದಲ್ಲೂ ಪಿಎಸ್ ಐ ಕಿರುಕಳ ಮಾಡತೊಡಗಿದ್ರು. ಪಿಎಸ್ ಐ ಬಸವರಾಜ ಕಿರುಕುಳಕ್ಕೆ ಬೇಸತ್ತು ನಾನು ರಾಮನಗರದಲ್ಲಿನ ಕೆಲಸ ಬಿಟ್ಟು ದಾಂಡೇಲಿಯಲ್ಲಿ ಕೆಲಸಕ್ಕೆ ಸೇರ್ಕೊಂಡೆ
ನಿನ್ನೆ ನಮ್ಮ ಸಂಬಂಧಿಯ ಜಾಗದ ಸಮಸ್ಯೆಯ ಕುರಿತ ಮಾತನಾಡಲು ಠಾಣೆಗೆ ಹೊಗಿದ್ದೆ. ಆ ಸಂದರ್ಭದಲ್ಲಿ ಪೊಲೀಸರು ಸರಿಯಾಗಿ ಸ್ಪಂದಿಸಲಿಲ್ಲ.ನನ್ನ ಕಡೆಯಿದ್ದ ಮೊಬೈಲ್ ಕಿತ್ಕೊಂಡು ಎಲ್ಲಾ ದಾಖಲೆಗಳನ್ನು ಡಿಲೀಟ್ ಮಾಡಿದ್ರು. ಈ ಬಗ್ಗೆ ನಾನು ಎಸ್ ಪಿ ಯವರಿಗೆ ಕರೆ ಮಾಡಿದ್ದೆ. ನನಗ್ಯಾಕೆ ಕರೆ ಮಾಡ್ತಿಯಾ ಪಿಎಸ್ ಐ ಹತ್ರಾನೆ ಬಗೆಹರಿಸ್ಕೊ ಅಂತಾ ಹೇಳಿದ್ರು. ಯಾರ ಕಡೆಯಿಂದಲೂ ನನಗೆ ನ್ಯಾಯ ಸಿಗುತ್ತಿಲ್ಲ. ಪೊಲೀಸರ ನಿರಂತರ ದೌರ್ಜನ್ಯಕ್ಕೆ ಬೇಸತ್ತು ನಾನು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದೆ ಎಂದು ಭಾಸ್ಕರ್ ತನ್ನ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
'ನಮ್ಮದೇ ಸರ್ಕಾರ ಇದ್ರೂ ಅಧಿಕಾರಿಗಳು ಮಾತು ಕೇಳ್ತಿಲ್ಲ': ಕಾರವಾರ ಶಾಸಕ ಕಿಡಿ
ಆದರೆ, ಪೊಲೀಸ್ ಅಧಿಕಾರಿಗಳು ಮಾತ್ರ ಭಾಸ್ಕರ್ ಆರೋಪವನ್ನು ಅಲ್ಲಗಳೆದಿದ್ಧಾರೆ. ನಿನ್ನೆ ದಿನ ಜಮೀನು ವಿಚಾರದಲ್ಲಿ ಮದ್ಯ ಸೇವಿಸಿ ಬೈಕ್ ನಲ್ಲಿ ಠಾಣೆಗೆ ತೆರಳಿದ್ದ ಭಾಸ್ಕರ್, ಪೊಲೀಸರ ಜತೆ ವಾಗ್ವಾದಕ್ಕಿಳಿದ್ದ. ಮದ್ಯ ಸೇವಿಸಿದ್ದರಿಂದ ಬೈಕ್ ಠಾಣೆಯಲ್ಲಿ ಬಿಟ್ಟು ಹೋಗುವಂತೆ ಪಿ.ಎಸ್.ಐ. ಕೃಷ್ಣ ಸೂಚಿಸಿದ್ದರು. ಆದರೆ, ತನಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಮದ್ಯದ ಅಮಲಿನಲ್ಲಿ ಪೆಟ್ರೋಲ್ ಸುರಿದುಕೊಂಡು ಭಾಸ್ಕರ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಜೂಜಾಟದಲ್ಲಿ ವಶಪಡಿಸಿಕೊಂಡ ಹಣದ ದಾಖಲೆಯೂ ಇದೆ. ಆತನ ಆರೋಪ ಸುಳ್ಳು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಟಿ. ಜಯಕುಮಾರ್ ಮಾಹಿತಿ ನೀಡಿದ್ದಾರೆ.