ಪ್ರವಾಸದ ವೇಳೆ ಶಿಷ್ಟಚಾರ ಉಲ್ಲಂಘನೆ: ತುಮಕೂರು ಡಿಸಿ, ಸಿಇಒ‌ ವಿರುದ್ಧ ಕೇಂದ್ರ ಸಚಿವ ವಿ.ಸೋಮಣ್ಣ ಗರಂ

By Ravi Janekal  |  First Published Jun 14, 2024, 9:24 PM IST

ಚಿನ್ನೇನಹಳ್ಳಿಯಲ್ಲಿ ಕಲುಷಿತ ನೀರು ಸೇವೆನೆಯಿಂದ ವಾಂತಿ-ಭೇದಿಯಿಂದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯ ವಿಚಾರಿಸುವ ವೇಳೆ ಜಿಲ್ಲಾ ಪಂಚಾಯಿತಿ ಸಿಇಓ ಮತ್ತು ಜಿಲ್ಲಾಧಿಕಾರಿಗಳು ಗೈರಾಗಿರುವುದಕ್ಕೆ ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಗರಂ ಆಗಿ ನಾನು ಸಚಿವನಲ್ಲವೇ ಎಂದು ತರಾಟೆ ತೆಗೆದುಕೊಂಡ ಘಟನೆ ನಡೆಯಿತು.


ತುಮಕೂರು (ಜೂ.14) : ಚಿನ್ನೇನಹಳ್ಳಿಯಲ್ಲಿ ಕಲುಷಿತ ನೀರು ಸೇವೆನೆಯಿಂದ ವಾಂತಿ-ಭೇದಿಯಿಂದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯ ವಿಚಾರಿಸುವ ವೇಳೆ ಜಿಲ್ಲಾ ಪಂಚಾಯಿತಿ ಸಿಇಓ ಮತ್ತು ಜಿಲ್ಲಾಧಿಕಾರಿಗಳು ಗೈರಾಗಿರುವುದಕ್ಕೆ ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಗರಂ ಆಗಿ ನಾನು ಸಚಿವನಲ್ಲವೇ ಎಂದು ತರಾಟೆ ತೆಗೆದುಕೊಂಡ ಘಟನೆ ನಡೆಯಿತು.

ಕೇಂದ್ರ ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರ ಮೊದಲ ಬಾರಿಗೆ ತುಮಕೂರಿಗೆ ಆಗಮಿಸಿದ ವಿ.ಸೋಮಣ್ಣ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ನಂತರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದರು.

Tap to resize

Latest Videos

undefined

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾಗಲಿ, ಜಿ.ಪಂ. ಸಿಇಓ ಆಗಲಿ ಅಥವಾ ಆರ್‍ಡಿಪಿಆರ್ ಇಲಾಖೆಯ ಯಾವೋಬ್ಬ ಅಧಿಕಾರಿಗಳು ಇಲ್ಲದ್ದನ್ನು ಕಂಡು ಸಿಟ್ಟಾದ ಸೋಮಣ್ಣ ಜಿಲ್ಲಾ ಪಂಚಾಯತಿ ಸಿಇಓ ಜಿ.ಪ್ರಭು ಮತ್ತು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರಿಗೆ ತರಾಟೆಗೆ ತೆಗೆದುಕೊಂಡರು.

ಜಿಲ್ಲಾ ಪಂಚಾಯತಿ ಸಿಇಓರವರಿಗೆ ಪೋನ್ ಮಾಡಿ 'ಇಲ್ಲಿ ಯಾವೋನು ಗತಿ ಇಲ್ಲ, ಡಿಎಚ್‍ಓ, ಡಿಎಸ್ ಗೆ ಏನು ಸಂಬಂಧ ಒಬ್ಬ ಅಧಿಕಾರಿ ಇಲ್ಲ ನಿಮ್ಮೋನು, ನೀರು ಕೋಟ್ಟಿರೋದು ಆರ್‍ಡಿಪಿಆರ್ ನೋರು, ನಾನು ಚಿನ್ನೇನಹಳ್ಳಿಗೆ ಬರುತ್ತೇನೆ ಅಂತ ಹೇಳಿಲ್ಲ, ನನ್ನ ಟೂರ್ ಪ್ರೋಗ್ರಾಂ ಇರೋದು ಜನರಲ್ ಆಸ್ಪತ್ರೆ ಭೇಟಿ ಅಂತ, ಯಾರೋ ಬರ್ತಾರೆ ಅಂತ ನನಗೆ ಮಕ್ಮಲ್ ಟೋಪಿ ಹಾಕೋಕೆ ಆಗಲ್ಲ, ನಾನು ಆಸ್ಪತ್ರೆಯಲ್ಲಿದ್ದೇನೆ, ನೀನು ಇಲ್ಲ, ನಿಮ್ಮ ಅಧಿಕಾರಿಗಳೂ ಇಲ್ಲ, ಇದು ಒಳ್ಳೆಯದಲ್ಲ, ಜನಗಳಿಗೆ ಈ ರೀತಿ ಹೂ ಇಡಲು ಹೋದರೆ ಜನಗಳು ಏನೇನು ಇಡಬೇಕೋ ಅದನ್ನೆಲ್ಲಾ ಇಡ್ತಾರೆ ಎಂದು ಸಿಇಓಗೆ ತರಾಟೆ ತೆಗೆದುಕೊಂಡರು.

ಶಾರ್ಟ್ ಸೆರ್ಕ್ಯೂಟ್ ಪ್ರಕರಣ; ಬಾಲಕಿಯರ ವಸತಿ ಶಾಲೆಗೆ ಭೇಟಿ ನೀಡಿದ ಗೃಹ ಸಚಿವ ಪರಮೇಶ್ವರ್

ನೀವು ಯ್ಯಾವ ಬ್ಯಾಕ್‍ಗ್ರೌಂಡ್‍ನಲ್ಲಿ ಬಂದಿದ್ದೀರಿ ಅರ್ಥ ಮಾಡಿಕೊಳ್ಳಿ, ಹೌದಪ್ಪ ಮಠಕ್ಕೇ ಹೋಗಿ ಬಂದೆ ಒಬ್ಬನೂ ಗತಿ ಇಲ್ಲ, ಡೀಸಿನೂ ಇಲ್ಲ, ಯಾವುದೋ ಕಾಲದಲ್ಲಿ ಇದ್ದೀರಿ ಎಂದು ಸಿಇಓ ಪ್ರಭು ಅವರಿಗೆ ಕೇಂದ್ರ ಸಚಿವ ವಿ.ಸೋಮಣ್ಣ ತರಾಟೆ ತೆಗೆದುಕೊಂಡರು.

ಜಿಲ್ಲಾಧಿಕಾರಿಗಳಿಗೆ ಅಮ್ಮ ನಿಮ್ಮ ಅಧಿಕಾರಿಗಳು ಯಾರೂ ಇಲ್ಲ, ಜೀವಕ್ಕಿಂತ ಗಿಡ ನೆಡೋದು ದೊಡ್ಡದಾ! ನೀವೇನಂದ್ರಿ ಆಸ್ಪತ್ರೆಗೆ ಬಂದು ಹೋಗ್ತೀನಿ ಅಂದ್ರಿ ಹಂಗೆ ಮಾಡಿ ಅಂದೆ, ಕಾಂಟ್ರರ್ವಸಿ ಮಾಡಿಕೋ ಬೇಡಿ, ನಿಮ್ಮಲ್ಲರಿಗಿಂತ ಜಾಸ್ತಿ ಸರ್ವಿಸ್ ಮಾಡಿದ್ದೀನಮ್ಮ, ಈ ಸೋಮಣ್ಣ ಬಂದ್ರೆ ಒಬ್ಬ ಗತಿ ಇಲ್ಲ, ನಾನೇ ಡೀಸಿಯಾಗಿ, ನೀವೇ ಸೋಮಣ್ಣ ಆಗಿದ್ರೆ ಏನು ಮಾಡ್ತಿದ್ರಿ.

ಮಧ್ಯಾಹ್ನದ ಬಿಸಿಯೂಟ ಸೇವಿಸಿ 50ಕ್ಕೂ ಹೆಚ್ಚು ಮಕ್ಕಳು ತೀವ್ರ ಅಸ್ವಸ್ಥ!

ಆ ಸಿಇಓ ಪ್ರಭುಗೆ ನಿನ್ನೆ ಸಂಬಂಧ ಪಟ್ಟ ಅಧಿಕಾರಿಗಳನ್ನು ಕಳಿಸಿ ಅಂದ್ರೆ ಒಬ್ಬನೂ ಇಲ್ಲ, ನಾನು ಚಿನ್ನೇನಹಳ್ಳಿಗೆ ಬರುತ್ತೇನೆ ಅಂತ ಹೇಳಿಲ್ಲ, ಆಸ್ಪತ್ರೆಗೆ ಬರುತ್ತೇನೆ ಅಂತ ಹೇಳಿರೋದು, ನನ್ನ ಉಪಸ್ಥಿತಿಯಲ್ಲಿ ಇರಬೇಕೋ ಬ್ಯಾಡವೋ, ನಾನು ಮಿನಿಸ್ಟರ್ ಅಲ್ವ, ಸೆಂಟ್ರಲ್ ಗೌರ್ನಮೆಂಟ್ ಗೆ ಕನೆಕ್ಷನ್ ಇಲ್ಲ ಅಂತೀರ, ಏನು ಅದರ ಅರ್ಥ, ನಿನ್ನೆ ಏನಂದ್ರಿ ಬಂದು ಹೋಗುತ್ತೇನೆ ಅಂದ್ರಿ, ಅಲ್ಲಾ ನಿಮಗೆ ಎಷ್ಟು ಭಯ ಇರಬಹುದು, ನಾನೇದರೂ ರಿಪೋರ್ಟ್ ಹಾಕಿದರೆ ನಿಮಗೇನಾಗಬಹುದು ಅರ್ಥ ಆಗುತ್ತಾ ನಿಮಗೆ , ಮತ್ತೆ ನಿವ್ಯಾಕೆ ಬರಲಿಲ್ಲ ಬರುತ್ತೀನಿ ಇಲ್ಲಿಗೆ ಅಂತ, ಹೇಳಿದ್ರೋ ಇಲ್ವೋ, ಬರಬೇಕಾದ ಡ್ಯೂಟಿನೋ ಅಲ್ವೋ, ಸ್ಟೇಟ್ ಗೌರ್ನಮೆಂಟಿಗೆ ಮಾತ್ರ ಸೀಮಿತನಾ, ಸೆಂಟ್ರಲ್ ಗೌರ್ನಮೆಂಟಿಗೆ ಏನೇನೂ ಅಲ್ವ ತಾಯಿ, ಸಾಯಂಕಾಲದೊಳಗೆ ರಿಪೋರ್ಟ್ ಕಳಿಸಿ ಏನಾಗಿದೆ ಅಂತ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರಿಗೆ ವಿ.ಸೋಮಣ್ಣ ತರಾಟೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಬಿ.ಸುರೇಶ್‍ಗೌಡ, ಎಂಎಲ್‍ಸಿ ಚಿದಾನಂದಗೌಡ, ಮಾಜಿ ಸಚಿವ ಸೊಗಡು ಶಿವಣ್ಣ ಮುಂತಾದವರಿದ್ದರು

click me!