ಯುವಜನೋತ್ಸವದ ನೆಪದಲ್ಲಿ ಎ ಸಿ ಗ್ರೇಡ್ ಅಧಿಕಾರಿಗಳಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ಮುಂಖಡ, ಪಿ.ಎಚ್. ನೀರಲಕೇರಿ ಅವರು ಗಂಬೀರ ಆರೋಪ ಮಾಡಿದ್ದಾರೆ. ಇದೇ ಜನವರಿ 12ರಿಂದ 16 ರವರೆಗೆ ಹುಬ್ಬಳ್ಳಿ-ಧಾರವಾಡದಲ್ಲಿ ಕೇಂದ್ರ ಸರ್ಕಾರದ ನೆರವಿನೊಂದಿಗೆ ರಾಷ್ಟ್ರೀಯ ಯುವಜನ ಉತ್ಸವ ನಡೆಯಲಿದೆ.
ಧಾರವಾಡ (ಜ.8): ಯುವಜನೋತ್ಸವದ ನೆಪದಲ್ಲಿ ಎ ಸಿ ಗ್ರೇಡ್ ಅಧಿಕಾರಿಗಳಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ಮುಂಖಡ, ಪಿ.ಎಚ್. ನೀರಲಕೇರಿ ಅವರು ಗಂಬೀರ ಆರೋಪ ಮಾಡಿದ್ದಾರೆ. ಇದೇ ಜನವರಿ 12ರಿಂದ 16 ರವರೆಗೆ ಹುಬ್ಬಳ್ಳಿ-ಧಾರವಾಡದಲ್ಲಿ ಕೇಂದ್ರ ಸರ್ಕಾರದ ನೆರವಿನೊಂದಿಗೆ ರಾಷ್ಟ್ರೀಯ ಯುವಜನ ಉತ್ಸವವನ್ನು ಆಯೋಜಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ಇದಕ್ಕಾಗಿ ₹20 ಕೋಟಿ ಖರ್ಚು ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ. ಜೊತೆಗೆ ಯುವಜನರಿಗೋಸ್ಕರ ಇಂತಹ ಕಾರ್ಯಕ್ರಮಗಳನ್ನು ಮಾಡುವುದನ್ನು ನಾನು ಸ್ವಾಗತಿಸುತ್ತೇನೆ. ಆದರೆ, ಇದೇ ಯುವಜನರಿಗೆ ಉದ್ಯೋಗ ಕೊಡುವ ನಿಮ್ಮ ಚಿಂತನೆ ಎಲ್ಲಿದೆ ? ಹುಬ್ಬಳ್ಳಿ-ಧಾರವಾಡ ತುಂಬೆಲ್ಲ ಆವರಿಸಿರುವ ಧೂಳು ಜನ ಜೀವನವನದ ಆರೋಗ್ಯ ಹಾಳು ಮಾಡುತ್ತಿದೆ. ಕುಡಿಯಲು ನೀರಿನ ವ್ಯವಸ್ಥೆ ಒದಗಿಸಲು ಸಾಧ್ಯವಾಗದಷ್ಟು ಹಾಳಾಗಿದೆ. ಇದರ ಬಗ್ಗೆ ಶಾಸಕರಾದ ಅರವಿಂದ ಬೆಲ್ಲದ ಆಗಲಿ, ಕಿಂಚಿತ್ತೂ ಕಾಳಜಿ ಇಲ್ಲ. ಇಂತಹವರು ಇದೀಗ ಯುವಜನರ ಉತ್ಸವದಲ್ಲಿ ಪ್ರಚಾರ ಪಡೆಯಲು ನೋಡುತ್ತಿದ್ದಾರೆ.
ಯುವಜನೋತ್ಸವ ಹೆಸರಲ್ಲಿ ಕರ್ಣಾಟಕ ವಿಶ್ವವಿದ್ಯಾಲಯದ ಸಾವಿರಾರು ವಿದ್ಯಾರ್ಥಿಗಳನ್ನು ವಸತಿನಿಲಯದಿಂದ ಹೊರಹಾಕಿ ಯುವಜನೋತ್ಸವ ಆಯೋಜಿಸುತ್ತಿರುವುದು ಯಾವ ಪುರುಷಾರ್ಥಕ್ಕಾಗಿ? ಅಲ್ಲದೆ ಜಿಲ್ಲೆಯ ಎಲ್ಲಾ ತಾಲೂಕು ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಕಡ್ಡಾಯ ಹಾಜರಾತಿ ಮಾಡಿದ್ದು ಉದ್ದೇಶ ಏತಕ್ಕೆ ನಮ್ಮಲ್ಲಿರುವ ಮಕ್ಕಳನ್ನ ಹೊರ ಹಾಕಿ ಯಾಕೆ ಮಾಡಬೇಕು ಯುವಜನೋತ್ಸವ ಎಂದು ಟ್ವಿಟ್ ಮೂಲಕ್ ಆಕ್ರೋಶ ಹೊರ ಹಾಕಿದ್ದಾರೆ.
National Youth Festival 2023: ಯವಜನೋತ್ಸವ ವೆಬ್ ಪೋರ್ಟಲ್‌ಗೆ ಚಾಲನೆ
ಯುವಜನೋತ್ಸವ ಹೆಸರಿನಲ್ಲಿ ₹20 ಕೋಟಿ ಅನುದಾನ ಬಳಸಲಾಗುತ್ತಿದೆ ಕೇಂದ್ರ ಸರಕಾರದಿಂದ 10 ಕೋಟಿ, ರಾಜ್ಯ ಸರಕಾರದಿಂದ 10 ಕೋಟಿ ಅನುದಾನ ಬಿಡುಗಡೆ ಯಾದ್ರು ಜಿಲ್ಲೆಯಲ್ಲಿ ಇಬ್ಬರು ಎ, ಸಿ ಗ್ರೇಡ್ ಅಧಿಕಾರಿಗಳು, ವ್ಯಾಪಾರಸ್ಥರ, ಉದ್ಯಮಿಗಳ, ಕಂಟ್ರಾಕ್ಟರ್ ಗಳಿಂದ ಲಕ್ಷಾಂತರ ಚಂದಾ ವಸೂಲಿ ಭರದಿಂದ ನಡೆಯುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ... ಮಾನ್ಯ ಜಿಲ್ಲಾಧಿಕಾರಿಗಳ ಗಮನಕ್ಕೆ ಇದೆಯೋ ಇಲ್ಲವೋ ಗೊತ್ತಿಲ್ಲ,ಆದರೆ ಅಲ್ಲಿ ಹಣ ಸಂಗ್ರಹ ಮಾಡುತ್ತಿರುವುದು ಸತ್ಯ ಇದನ್ನ ಹಿರಿಯ ಅಧಿಕಾರಿಗಳು ಪರಿಶಿಲನೆ ಮಾಡಬೇಕು ಎಂದು ಪಿ ಎಚ್ ನೀರಲಕೇರಿ ಒತ್ತಾಯ ಮಾಡಿದ್ದಾರೆ.
National Youth Festival 2023: ಯುವಜನೋತ್ಸವ: 4 ವರ್ಷಗಳ ಬಳಿಕ ಮತ್ತೆ ಶೃಂಗಾರಗೊಳ್ಳುತ್ತಿದೆ ಧಾರವಾಡ!
ಅತಿಥಿಗಳಿಗೆ ಕೃಷಿ ವಿವಿ ಸಾಧನೆ ತಿಳಿಸಲು ಕ್ರಮ: ಯುವಜನೋತ್ಸವಕ್ಕೆ ಆಗಮಿಸುವ ಸುಮಾರು 3000ಕ್ಕೂ ಅಧಿಕ ಯುವ ಕಲಾವಿದರು ಹಾಗೂ ಅಧಿಕಾರಿಗಳು ಕೃಷಿ ವಿವಿಯ ಹಾಸ್ಟೆಲ್‌ಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಅವರಿಗೆ ವಿವಿ ಸಾಧನೆ, ಜಿಲ್ಲೆಯ ವಿಶೇಷತೆ ಹಾಗೂ ಉತ್ತರ ಕರ್ನಾಟಕದ ವಿಶೇಷಣ ಪರಿಚಯಿಸಲು ಕ್ರಮವಹಿಸುವುದಾಗಿ ಶಾಸಕ ಅಮೃತ ದೇಸಾಯಿ ಹೇಳಿದರು. ಶುಕ್ರವಾರ ಕೃಷಿ ವಿಶ್ವವಿದ್ಯಾಲಯದ ಅಧಿಕಾರಿಗಳು ಮತ್ತು ವಿವಿಧ ಸಮಿತಿ ಸದಸ್ಯರೊಂದಿಗೆ ಸಿದ್ಧತೆಗಳ ಕುರಿತು ಸಭೆ ನಡೆಸಿ ಮಾತನಾಡಿದರು.
ವಿವಿ ಅಧಿಕಾರಿಗಳು ಮತ್ತು ಸಿಬ್ಬಂದಿ ಜ. 12ರಿಂದ 16ರ ವೆರೆಗೆ ಯುವಜನೋತ್ಸವಕ್ಕೆ ತಮ್ಮ ಸಮಯ ಮೀಸಲಿಟ್ಟು ಕೆಲಸ ಮಾಡಬೇಕು. ಹೀಗಾಗಲೇ ಜ. 7ರಿಂದ 17ರ ವರೆಗೆ ವಿವಿ ಆವರಣದ ಎಲ್ಲ ವಿಭಾಗಗಳಿಗೆ ರಜೆ ಘೋಷಿಸಲಾಗಿದೆ. ವಸತಿ ನಿಲಯಗಳ ದುರಸ್ತಿ ಮತ್ತು ವಿವಿ ಆವರಣದಲ್ಲಿ . 160 ಲಕ್ಷ ವೆಚ್ಚದಲ್ಲಿ ರಸ್ತೆ ಕಾಮಗಾರಿಯನ್ನು ಸರ್ಕಾರ ಕೈಗೊಂಡಿದೆ ಎಂದರು.
10 ಸಾವಿರಕ್ಕೂ ಹೆಚ್ಚು ಅತಿಥಿಗಳು ವಿವಿ ಕ್ಯಾಂಪಸ್‌ಗೆ ಭೇಟಿ ನೀಡಲಿದ್ದಾರೆ. ರಾಷ್ಟ್ರಮಟ್ಟದಲ್ಲಿ ಪ್ರಮುಖ ಸಂಶೋಧನೆಗಳ ಮೂಲಕ ಗುರುತಿಸಿಕೊಂಡಿರುವ ಕೃಷಿ ವಿವಿ ಮತ್ತು ಜಿಲ್ಲೆಯ ಕೃಷಿ ಪದ್ಧತಿಯನ್ನು ಅತಿಥಿಗಳಿಗೆ ಪರಿಚಯಿಸಬೇಕು. ಸಿರಿಧಾನ್ಯಗಳ ಮಹತ್ವ ಪ್ರಚುರಪಡಿಸಲು ವಿವಿ ಮುಖ್ಯ ದ್ವಾರದ ಹತ್ತಿರ 20ಕ್ಕೂ ಹೆಚ್ಚು ಮಳಿಗೆ ಸ್ಥಾಪಿಸಿ, ಸಿರಿಧಾನ್ಯಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದ ಎಂದು ಶಾಸಕರು ತಿಳಿಸಿದರು.
ಕುಲಪತಿ ಡಾ. ಪಿ.ಎಲ್. ಪಾಟೀಲ ಮಾತನಾಡಿ, ಟೆಕ್ನಾಲಜಿಕಲ್, ಶೆಡ್‌ನಲ್ಲಿ 7 ಸಾವಿರ ಶಿಬಿರಾರ್ಥಿ, 2 ಸಾವಿರ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಬೆಳಗೆ ಉಪಾಹಾರ ಮತ್ತು ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿದೆ. ಜ. 15ರಂದು 7 ಸಾವಿರ ಜನರಿಗೆ ಯೋಗಾಥಾನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.