ಅರಣ್ಯವಾಸಿಗಳ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಅರಣ್ಯ ಅತಿಕ್ರಮಣದಾರರಿಂದ ನಗರದಲ್ಲಿ ಅರ್ಧ ದಿನದ ಸ್ವಪ್ರೇರಣೆ ಶಿರಸಿ ಬಂದ್ ಶನಿವಾರ ನಡೆಯಿತು. ಮೆರವಣಿಗೆ, ತಾಲೂಕು ಕಚೇರಿಗೆ ಮುತ್ತಿಗೆ ಹಾಗೂ ಟೈರ್ ಸುಡುವ ಮೂಲಕ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಶಿರಸಿ (ಜ.8) : ಅರಣ್ಯವಾಸಿಗಳ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಅರಣ್ಯ ಅತಿಕ್ರಮಣದಾರರಿಂದ ನಗರದಲ್ಲಿ ಅರ್ಧ ದಿನದ ಸ್ವಪ್ರೇರಣೆ ಶಿರಸಿ ಬಂದ್ ಶನಿವಾರ ನಡೆಯಿತು. ಮೆರವಣಿಗೆ, ತಾಲೂಕು ಕಚೇರಿಗೆ ಮುತ್ತಿಗೆ ಹಾಗೂ ಟೈರ್ ಸುಡುವ ಮೂಲಕ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ(Struggle for land rights) ವೇದಿಕೆ ಆಶ್ರಯದಲ್ಲಿ ಜಿಲ್ಲಾಧ್ಯಕ್ಷ ರವೀಂದ್ರ ನಾಯ್ಕ(Ravindra naik) ನೇತೃತ್ವದಲ್ಲಿ ವಿವಿಧ ಸಂಘಟನೆಯ ಮುಖಂಡರ ಉಪಸ್ಥಿತಿಯಲ್ಲಿ ಪ್ರತಿಭಟನೆ ನಡೆಯಿತು. ಸುಪ್ರೀಂ ಕೋರ್ಟಿ(Supreme court)ನಲ್ಲಿ ಅರಣ್ಯವಾಸಿಗಳ ಪರವಾಗಿ ತಿದ್ದುಪಡಿ ಪ್ರಮಾಣಪತ್ರ ಸಲ್ಲಿಸಲು ಹಾಗೂ ಕಾನೂನು ಬಾಹಿರ ಅಸಮರ್ಪಕ ಜಿಪಿಎಸ್ ಸರ್ವೇ ಆಧಾರದ ಮೇಲೆ ಒಕ್ಕಲೆಬ್ಬಿಸುವ ಪ್ರಕ್ರಿಯೆ ಸ್ಥಗಿತಗೊಳಿಸುವ ಆದೇಶಕ್ಕೆ ಅಗ್ರಹಿಸಿ ಹಾಗೂ ಅರಣ್ಯ ಸಿಬ್ಬಂದಿ ದೌರ್ಜನ್ಯ, ಕಿರುಕುಳ ಖಂಡಿಸಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
undefined
ಜ.15ರಂದು ಮುಖ್ಯಮಂತ್ರಿಗೆ ಕಪ್ಪು ಬಾವುಟ ಪ್ರದರ್ಶನ: ಅರಣ್ಯ ಅತಿಕ್ರಮಣದಾರರ ಎಚ್ಚರಿಕೆ
ಅರಣ್ಯ ಅಧಿಕಾರಿಗಳಿಗೆ ತರಾಟೆ:
ತಹಶೀಲ್ದಾರ ಕಚೇರಿ ಎದುರು ಧರಣಿ ಸಂದರ್ಭದಲ್ಲಿ ಹಿರಿಯ ಅರಣ್ಯ ಅಧಿಕಾರಿಗಳ ಆಗಮನಕ್ಕೆ ಅತಿಕ್ರಮಣದಾರರು ಪಟ್ಟು ಹಿಡಿದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಪ್ರಭುಲಿಂಗ, ಅಸಮರ್ಪಕ ಜಿಪಿಎಸ್ ಮೇಲ್ಮನವಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಸ್ವೀಕರಿಸಲು ಸ್ಥಳದಲ್ಲಿಯೇ ಆದೇಶ, ಅರಣ್ಯ ಸಿಬ್ಬಂದಿಯಿಂದ ದೌರ್ಜನ್ಯ ನಿಯಂತ್ರಿಸಲು ಕ್ರಮ ಹಾಗೂ ಜಿಪಿಎಸ್‌ಗೆ ಸಂಬಂಧಿಸಿದ ಹೋರಾಟಗಾರರ ಪತ್ರಕ್ಕೆ ಒಂದು ವಾರದಲ್ಲಿ ಉತ್ತರಿಸುವ ಆಶ್ವಾಸನೆ ನೀಡಿದರು. ಈ ಸಂದರ್ಭದಲ್ಲಿ ಡಿಎಫ್‌ಒ ಅಜ್ಜಯ್ಯ, ಹೆಚ್ಚುವರಿ ಎಸ್‌ಪಿ ಜಯಕುಮಾರ, ಡಿವೈಎಸ್‌ಪಿ ಡಿ.ಎಲ್. ಗಣೇಶ್, ತಹಶೀಲ್ದಾರ ಶ್ರೀಧರ ಮುಂದಲಮನಿ ಇತರರಿದ್ದರು.
ಮುಂದಿನ ಒಂದು ವಾರದಲ್ಲಿ ಅರಣ್ಯವಾಸಿಗಳ ಸಮಸ್ಯೆಗೆ ಪರಿಹಾರ ಸಿಗದಿದ್ದಲ್ಲಿ ಜ.15ರಂದು ಶಿರಸಿಗೆ ಆಗಮಿಸುವ ಮುಖ್ಯಮಂತ್ರಿ ವಿರುದ್ಧ ಭಿನ್ನ ರೀತಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಎಚ್ಚರಿಕೆ ನೀಡಿದರು.
ಪ್ರತಿಭಟನಾ ಸಭೆ:
ಶಿರಸಿ ಹಳೆ ಬಸ್ ನಿಲ್ದಾಣ ಸರ್ಕಲ್(Sirsi old bustand circle)ನಲ್ಲಿ ಜರುಗಿದ ಪ್ರತಿಭಟನೆ(Protest)ಯ ಸಭೆಯನ್ನು ಉದ್ದೇಶಿಸಿ ಹೋರಾಟಗಾರರಾದ ಬಾಲಚಂದ್ರ ಶೆಟ್ಟಿಅಂಕೋಲಾ, ರೈತ ಮುಖಂಡ ಚಿದಾನಂದ್ ಹರಿಜನ(Chidanad harijana), ರಾಘವೇಂದ್ರ ನಾಯ್ಕ ಬೆಳಲೆ, ಪ್ರದೀಪ ಶೆಟ್ಟಿ, ಸುರೇಶ್ ಮೇಸ್ತ ಹೊನ್ನಾವರ, ರಮಾನಂದ ನಾಯ್ಕ ಅಚಿವೆ, ಅಣ್ಣಪ್ಪ ಕಣ್ಣಿಗೇರಿ, ಸವಿತಾ ಸಮಾಜ ಅಧ್ಯಕ್ಷ ಗೋಪಾಲ ವಿ. ಕೊಂಕಲ…, ಸ್ವಾತಿ ಜೈನ್, ರಿಕ್ಷಾ ಯೂನಿಯನ್ ಅಧ್ಯಕ್ಷ ವಿಶ್ವನಾಥ ಆಚಾರಿ, ವೆಂಕಟೇಶ್ ಬೈಂದೂರು ಮುಂತಾದವರು ಮಾತನಾಡಿದರು.
ಶಿರಸಿ: ಸಹಸ್ರಲಿಂಗದಲ್ಲಿ ಮುಸ್ಲಿಂ ದಂಪತಿಯಿಂದ ಚಿಕನ್ ಬಿರಿಯಾನಿ ಸೇವನೆ..!
ಮೆರವಣಿಗೆಯ ನೇತೃತ್ವವನ್ನು ಲಕ್ಷ್ಮಣ ಮಾಳ್ಳಕ್ಕನವರ, ಶಾರಂಬಿ ಬೆಟ್ಕುಳಿ, ಯಾಕೂಬ್ ಬೆಟ್ಟುಳಿ, ಭೀಮ್ ವಾಲ್ಮೀಕಿ, ಶಿವಾನಂದ ಜೋಗಿ, ರಾಘು ನಾಯ್ಕ ಕವಂಚೂರು, ಹರಿಹರ ನಾಯ್ಕ ಓಂಕಾರ, ಸೀತಾರಾಮ ಗೌಡ ಹುಕ್ಕಳಿ, ನೆಹರೂ ನಾಯ್ಕ, ದಿನೇಶ್ ನಾಯ್ಕ ಬೇಡ್ಕಣಿ, ಮೀರ್‌ಸಾಬ್ ಕಸ್ತೂರಬಾನಗರ, ಸುನೀಲ್ ನಾಯ್ಕ ಸಿದ್ಧಾಪುರ, ಸತೀಶ್ ನಾಯ್ಕ ಶೇಲೂರು, ಶೇಖಯ್ಯ ಹಿರೇಮಠ ಮುಂಡಗೋಡ, ದಾವುದ್ ಹೊನ್ನಾವರ, ರಜಾಕ್ ಸಾಬ್ ಮುಂತಾದವರು ವಹಿಸಿದ್ದರು.